ಬಿಗ್ ಬಾಸ್ ವಿನ್ನರ್ ಮಂಜು ಪಾವಗಡ (ಕಲರ್ಸ್ ಕನ್ನಡ ಚಿತ್ರ) 
ಸಿನಿಮಾ ಸುದ್ದಿ

ನನ್ನ ಹಾಸ್ಯ ಪ್ರಜ್ಞೆಯಿಂದ ಜನರನ್ನು ನಗಿಸಬೇಕು.. ಅದೊಂದೇ ನನ್ನ ಆಸೆ: ಬಿಗ್ ಬಾಸ್ ವಿನ್ನರ್ ಮಂಜು ಪಾವಗಡ

ನನ್ನ ಹಾಸ್ಯ ಪ್ರಜ್ಞೆಯಿಂದ ಜನರನ್ನು ನಗಿಸಬೇಕು.. ಅದೊಂದೇ ನನ್ನ ಆಸೆ ಎಂದು ಬಿಗ್ ಬಾಸ್ ಕನ್ನಡ ಸೀಸನ್ 8 ರ ವಿಜೇತರಾಗಿ ಹೊರಹೊಮ್ಮಿರುವ ಮಂಜು ಪಾವಗಡ ಹೇಳಿದ್ದಾರೆ.

ಬೆಂಗಳೂರು: ನನ್ನ ಹಾಸ್ಯ ಪ್ರಜ್ಞೆಯಿಂದ ಜನರನ್ನು ನಗಿಸಬೇಕು.. ಅದೊಂದೇ ನನ್ನ ಆಸೆ ಎಂದು ಬಿಗ್ ಬಾಸ್ ಕನ್ನಡ ಸೀಸನ್ 8 ರ ವಿಜೇತರಾಗಿ ಹೊರಹೊಮ್ಮಿರುವ ಮಂಜು ಪಾವಗಡ ಹೇಳಿದ್ದಾರೆ.

ಕಲರ್ಸ್ ಕನ್ನಡದಲ್ಲಿ ಪ್ರಸಾರವಾದ ಆಗಸ್ಟ್ 8 ರಂದು ನಡೆದ ಫಿನಾಲೆಯಲ್ಲಿ ಮಜಾಭಾರತ ಖ್ಯಾತಿಯ ಹಾಸ್ಯ ನಟ ಮಂಜು ಪಾವಗಡ ಕಿಚ್ಚ ಸುದೀಪ್ ನಡೆಸಿಕೊಟ್ಟ ಜನಪ್ರಿಯ ರಿಯಾಲಿಟಿ ಟಿವಿ ಶೋನಲ್ಲಿ 20 ಇತರ ಸ್ಪರ್ಧಿಗಳನ್ನು ಹಿಂದಿಕ್ಕಿ ಗೆದ್ದರು. ಟ್ರೋಫಿ ಮತ್ತು 53 ಲಕ್ಷ ರೂಪಾಯಿಗಳ ನಗದು ಬಹುಮಾನವನ್ನು ಮನೆಗೆ ಕೊಂಡೊಯ್ದರು. ಈ ಬಗ್ಗೆ ಮಾತನಾಡಿದ ಮಂಜು ಪಾವಗಡ, ಈ ಹಣವನ್ನು ಏನು ಮಾಡಬೇಕೆಂದು ಇನ್ನೂ ಲೆಕ್ಕಾಚಾರ ಹಾಕಿಲ್ಲ. ನಾನು ನನ್ನ ಜೀವನದಲ್ಲಿ ಅಷ್ಟೊಂದು ಹಣವನ್ನು ನೋಡಿಲ್ಲ. ಹಾಗಾಗಿ, ಇದನ್ನು ಏನು ಮಾಡಬೇಕೆಂದು ನನಗೆ ಗೊತ್ತಿಲ್ಲ. ನಾನು ಯಾವಾಗಲೂ ನನ್ನ ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳಲು ಬಯಸುತ್ತೇನೆ, ಈ ಹಣದಿಂದ ನಾನು ಅದನ್ನು ಪೂರೈಸುವುದು ಖಚಿತ ಎಂದು ಹೇಳಿದ್ದಾರೆ.

ಹಾಸ್ಯ ಟಿವಿ ಕಾರ್ಯಕ್ರಮ ಮಜಾ ಭಾರತ ಮೂಲಕ ಮಂಜು ಸಾಕಷ್ಟು ಗಮನ ಸೆಳೆದಿದ್ದರು, ಆದರೆ ಬಿಗ್ ಬಾಸ್ ನಿಂದಾಗಿ ಅವರು ಇಂದು ಕರ್ನಾಟಕದಲ್ಲಿ ಮನೆಮಾತಾಗಿದ್ದಾರೆ. ತುಮಕೂರಿನಿಂದ ಬಂದ ಮಂಜು ಬೆಂಗಳೂರಿನಲ್ಲಿ ಕೆಲಸಕ್ಕಾಗಿ ಅಲೆದಾಡಿದ್ದ ಕಲಾವಿದ. ವಿದ್ಯೆ ತಲೆಗೆ ಹತ್ತಲಿಲ್ಲ ಎಂದು ಯಾವುದೇ ಹಿಂಜರಿಕೆ ಇಲ್ಲದೇ ಹೇಳುವ ಮಂಜು ಸತತ ಆರು ಬಾರಿ ಪಿಯುಸಿಯಲ್ಲಿ ಅನುತ್ತೀರ್ಣರಾಗಿದ್ದೇನೆ ಎಂದು ಹೇಳಿದ್ದಾರೆ. 

ಬಳಿಕ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು.  'ನಾನು ಜೀವನಕ್ಕಾಗಿ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದರೂ, ನನ್ನ ಕನಸನ್ನು ನನಸಾಗಿಸುವತ್ತ ಕೆಲಸ ಮಾಡುತ್ತಿದ್ದೆ. ಮೊದಲ ಹಂತವಾಗಿ, ನಾನು ನಟನಾ ತರಗತಿಗೆ ಸೇರಿಕೊಂಡೆ, ಅಲ್ಲಿ ನಾನು ಆರು ತಿಂಗಳು ತರಬೇತಿ ಪಡೆದೆ. ಎರಡನೆಯದಾಗಿ, ನಾನು ರಂಗಭೂಮಿಯನ್ನು ಕೈಗೆತ್ತಿಕೊಂಡೆ, ಅದಕ್ಕಾಗಿ ನಾನು ನಿನಾಸಂ ರಂಗಮಂದಿರದಲ್ಲಿ ಒಂದು ತಿಂಗಳ ಕಾರ್ಯಾಗಾರವನ್ನು ಮಾಡಿದ್ದೇನೆ ಮತ್ತು ನಾನು ಹವ್ಯಾಸಿ ನಾಟಕ ತಂಡಕ್ಕೆ ಸೇರಿಕೊಂಡೆ. ನಾನು ಬಹಳಷ್ಟು ಆಡಿಷನ್‌ಗಳಿಗೆ ಹಾಜರಾಗಿದ್ದೆ ಮತ್ತು ಕಾಮಿಡಿ ಶೋ ಮಜಾ ಭಾರತದಲ್ಲಿ ನನ್ನ ಮೊದಲ ಸ್ಥಾನವನ್ನು ಪಡೆಯುವ ಮೊದಲು ಹಲವಾರು ಬಾರಿ ತಿರಸ್ಕರಿಸಲ್ಪಟ್ಟಿದ್ದೆ ಎಂದು ಮಂಜು ಹೇಳುತ್ತಾರೆ.

ಮಜಾ ಭಾರತ ಕಾಮಿಡಿ ಕಾರ್ಯಕ್ರಮವು ನನ್ನ ಜೀವನದ ಮಹತ್ವದ ತಿರುವು. ಬ್ಯಾಚುಲರ್ ಸ್ಕಿಟ್ ಖ್ಯಾತಿ ತಂದುಕೊಟ್ಟಿತು. ಈ ಸ್ಕಿಟ್ ಮೂಲಕ ಜನರು ನನ್ನನ್ನು ಲ್ಯಾಗ್ ಮಂಜ ಎಂದು ಕರೆಯಲಾರಂಭಿಸಿದರು. ಅಂದಿನಿಂದ ನಾನು ಹಿಂತಿರುಗಿ ನೋಡಲಿಲ್ಲ. ಸುಮಾರು ನಾಲ್ಕು ವರ್ಷಗಳ ಕಾಲ ಮಜಾ ಭಾರತದ ಭಾಗವಾದ ನಂತರ ಬಿಗ್ ಬಾಸ್ ಪ್ರವೇಶದ ಕುರಿತು ಮಾತನಾಡಿರುವ ಮಂಜು. 'ಮನೆಯೊಳಗೆ ಗುರುತಿಸಿಕೊಂಡ ಮುಖಗಳಲ್ಲಿ ನಾನು ಒಬ್ಬನಾಗಿದ್ದು, ಶುಭಾ ಪೂಂಜಾ, ನಿಧಿ ಸುಬಯ್ಯ ಮತ್ತು ಧಾರಾವಾಹಿ ನಟಿ ವೈಷ್ಣವಿ, ನನ್ನ ಕಾಮಿಕ್ ಸೆನ್ಸ್ ಬಹಳಷ್ಟು ಎದ್ದು ಕಾಣುವಂತೆ ಮಾಡಿದರು. ಇದು ಅನೇಕ ಹೃದಯಗಳನ್ನು ಗೆಲ್ಲಲು ನನಗೆ ಸಹಾಯ ಮಾಡಿದೆ. ಅಲ್ಲದೆ, ಈ ಬಿಗ್ ಬಾಸ್ ಸೀಸನ್ ಅನ್ನು ಕೋವಿಡ್ ಕಾರಣದಿಂದಾಗಿ ಎರಡು ಸೀಸನ್‌ಗಳಾಗಿ ವಿಭಜಿಸಲಾಗಿತ್ತು. ಇದೂ ಕೂಡ ನನಗೆ ಸಹಾಯ ಮಾಡಿತು. ನನ್ನ ಹಾಸ್ಯ ಸಮಯವನ್ನು ವೀಕ್ಷಕರು ಎಷ್ಟು ಇಷ್ಟಪಡುತ್ತಾರೆ ಎಂಬುದನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ನಾನು ಎರಡನೇ ಇನ್ನಿಂಗ್ಸ್‌ಗಾಗಿ ಮನೆಗೆ ಪ್ರವೇಶಿಸಿದಾಗ ಉತ್ತಮ ಪ್ರದರ್ಶನ ನೀಡಲು ಇದು ನನ್ನನ್ನು ಉತ್ತೇಜಿಸಿತು ಎಂದು ಹೇಳಿದ್ದಾರೆ.

ಮಂಜು ಪಾವಗಡ ಅವರು ಸುದೀಪ್ ಅವರನ್ನು ತಮ್ಮ ದೊಡ್ಡ ಸ್ಫೂರ್ತಿಯೆಂದು ಹೇಳಿಕೊಂಡಿದ್ದಾರೆ.  ನಾನು ಶಿವರಾಜಕುಮಾರ್ ಅವರ ಕಟ್ಟಾ ಅಭಿಮಾನಿ. ನಾನು ರಾಮಾರ್ಜುನ ಮತ್ತು ಬ್ರಹ್ಮಚಾರಿಯಂತಹ ಚಿತ್ರಗಳಲ್ಲಿ ನಟಿಸಿದ್ದೆ. ಶಿವಣ್ಣ ಅವರ ಮುಂಬರುವ ಚಿತ್ರ ಭಜರಂಗಿ 2 ನಲ್ಲಿ ಕೆಲಸ ಮಾಡಲು ನನಗೆ ಅವಕಾಶ ಸಿಕ್ಕಿದೆ ಎಂದು ಖುಷಿಯಿಂದ ಹೇಳಿಕೊಂಡಿದ್ದಾರೆ. ಟಿವಿ ಮಾಧ್ಯಮ ನನಗೆ ಅದ್ಭುತವಾದ ವೇದಿಕೆಯನ್ನು ಒದಗಿಸಿದೆ ಮತ್ತು ನನಗೆ ಮನ್ನಣೆ ಪಡೆಯಲು ಸಹಾಯ ಮಾಡಿದೆ. ನಾನು ನನ್ನ ಉತ್ತಮ ಹಾಸ್ಯಪ್ರಜ್ಞೆಯಿಂದ ಪ್ರೇಕ್ಷಕರನ್ನು ರಂಜಿಸಲು ಬಯಸುತ್ತೇನೆ ಎಂದು ಮಂಜು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT