ನಿರ್ದೇಶಕ ಪ್ರೇಮ್ 
ಸಿನಿಮಾ ಸುದ್ದಿ

ಹೊಸ ಸಿನಿಮಾದ ಸಂಪೂರ್ಣ ವಿವರ ಆಗಸ್ಟ್ 24ಕ್ಕೆ ರಿವೀಲ್: ನಿರ್ದೇಶಕ ಪ್ರೇಮ್

ಏಕ್ ಲವ್ ಯಾ ಚಿತ್ರವನ್ನು ಈಗಾಗಲೇ ಪೂರ್ಣಗೊಳಿಸಿರುವ ನಿರ್ದೇಶಕ ಪ್ರೇಮ್ ಅವರು, ಈ ನಡುವೆ ಮತ್ತೊಂದು ಚಿತ್ರ ಕೈಗೆತ್ತಿಕೊಂಡಿದ್ದು, ಸಿನಿಮಾದ ಸಂಪೂರ್ಣ ವಿವರವನ್ನು ಆಗಸ್ಟ್ 24ಕ್ಕೆ ರಿವೀಲ್ ಮಾಡುವುದಾಗಿ ಹೇಳಿದ್ದಾರೆ. 

ಏಕ್ ಲವ್ ಯಾ ಚಿತ್ರವನ್ನು ಈಗಾಗಲೇ ಪೂರ್ಣಗೊಳಿಸಿರುವ ನಿರ್ದೇಶಕ ಪ್ರೇಮ್ ಅವರು, ಈ ನಡುವೆ ಮತ್ತೊಂದು ಚಿತ್ರ ಕೈಗೆತ್ತಿಕೊಂಡಿದ್ದು, ಸಿನಿಮಾದ ಸಂಪೂರ್ಣ ವಿವರವನ್ನು ಆಗಸ್ಟ್ 24ಕ್ಕೆ ರಿವೀಲ್ ಮಾಡುವುದಾಗಿ ಹೇಳಿದ್ದಾರೆ. 

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ತಮ್ಮ ಮುಂದಿನ ಚಿತ್ರದ ಸ್ಕ್ರಿಪ್ಟ್ ಪೂಜೆಯ ವಿಡಿಯೋವನ್ನು ಹಂಚಿಕೊಂಡಿರುವ ಪ್ರೇಮ್ ಅವರು, ಯುದ್ಧದಲ್ಲಿ ಒಬ್ಬ ಹುತಾತ್ಮನಾದರೆ ಅವನನ್ನು ಸ್ವರ್ಗ ಲೋಕ ಸ್ವಾಗತಿಸುತ್ತದೆ. ಒಂದು ವೇಳೆ ಯುದ್ಧದಲ್ಲಿ ಒಬ್ಬ ವಿಜಯಶಾಲಿಯಾದರೆ ಸಿಂಹಾಸನ ಅವನಿಗಾಗಿ ಕಾಯುತ್ತಿರುತ್ತದೆ. ಒಟ್ಟಿಯಲ್ಲಿ ಯುದ್ಧ ಎನ್ನುವುದು ಯಾವಾಗಲೂ ಒಳ್ಳೆಯದೇ ಆಗಿರುತ್ತದೆ”. ಹೀಗೆ ಹೇಳಿರುವ ನಿರ್ದೇಶಕ ಪ್ರೇಮ್ ಅವರು, ಇದೀಗ ಯುದ್ಧ ಶುರುವಾಗಿದೆ ಎಂದು ಬರೆದುಕೊಂಡಿದ್ದಾರೆ. 

ಪ್ರೇಮ್ ಅವರು ಹಂಚಿಕೊಂಡಿರುವ ವಿಡಿಯೋದ ಕೊನೆಯಲ್ಲಿ ಕೊನೆಯಲ್ಲಿ ಸುದರ್ಶನ ಚಕ್ರ ಹಿಡಿದು ನಿಂತಿರುವ ಶ್ರೀಕೃಷ್ಣ ಪರಮಾತ್ಮನ ಚಿತ್ರವಿರುವುದು ಹಲವರ ಗಮನ ಸೆಳೆಯುತ್ತಿದೆ.

9ನೇ ಚಿತ್ರದ ಸ್ಕ್ರಿಪ್ಟ್ ಕೆಲಸ ಪೂರ್ಣಗೊಂಡಿದೆ. ಚಿತ್ರದ ಚಿತ್ರೀಕರಣಕ್ಕೆ ಸಿದ್ಧತೆಗಳೂ ಪ್ರಾರಂಭವಾಗಿದೆ. ಈ ಬಗ್ಗೆ ಶೀಘ್ರದಲ್ಲೇ ಅಭಿಮಾನಿಗಳಿಗೆ ಮಾಹಿತಿ ನೀಡಲು ಬಯಸುತ್ತಿದ್ದೇನೆಂದು ಪ್ರೇಮ್ ಹೇಳಿದ್ದಾರೆ. ಆದರೆ, ತಮ್ಮ ಸಿನಿಮಾದಲ್ಲಿನ ತಾರಾಬಳಗ ಕುರಿತ ಗುಟ್ಟನ್ನು ಪ್ರೇಮ್ ಬಿಟ್ಟುಕೊಟ್ಟಿಲ್ಲ. ಹೊಸ ಚಿತ್ರದ ಚಿತ್ರೀಕರಣ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಿನಲ್ಲಿ ಆರಂಭವಾಗಲಿದೆ ಎಂದು ತಿಳಿದುಬಂದಿದೆ. 

ಈ ನಡುವೆ ಪ್ರೇಮ್ ಅವರು ಧ್ರುವಸರ್ಜಾ ಜೊತೆಗೆ ಸಿನಿಮಾ ಮಾಡುತ್ತಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ. ಪ್ರೇಮ್ ಅವರ ಮುಂದಿನ ಚಿತ್ರದಲ್ಲಿ ಆ್ಯಕ್ಷನ್ ಪ್ರಿನ್ಸ್ ಕಾಣಿಸಿಕೊಳ್ಳುತ್ತಾರೋ ಅಥವಾ ಬೇರೆ ಸ್ಟಾರ್ ನಟರು ಕಾಣಿಸಿಕೊಳ್ಳುತ್ತಿದ್ದಾರೋ ಎಂಬುದನ್ನು ಕಾದು ನೋಡಬೇಕಿದೆ. 

ಇನ್ನು ಏಕ್ ಲವ್ ಯಾ ಚಿತ್ರದ ಕುರಿತು ಮಾಹಿತಿ ನೀಡಿರುವ ಪ್ರೇಮ್ ಅವರು, ಅರ್ಜುನ್ ಜನ್ಯ ಸಂಗೀತ ನೀಡಿರುವ ಹಾಡಿನ ರೀರೆಕಾರ್ಡಿಂಗ್ ಕೆಲಸಗಳು ಪೂರ್ಣಗೊಂಡಿವೆ. ಇತರೆ ಭಾಷೆಗಳಲ್ಲೂ ಚಿತ್ರ ಬಿಡುಗಡೆಗೆ ಚಿಂತನೆ ನಡೆಸಿದ್ದೇವೆ. ಮಲಯಾಳಂ ಭಾಷೆಗೆ ಡಬ್ಬಿಂಗ್ ಮಾಡಲಾಗುತ್ತಿದ್ದು, ಈ ಕೆಲಸವೂ ಕೊನೆಯ ಹಂತದಲ್ಲಿದೆ.  ಮುಂದಿನ ವಾರ ಡಿಟಿಎಸ್ ಕೆಲಸಗಳು ಆರಂಭವಾಗಲಿದೆ. ಚಿತ್ರ ಬಿಡುಗಡೆ ದಿನಾಂಕವನ್ನು ಸಾಂಕ್ರಾಮಿಕ ರೋಗ ಪರಿಸ್ಥಿತಿಯನ್ನು ಆಧರಿಸಿ ನಿರ್ಧರಿಸಲಾಗುತ್ತದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ