ಲೀಲಾವತಿ 
ಸಿನಿಮಾ ಸುದ್ದಿ

ಕಾಲು ಜಾರಿ ಬಿದ್ದು ಹಿರಿಯ ನಟಿ ಲೀಲಾವತಿ ಸೊಂಟದ ಮೂಳೆಗೆ ಗಾಯ; ತಿಂಗಳ ಕಾಲ ವಿಶ್ರಾಂತಿಗೆ ಸೂಚನೆ

ಹಿರಿಯ ಕಲಾವಿದೆ ಲೀಲಾವತಿ ಕಾಲು ಜಾರಿ ಸೊಂಟದ ಮೂಳೆಗೆ ಗಾಯ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಉತ್ತರ ತಾಲೂಕಿನ ಸೋಲದೇವನಹಳ್ಳಿ ತಮ್ಮ ನಿವಾಸದ ತೋಟದ ಮನೆಯಲ್ಲಿ ಈ ಘಟನೆ ನಡೆದಿದೆ. 

ನೆಲಮಂಗಲ: ಹಿರಿಯ ಕಲಾವಿದೆ ಲೀಲಾವತಿ ಕಾಲು ಜಾರಿ ಸೊಂಟದ ಮೂಳೆಗೆ ಗಾಯ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಉತ್ತರ ತಾಲೂಕಿನ ಸೋಲದೇವನಹಳ್ಳಿ ತಮ್ಮ ನಿವಾಸದ ತೋಟದ ಮನೆಯಲ್ಲಿ ಈ ಘಟನೆ ನಡೆದಿದೆ. 

ನೆಲಮಂಗಲ ಟೌನ್ ಖಾಸಗಿ ಆಸ್ಪತ್ರೆಯಲ್ಲಿ ಹಿರಿಯ ಕಲಾವಿದೆ ಲೀಲಾವತಿ ಅವರಿಗೆ ಚಿಕಿತ್ಸೆ ನೀಡಲಾಗಿದೆ. ಸಂಜೆ ಸ್ನಾನಗೃಹದಲ್ಲಿ ಜಾರಿಬಿದ್ದು ಹಿರಿಯ ನಟಿ ಲೀಲಾವತಿ ಗಾಯಗೊಂಡಿದ್ದರು. ತಕ್ಷಣವೇ ಅವರು ವಿನೋದ್ ರಾಜ್ ಜತೆ ತಮ್ಮ ಕಾರಿನಲ್ಲಿ ಬಂದು ಚಿಕಿತ್ಸೆ ಪಡೆದುಕೊಂಡಿದ್ದಾರೆ. 

ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಲೀಲಾವತಿಯವರು ಚಿಕಿತ್ಸೆ ಪಡೆದಿದ್ದಾರೆ. ಅಮ್ಮನಿಗೆ ನೋವು ತಡೆಯಲಾಗುತ್ತಿರಲಿಲ್ಲ, ಹೀಗಾಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದೇನೆ. ಅಮ್ಮನನ್ನು ಪರೀಕ್ಷಿಸಿದ ವೈದ್ಯರು ದೊಡ್ಡ ಅಪಾಯವೇನು ಇಲ್ಲ. ಆದರೆ ಬೆನ್ನಿನ ಮೂಳೆಗೆ ಸಣ್ಣ ಗಾಯವಾಗಿದೆ ಎಂದು ತಿಳಿಸಿದ್ದಾರೆ. ಬೆನ್ನಿಗೆ ಬೆಂಬಲವಾಗಿ ಪಟ್ಟಿ ನೀಡಿದ್ದಾರೆ ಎಂದು ವಿನೋದ್​ ತಿಳಿಸಿದರು. ಮನೆಯಲ್ಲೇ ಒಂದು ತಿಂಗಳ ಕಾಲ ಚಿಕಿತ್ಸೆ ಜೊತೆಗೆ ವಿಶ್ರಾಂತಿಗೆ ವೈದ್ಯರು ಸೂಚನೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇನ್ನೊಂದ್ ವರ್ಷ ಖರೀದಿ ಮಾಡ್ಬೇಡಿ..'.: ಪ್ರಧಾನಿ ಮೋದಿ ಕರೆ ಬೆನ್ನಲ್ಲೇ ಪಾತಾಳಕ್ಕೆ ಕುಸಿದ ಚಿನ್ನಾಭರಣ ಷೇರು

ಎರಡು ವರ್ಷದವೆರೆಗಿನ 'ಸಮ್ಮತಿಯ ಲೈಂಗಿಕ ಸಂಬಂಧ' ಅತ್ಯಾಚಾರವೇ? ಕೋರ್ಟ್ ಹೇಳಿದ್ದೇನು!

West Asia war ಎಫೆಕ್ಟ್: ಭಾರತೀಯ ಷೇರು ಮಾರುಕಟ್ಟೆಯಲ್ಲಿ ರಕ್ತಪಾತ; ಸೆನ್ಸೆಕ್ಸ್ 1,000 ಅಂಕ ಕುಸಿತ, ಹೂಡಿಕೆದಾರರಲ್ಲಿ ಹೆಚ್ಚಿದ ಆತಂಕ

ಚಿನ್ನಾಭರಣ ಖರೀದಿಸದಂತೆ ಮೋದಿ ಮನವಿ, ಪ್ರಧಾನಿ ಮಾತಿನ ಹಿಂದಿನ ಅರ್ಥವೇನು? ಇಲ್ಲಿದೆ ಉತ್ತರ

Madhya Pradesh: ಕುನೋ ಅಭಯಾರಣ್ಯಕ್ಕೆ ಮತ್ತೆರಡು ಚೀತಾಗಳ ಬಿಡುಗಡೆ, ಆಫ್ರಿಕನ್ ದೊಡ್ಡ ಬೆಕ್ಕುಗಳ ಸಂಖ್ಯೆ 53!

SCROLL FOR NEXT