ಸಿನಿಮಾ ಸುದ್ದಿ

'ಪದವಿ ಪೂರ್ವ' ದಲ್ಲಿ ಸೋನಾಲ್ ಮಾಂಟೇರಿಯಾ ವಿಶೇಷ ಪಾತ್ರ

Shilpa D

ಹರಿ ಪ್ರಸಾದ್ ನಿರ್ದೇಶನದ ಪದವಿಪೂರ್ವ ಸಿನಿಮಾದಲ್ಲಿ ಪಂಚತಂತ್ರ ಬೆಡಗಿ ಸೋನಾಲ್ ಮಾಂಟೆರಿಯಾ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

90 ರ ದಶಕದ ರೋಮ್ಯಾಂಟಿಕ್ ಸಿನಿಮಾ ಕಥೆ ಇದಾಗಿದೆ, ಸೋನಾಲ್ ಪಾತ್ರದ ಬಗ್ಗೆ ಹರಿಪ್ರಸಾದ್ ಹೆಚ್ಚು ಬಹಿರಂಗಪಡಿಸಲಿಲ್ಲ, ಆದಾಗ್ಯೂ, ಆಕೆಯ ಪಾತ್ರವು ಚಲನಚಿತ್ರದ ಅಂತ್ಯದಲ್ಲಿ ಆರಂಭವಾಗುತ್ತದೆ ಎಂದು ಹೇಳಿದ್ದಾರೆ. ಆಗಸ್ಟ್ 11 ರಂದು ಸೋನಾಲ್ ಹುಟ್ಟುಹಬ್ಬವಿದ್ದು, ಅವರ ಪಾತ್ರದ ಬಗ್ಗೆ ಚಿತ್ರತಂಡ  ಘೋಷಣೆ ಮಾಡಿದೆ, ಶೀಘ್ರವೇ ಸೋನಾಲ್ ತಂಚಿತ್ರದ ಸೆಟ್ ಗೆ ಸೇರಲಿದೆ.

ರಾಬರ್ಟ್ ಸಿನಿಮಾದ ಅಭಿನಯಕ್ಕಾಗಿ ಸೋನಾಲ್ ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಸದ್ಯ ಸೋನಾಲ್ ಬುದ್ದಿವಂತ 2, ಶಂಭೋ ಶಿವಶಂಕರ, ಶುಗರ್ ಫ್ಯಾಕ್ಟರಿ ಮತ್ತು ಪದವಿಪೂರ್ವ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಪದವಿ ಪೂರ್ವ ಸಿನಿಮಾದಲ್ಲಿ ಹಲವು ಹೊಸ ಪ್ರತಿಭೆಗಳನ್ನು ಪರಿಚಯಿಸಲಾಗುತ್ತಿದೆ.

ಪದವಿ ಪೂರ್ವ ಸಿನಿಮಾಗೆ ಯೋಗರಾಜ್ ಭಟ್ ಮತ್ತು ರವಿ ಶಾಮನೂರು ಬಂಡವಾಳ ಹೂಡಿದ್ದಾರೆ. ಚಿತ್ರದ ಛಾಯಾಗ್ರಹಣವನ್ನು ಸಂತೋಷ್ ರೈ ಪಾತಾಜೆ ನಿರ್ವಹಿಸಿದ್ದಾರೆ ಮತ್ತು ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ನಿರ್ದೇಶಕರು ಮಂಗಳೂರಿನಲ್ಲಿ ಕೊನೆಯ ಶೂಟಿಂಗ್ ವೇಳಾಪಟ್ಟಿಯನ್ನು ಪ್ಲಾನ್ ಮಾಡುತ್ತಿದ್ದಾರೆ, ಮ್ಯೂಸಿಕ್ ಆಲ್ಬಂ ಅನ್ನು ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಲು ಯೋಜಿಸಿದ್ದಾರೆ.

SCROLL FOR NEXT