ರಕ್ಷಿತ್ ಶೆಟ್ಟಿ 
ಸಿನಿಮಾ ಸುದ್ದಿ

ರಕ್ಷಿತ್ ಶೆಟ್ಟಿ ಚಿತ್ರ ನಿರ್ಮಾಣ ಸಂಸ್ಥೆಯಿಂದ ಹೊಸ ಸಿನಿಮಾ 'ಆಬ್ರಕಡಾಬ್ರ'!

ಆಬ್ರಕಡಾಬ್ರ ಎಂದರೆ ಬರೀ ಮ್ಯಾಜಿಕ್ ಮಂತ್ರವಲ್ಲ, ಬದುಕಿನ ಅರ್ಥದ ಅನಾವರಣ, ಅಸ್ತಿತ್ವದ ಹುಡುಕಾಟ, ಗುರಿ ಎಲ್ಲವೂ ಅದರಲ್ಲಿ ಅಡಗಿದೆ ಎನ್ನುತ್ತಾರೆ ನವ ನಿರ್ದೇಶಕ ಶಿಶಿರ್ ರಾಜ್ ಮೋಹನ್.

ಬೆಂಗಳೂರು: ನಟ ರಕ್ಷಿತ್ ಶೆಟ್ಟಿಯವರ ಪರಮ್ವಾಹ್ ಸ್ಟುಡಿಯೋ ಆಬ್ರಕಡಾಬ್ರ ಎನ್ನುವ ಹೊಸ ಚಿತ್ರ ನಿರ್ಮಿಸಲು ಸಿದ್ಧತೆ ನಡೆಸಿದೆ. ಈ ಚಿತ್ರವನ್ನು ಉದಯೋನ್ಮುಖ ಬರಹಗಾರ ಮತ್ತು ನಿರ್ದೇಶಕ ಶಿಶಿರ್ ರಾಜ್ ಮೋಹನ್ ಅವರು ನಿರ್ದೇಶಿಸಲಿದ್ದಾರೆ. 

ಈ ಹಿಂದೆ ಕಿರಿಕ್ ಪಾರ್ಟಿ, ಹಂಬಲ್ ಪೊಲಿಟಿಶಿಯನ್ ನೊಗ್ರಾಜ್ ಸಿನಿಮಾಗಳನ್ನು ಪರಮ್ವಾಹ್ ಸ್ಟುಡಿಯೊ ಹೊರತಂದಿತ್ತು.ಐದೇ ಸಂಸ್ಥೆಯ 'ಸಕುಟುಂಬ ಸಮೇತ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. 

ಸಿನಿಮಾದ ಪೋಸ್ಟರ್ ಅನ್ನು ಹಂಚಿಕೊಂಡ ರಕ್ಷಿತ್ ಶೆಟ್ಟಿ ತಮ್ಮ ಸಂಸ್ಥೆಯಿಂದ ಅನಂತ್ ನಾಗ್ ಅಭಿನಯದ ಆಬ್ರಕಡಾಬ್ರ ಚಿತ್ರ ನಿರ್ಮಿಸುತ್ತಿರುವುದಾಗಿ ಘೋಷಿಸಲು ಹೆಮ್ಮೆಯಾಗುತ್ತಿದೆ ಎಂದು ಬರೆದುಕೊಂಡಿದ್ದರು. ವರ್ಷಾ ಕೊಡ್ಗಿ ಅವರು ವಿನ್ಯಾಸ ಮಾಡಿರುವ ಸಿನಿಮಾ ಪೋಸ್ಟರ್ ಸಿನಿಮಾದ ಕಥಾಹಂದರದ ಕುರಿತು ಕುತೂಹಲ ಮೂಡಿಸಿದೆ. 

ತಾರಗಣದಲ್ಲಿ ಸಿರಿ ರವಿಕುಮಾರ್, ಬಿ.ವಿ ಶೃಂಗ, ಅವಿನಾಶ್ ರೈ ಮತ್ತಿತರು ಇದ್ದಾರೆ. ನಿರ್ದೇಶಕ ಶಿಶಿರ್ ರಾಜಮೋಹನ್ ಅವರಿಗೆ ಇದು ಮೊದಲ ಸಿನಿಮಾ. ಈ ಹಿಂದೆ ಅವರು ಕಿರುಚಿತ್ರ ಹಾಗೂ ಜಾಹೀರಾತುಗಳನ್ನು ನಿರ್ಮಿಸಿದ್ದಾರೆ. 

ಆಬ್ರಕಡಾಬ್ರ ಎಂದರೆ ಅದೊಂದು ಮ್ಯಾಜಿಕ್ ಮಂತ್ರವಲ್ಲ, ಜೀವನದುದ್ದಕ್ಕೂ ನಮಗಾಗುವ ಅರ್ಥೈಸುವಿಕೆ, ಅನಾವರಣ, ಅಸ್ತಿತ್ವದ ಹುಡುಕಾಟ, ಗುರಿ ಎಲ್ಲವೂ ಅದರಲ್ಲಿ ಅಡಗಿದೆ ಎನ್ನುತ್ತಾರೆ ಶಿಶಿರ್.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

IPL 2026 Qualifier 1: GT ವಿರುದ್ದ ಸ್ಫೋಟಕ ಬ್ಯಾಟಿಂಗ್, ಇತಿಹಾಸ ಬರೆದ RCB

IPL 2026 Qualifier 1: ಐಪಿಎಲ್ ಅಷ್ಟೇ ಅಲ್ಲ.. ಜಾಗತಿಕ ಟಿ20 ಕ್ರಿಕೆಟ್ ನಲ್ಲೂ RCB ಐತಿಹಾಸಿಕ ದಾಖಲೆ, ರೆಕಾರ್ಡ್ ಗಳ ಪಟ್ಟಿ!

SCROLL FOR NEXT