ರೈಡರ್ ಚಿತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಮತ್ತು ಕಾಶ್ಮೀರ ಪರ್ದೇಸಿ 
ಸಿನಿಮಾ ಸುದ್ದಿ

'ರೈಡರ್' ಚಿತ್ರದಲ್ಲಿ ಪಾತ್ರ ನನಗೆ ಹೇಳಿ ಮಾಡಿಸಿದಂತಿದೆ: ನಿಖಿಲ್ ಕುಮಾರಸ್ವಾಮಿ

ತಮ್ಮ ಬಹುನಿರೀಕ್ಷಿತ ರೈಡರ್ ಚಿತ್ರದ ಶೂಟಿಂಗ್ ಮುಗಿಸಿರುವ ನಿಖಿಲ್ ಕುಮಾರಸ್ವಾಮಿ ಅದರ ಡಬ್ಬಿಂಗ್ ಕೆಲಸದಲ್ಲಿ ತೊಡಗಿದ್ದಾರೆ. ಚಿತ್ರದ ಹಾಡೊಂದರ ಶೂಟಿಂಗ್ ಮಾತ್ರ ಬಾಕಿಯಿದೆ. ವಿಜಯ್ ಕುಮಾರ್ ಕೊಂಡ ನಿರ್ದೇಶನದ ರೈಡರ್ ಚಿತ್ರ ಕನ್ನಡ ಮತ್ತು ತೆಲುಗಿನಲ್ಲಿ ತಯಾರಾಗುತ್ತಿದೆ.

ತಮ್ಮ ಬಹುನಿರೀಕ್ಷಿತ ರೈಡರ್ ಚಿತ್ರದ ಶೂಟಿಂಗ್ ಮುಗಿಸಿರುವ ನಿಖಿಲ್ ಕುಮಾರಸ್ವಾಮಿ ಅದರ ಡಬ್ಬಿಂಗ್ ಕೆಲಸದಲ್ಲಿ ತೊಡಗಿದ್ದಾರೆ. ಚಿತ್ರದ ಹಾಡೊಂದರ ಶೂಟಿಂಗ್ ಮಾತ್ರ ಬಾಕಿಯಿದೆ. ವಿಜಯ್ ಕುಮಾರ್ ಕೊಂಡ ನಿರ್ದೇಶನದ ರೈಡರ್ ಚಿತ್ರ ಕನ್ನಡ ಮತ್ತು ತೆಲುಗಿನಲ್ಲಿ ತಯಾರಾಗುತ್ತಿದೆ.

ಕೋವಿಡ್ ಮಧ್ಯೆ ರೈಡರ್ ಚಿತ್ರೀಕರಣದಲ್ಲಿ ಪಾಲ್ಗೊಂಡ ಅನುಭವವನ್ನು ಹಂಚಿಕೊಂಡ ನಿಖಿಲ್ ಕುಮಾರಸ್ವಾಮಿ, ಚಿತ್ರದ ಪಾತ್ರ ನನಗೆ ಹೇಳಿ ಮಾಡಿಸಿದಂತಿದೆ. ಸೀತಾರಾಮ ಕಲ್ಯಾಣ ಚಿತ್ರದ ಕೊನೆಯ ಹಂತದ ಚಿತ್ರೀಕರಣವಾಗುತ್ತಿರುವಾಗ ಈ ಕಥೆ ನನ್ನ ಬಳಿಗೆ ಬಂತು. ನಾನು ನನ್ನ ಐಡಿಯಾಗಳನ್ನು ಕೂಡ ನಿರ್ದೇಶಕರಿಗೆ ನೀಡಿದೆ. ಅವರು ಅದನ್ನು ಒಪ್ಪಿಕೊಂಡು ಚರ್ಚೆ, ವಿಮರ್ಶೆ ಮಾಡಿ ಒಂದು ಸುಂದರವಾದ ಕಥೆ ತಯಾರಿಸಿದೆವು, ಚಿತ್ರ ಚೆನ್ನಾಗಿ ಮೂಡಿಬಂದಿದೆ ಎಂದರು.

ಉತ್ತಮವಾದ ಪ್ರೇಮಕಥೆಯುಳ್ಳ ಈ ಚಿತ್ರವು ಕ್ರೀಡಾ ಹಿನ್ನೆಲೆಯನ್ನು ಹೊಂದಿದೆ. ಚಿಕ್ಕಣ್ಣ, ಮಂಜು ಪಾವಗಡ ಮತ್ತು ಸಂತು ಅವರ ಪಾತ್ರಗಳಲ್ಲಿ ಸಾಕಷ್ಟು ಮನರಂಜನಾ ಅಂಶಗಳಿವೆ. ಅಚ್ಯುತ್ ಕುಮಾರ್ ಮತ್ತು ನನ್ನ ನಡುವಿನ ತಂದೆ-ಮಗನ ಬಾಂಧವ್ಯ ಕೂಡ ಚಿತ್ರದ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಚಿತ್ರದ ನಾಯಕಿ ಕಾಶ್ಮೀರಾ ಪರದೇಸಿ ಅವರ ಅಭಿನಯ ನಮ್ಮೆಲ್ಲರನ್ನೂ ಅಚ್ಚರಿಗೊಳಿಸಿತು. ಚಿತ್ರದಲ್ಲಿ ಅವರ ಪಾತ್ರವು ಪ್ಲಸ್ ಪಾಯಿಂಟ್ ಆಗಿದೆ ಎಂದರು. 

ನಿಖಿಲ್ ಕುಮಾರಸ್ವಾಮಿ ಮತ್ತು ಚಿತ್ರದ ನಿರ್ದೇಶಕ ವಿಜಯ್ ಒಟ್ಟಾಗಿ ಕೆಲಸ ಮಾಡುತ್ತಿರುವುದು ಇದೇ ಮೊದಲು. ನಿರ್ದೇಶಕರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡು ಹೋಗಲು ಬಹಳ ಪೂರಕ ಉತ್ತಮ ವಾತಾವರಣವಿತ್ತು. ಅಂತಿಮವಾಗಿ ನಟ ಮತ್ತು ನಿರ್ದೇಶಕರ ಹೊಂದಾಣಿಕೆ, ಬಾಂಧವ್ಯ ಪ್ರೇಕ್ಷಕರ ಮುಂದೆ ಒಂದು ಒಳ್ಳೆಯ ಚಿತ್ರವನ್ನು ಹೊರತರುವಲ್ಲಿ ಸಹಾಯ ಮಾಡುತ್ತದೆ. ರೈಡರ್ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂಬ ವಿಶ್ವಾಸವಿದೆ ಎಂದರು.

ನಿಖಿಲ್ ಹಿಂದೆ ತಮ್ಮ ಎರಡು ಚಿತ್ರಗಳ ನಿರ್ಮಾಣ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದರು. ರೈಡರ್ ಚಿತ್ರದಲ್ಲಿ ಕೂಡ ಅವರು ನಿರ್ಮಾಪಕ ಚಂದ್ರು ಮನೋಹರನ್ ಜೊತೆ ಸಹಕರಿಸಿದ್ದಾರೆ. ಚಿತ್ರದ ನಿರ್ಮಾಣವು ಭರದಿಂದ ಸಾಗುತ್ತಿದ್ದು, ಚಿತ್ರವನ್ನು ಆದಷ್ಟು ಬೇಗ ಬಿಡುಗಡೆ ಮಾಡುವ ಯೋಜನೆಯನ್ನು ಚಿತ್ರತಂಡ ಹೊಂದಿದೆ.

ನಿಖಿಲ್ ಕುಮಾರಸ್ವಾಮಿ ಮುಂದಿನ ಚಿತ್ರ ಮಂಜು ಅಥರ್ವ ಜೊತೆಗೆ ಕೆವಿಎನ್ ಪ್ರೊಡಕ್ಷನ್ ನಿರ್ಮಿಸುತ್ತಿದೆ. ಅದು ಅಕ್ಟೋಬರ್ ನಲ್ಲಿ ಶೂಟಿಂಗ್ ಆರಂಭವಾಗಲಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಲಬುರಗಿ: ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಕರ್ನಾಟಕದ ಅಂಧ ಕ್ರಿಕೆಟ್ ಆಟಗಾರ್ತಿಯರಿಗೆ ತಲಾ 10 ಲಕ್ಷ ರೂ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ನಾಯಕತ್ವ ಬದಲಾವಣೆ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಲು ಸಾಧ್ಯವಿಲ್ಲ: ಮಲ್ಲಿಕಾರ್ಜುನ ಖರ್ಗೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

SCROLL FOR NEXT