ಪಾಯಲ್ ರಜಪೂತ್ 
ಸಿನಿಮಾ ಸುದ್ದಿ

ಡಾಲಿ ಧನಂಜಯ ನಟನೆಯ 'ಹೆಡ್ ಬುಷ್‌' ಚಿತ್ರಕ್ಕೆ ಪಾಯಲ್ ರಜಪೂತ್ ನಾಯಕಿ

ಧನಂಜಯ ನಟನೆಯ ಹಾಗೂ ನಿರ್ಮಾಣದ 'ಹೆಡ್ ಬುಷ್' ಚಿತ್ರದಲ್ಲಿ ನಾಯಕಿಯಾಗಿ ಟಾಲಿವುಡ್ ಪಾಯಲ್ ರಜಪೂತ್ ಅಭಿನಯಿಸಲಿದ್ದಾರೆ.

ಧನಂಜಯ ನಟನೆಯ ಹಾಗೂ ನಿರ್ಮಾಣದ 'ಹೆಡ್ ಬುಷ್' ಚಿತ್ರದಲ್ಲಿ ನಾಯಕಿಯಾಗಿ ಟಾಲಿವುಡ್ ಪಾಯಲ್ ರಜಪೂತ್ ಅಭಿನಯಿಸಲಿದ್ದಾರೆ. 'ಆರ್ ಎಕ್ಸ್ 100' ಚಿತ್ರದ ಮೂಲಕ ಟಾಲಿವುಡ್‌ಗೆ ಪದಾರ್ಪಣೆ ಮಾಡಿದ್ದ ಪಾಯಲ್ ರಜಪೂತ್ ಇದೀಗ 'ಹೆಡ್ ಬುಷ್' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಅಡಿಯಿಡುತ್ತಿದ್ದಾರೆ.

ಹೆಡ್ ಬುಷ್' ಚಿತ್ರದಲ್ಲಿ ಬೆಂಗಳೂರಿನ ಭೂಗತ ಲೋಕದಲ್ಲಿ ಡಾನ್ ಆಗಿದ್ದ ಜಯರಾಜ್ ಪಾತ್ರದಲ್ಲಿ ಡಾಲಿ ಧನಂಜಯ ಅಭಿನಯಿಸಲಿದ್ದಾರೆ. ಈ ಚಿತ್ರವನ್ನು ಡಾಲಿ ಪಿಕ್ಚರ್ಸ್ ಮತ್ತು ಸೋಮಣ್ಣ ಟಾಕೀಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದೆ. ಅಗ್ನಿ ಶ್ರೀಧರ್ ಈ ಚಿತ್ರಕ್ಕೆ ಕಥೆ-ಚಿತ್ರಕಥೆ-ಸಂಭಾಷಣೆ ಬರೆಯುತ್ತಿದ್ದಾರೆ. ಶೂನ್ಯ ಎಂಬ ಹೊಸ ಪ್ರತಿಭೆ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.

ಪಾಯಲ್ ರಜಪೂತ್ ದೆಹಲಿ ಮೂಲದ ನಟಿ. ಹಿಂದಿ ಕಿರುತೆರೆ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ಪಾಯತ್ ರಜಪೂತ್ ತೆಲುಗು, ಪಂಜಾಬಿ, ಹಿಂದಿ ಹಾಗೂ ತಮಿಳು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.ಸಪ್ನೋಂ ಸೇ ಭರೇ ನೈನಾ', 'ಯೇ ಹೇ ಆಶಿಕಿ', 'ಪ್ಯಾರ್ ತುನೇ ಕ್ಯಾ ಕಿಯಾ' ಮುಂತಾದ ಹಿಂದಿ ಸೀರಿಯಲ್‌ಗಳಲ್ಲಿ ಪಾಯಲ್ ರಜಪೂತ್ ಮಿಂಚಿದ್ದರು. 'ಆರ್ ಎಕ್ಸ್ 100', 'ಆರ್ ಡಿಎಕ್ಸ್ ಲವ್', 'ವೆಂಕಿ ಮಾಮ', 'ವೀರೇ ಕಿ ವೆಡ್ಡಿಂಗ್', 'ಡಿಸ್ಕೋ ರಾಜಾ', 'ಅನಗನಗಾ ಓ ಅತಿಥಿ' ಸೇರಿದಂತೆ ಕೆಲ ಚಿತ್ರಗಳಲ್ಲಿ ಪಾಯಲ್ ರಜಪೂತ್ ನಟಿಸಿದ್ದಾರೆ.

ಕೆಲ ದಿನಗಳ ಹಿಂದೆಯೂ ಸ್ಯಾಂಡಲ್ ವುಡ್ ನಲ್ಲಿ ನಟಿ ಪಾಯಲ್ ಹೆಸರು ಕೇಳಿ ಬಂದಿತ್ತು, ಹಲವು ನಿರ್ಮಾಪಕರು ತಮ್ಮ ಚಿತ್ರಕ್ಕೆ ಪಾಯಲ್ ರನ್ನು ಕರೆ ತರಲು ಯತ್ನಿಸಿದ್ದರು, ಆದರೆ ಸಾದ್ಯವಾಗಿರಲಿಲ್ಲ, ಅಂತಿಮವಾಗಿ ಹೆಡ್ ಬುಷ್ ಮೂಲಕ ಪಾಯಲ್ ಕನ್ನಡ ಸಿನಿಮಾ ಪ್ರವೇಶಿಸುತ್ತಿದ್ದಾರೆ.

ಆಗಸ್ಟ್ 9ರಿಂದ 'ಹೆಡ್ ಬುಷ್' ಚಿತ್ರದ ಚಿತ್ರೀಕರಣ ಶುರುವಾಗಲಿದೆ. ಬೆಂಗಳೂರಿನಲ್ಲಿಯೇ ಈ ಚಿತ್ರದ ಮೊದಲ ಹಂತದ ಶೂಟಿಂಗ್ ನಡೆಯಲಿದೆ. ಆಗಸ್ಟ್ 23ಕ್ಕೆ 'ಹೆಡ್ ಬುಷ್' ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ. ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಸೇರಿ ಒಟ್ಟು 6 ಭಾಷೆಯಲ್ಲಿ 'ಹೆಡ್ ಬುಷ್' ಸಿನಿಮಾ ತಯಾರಾಗಲಿದೆ. ಎರಡು ಭಾಗಗಳಲ್ಲಿ ಸಿನಿಮಾ ತಯಾರಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

T20 World Cup, IND vs Pak: ಇಶಾನ್ ಕಿಶಾನ್ ಬ್ಯಾಟಿಂಗ್ ಅಬ್ಬರ; ಸ್ಪಿನ್ ಮೋಡಿಗೆ ಪಾಕ್ ತತ್ತರ, ಭಾರತಕ್ಕೆ 61 ರನ್ ಗೆಲುವು!

T20 World Cup 2026: ಸೂಪರ್ 8 ಹಂತಕ್ಕೆ ಭಾರತ ಲಗ್ಗೆ; ದೇಶಾದ್ಯಂತ ಸಂಭ್ರಮಾಚರಣೆ, ಗಣ್ಯರ ಶುಭಾಶಯ!

ಆಜಾದ್ ನಗರ: ಕಚ್ಚಾ ಬಾಂಬ್ ತಯಾರಿಕೆ ವೇಳೆ ಸ್ಫೋಟ, 4 ಮಂದಿಗೆ ಗಾಯ, ರೌಡಿ ಶೀಟರ್ ಸಾವು.. Video

'2048 ಬಂದ್ರೂ ಡಿಕೆ ಶಿವಕುಮಾರ್ ಸಿಎಂ ಆಗಲ್ಲ: ಏಕಂದ್ರೆ ನಾವು ಬಿಡಲ್ಲ; ಇನ್ನು ಮುಂದೆ ದೇಶವೂ ನಮ್ಮದೇ, ರಾಜ್ಯವೂ ನಮ್ಮದೇ'

'ಈ ಛಲವಾದಿ ನಾರಾಯಣಸ್ವಾಮಿ ನಾಯಿ ಥರ...ಪಾಪ ಬೊಗಳಿದೆ, ಅದಕ್ಕೆ ನಾವೇನೂ ಕಲ್ಲು ಎಸೆಯಲು ಹೋಗೋದಿಲ್ಲ'

SCROLL FOR NEXT