ಬೆಂಗಳೂರು ಬಾಯ್ಸ್ ಸ್ಟಿಲ್ 
ಸಿನಿಮಾ ಸುದ್ದಿ

ಸಚಿನ್ ಚೆಲುವರಾಯಸ್ವಾಮಿ ನಟನೆಯ 'ಬೆಂಗಳೂರು ಬಾಯ್ಸ್' ಮೊದಲ ಹಂತದ ಶೂಟಿಂಗ್ ಪೂರ್ಣ!

ಲಂಡನ್ ನಲ್ಲಿ ಲಂಬೋದರ ಸಿನಿಮಾ ಖ್ಯಾತಿಯ ನಿರ್ದೇಶಕ ರಾಜ್ ಸೂರ್ಯ, ಬೆಂಗಳೂರು ಬಾಯ್ಸ್ ಚಿತ್ರದ ಮೊದಲ ಹಂತದ ಶೂಟಿಂಗ್ ಪೂರ್ಣಗೊಂಡಿದೆ.

ಲಂಡನ್ ನಲ್ಲಿ ಲಂಬೋದರ ಸಿನಿಮಾ ಖ್ಯಾತಿಯ ನಿರ್ದೇಶಕ ರಾಜ್ ಸೂರ್ಯ, ಬೆಂಗಳೂರು ಬಾಯ್ಸ್ ಚಿತ್ರದ ಮೊದಲ ಹಂತದ ಶೂಟಿಂಗ್ ಪೂರ್ಣಗೊಂಡಿದೆ.

ಮಾರ್ಚ್ 2020 ರಂದು ಶೂಟಿಂಗ್ ಆರಂಭಿಸಲು ಚಿತ್ರ ತಂಡ ನಿರ್ಧರಿಸಿತ್ತು, ಆದರೆ ಕೊರೋನಾ ಸಾಂಕ್ರಾಮಿಕದ ಕಾರಣ ಪ್ರಾಜೆಕ್ಟ್ ಹಲವು ತಿಂಗಳುಗಳ ಕಾಲ ವಿಳಂಬವಾಯಿತು. ಇತ್ತೀಚೆಗೆ ಚಿತ್ರ ತಂಡ ಶೂಟಿಂಗ್ ಆರಂಭಿಸಿದ್ದು ಮೊದಲ ಹಂತದ ಚಿತ್ರೀಕರಣ ಪೂರ್ಣಗೊಳಿಸಿದೆ.

ಮಲ್ಟಿಸ್ಟಾರರ್ ಸಿನಿಮಾವಾಗಿರುವ ಬೆಂಗಳೂರು ಬಾಯ್ಸ್ ನಲ್ಲಿ ಸಚಿನ್ ಚೆಲುವರಾಯಸ್ವಾಮಿ, ಬಿಗ್ ಬಾಸ್ ಕನ್ನಡ 7ನೇ ಸೀಸನ್ ಚಂದನ್ ಆಚಾರ್, ಫೇಸ್ ಟು ಫೇಸ್ ಖ್ಯಾತಿಯ ರೋಹಿತ್ ಮತ್ತು ಅಭಿಷೇಕ್ ಪ್ರಮುಖ ಪಾತ್ರಗಳಲ್ಲಿದ್ದಾರೆ, ಇನ್ನೂ ವೈನಿಧಿ ಜಗದೀಶ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ, ಇದರ ಜೊತೆಗೆ ಹಾಸ್ಯ ಕಲಾವಿದ ಚಿಕ್ಕಣ್ಣ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಪ್ರಮುಖ ನಟರನ್ನು ಒಳಗೊಂಡ ರೊಮ್ಯಾಂಟಿಕ್ ಕಥೆಯ ಕೆಲವು ಸ್ಟಿಲ್‌ಗಳನ್ನು ನಿರ್ದೇಶಕರು ಹಂಚಿಕೊಂಡಿದ್ದಾರೆ. ವಿ ಮೂವಿ ಮೇಕರ್ಸ್ ಅಡಿಯಲ್ಲಿ ವಿಕ್ರಮ್ ಕೆ ಯಲ್ಲಯ್ಯ ಅವರು ನಿರ್ಮಿಸಿರುವ ಈ ಚಿತ್ರಕ್ಕೆ ಆಲ್ ಓಕೆ ಸಂಗೀತ ಸಂಯೋಜನೆ ಮತ್ತು ರಿಜೋ ಪಿ ಜಾನ್ ಛಾಯಾಗ್ರಹಣವಿದೆ. ಎರಡನೇ ವೇಳಾಪಟ್ಟಿಯನ್ನು ಸೆಪ್ಟೆಂಬರ್‌ನಲ್ಲಿ ಆರಂಭಿಸಲು ತಂಡ ಯೋಜಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸರ್ಕಾರದ ಮೊದಲ ವಿಕೆಟ್ ಪತನ: ಕಣ್ಣೀರಿಡುತ್ತಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ನಾಗೇಂದ್ರ; BJP ಹೋರಾಟಕ್ಕೆ ಜಯ!

ವಾಲ್ಮೀಕಿ ಹಗರಣದ 'ಕಿಂಗ್ ಪಿನ್' ನಾಗೇಂದ್ರ ಔಟ್: ಸಂಘಟಿತ ಹೋರಾಟಕ್ಕೆ ಜಯ, ಭ್ರಷ್ಟ ಕಾಂಗ್ರೆಸ್ ವಿರುದ್ಧ ಹೋರಾಟ ನಿರಂತರ- ಬಿಜೆಪಿ ಮೊದಲ ರಿಯಾಕ್ಷನ್!

ನೇಪಾಳದಲ್ಲಿ ದಿಢೀರ್ ಪ್ರವಾಹ: ಬಲಿಯಾದವರ ಸಂಖ್ಯೆ 538ಕ್ಕೆ ಏರಿಕೆ; 320 ಭಾರತೀಯ ಪ್ರವಾಸಿಗರು ನಾಪತ್ತೆ!

ಮೂಡ್ ಆಫ್ ದಿ ನೇಷನ್: ಪ್ರಧಾನಿ ರೇಸ್‌ನಲ್ಲಿ ಕೇಜ್ರಿವಾಲ್​ರನ್ನೇ ಹಿಂದಿಕ್ಕಿದ CJP ಸಂಸ್ಥಾಪಕ ಅಭಿಜೀತ್ ದೀಪ್ಕೆ!

ನೇಪಾಳ ಪ್ರವಾಹ: ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಮೃತ ಮಹಿಳೆಯ ಕೂದಲು ಹಿಡಿದು, ಚಿನ್ನದ ಕಿವಿಯೋಲೆ ಕದ್ದ ಖದೀಮರು! Video