ಸಂಜನಾ ಆನಂದ್ 
ಸಿನಿಮಾ ಸುದ್ದಿ

ಎಪಿ ಅರ್ಜುನ್ ನಿರ್ದೇಶನದ 'ಅದ್ಧೂರಿ ಲವರ್ 'ನಿಂದ ಹೊರಬಂದ ನಟಿ ಸಂಜನಾ ಆನಂದ್!

ಕೆಮಿಸ್ಟ್ರಿ ಆಫ್‌ ಕರಿಯಪ್ಪ' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ ಪ್ರವೇಶ ಮಾಡಿದ ಸಂಜನಾ ಆನಂದ್‌, ಸದ್ಯ ಗಮನ ಸೆಳೆಯುತ್ತಿರುವ ನಾಯಕಿಯರಲ್ಲಿ ಒಬ್ಬರಾಗಿದ್ದಾರೆ.

'ಕೆಮಿಸ್ಟ್ರಿ ಆಫ್‌ ಕರಿಯಪ್ಪ' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ ಪ್ರವೇಶ ಮಾಡಿದ ಸಂಜನಾ ಆನಂದ್‌, ಸದ್ಯ ಗಮನ ಸೆಳೆಯುತ್ತಿರುವ ನಾಯಕಿಯರಲ್ಲಿ ಒಬ್ಬರಾಗಿದ್ದಾರೆ. 'ಸಲಗ' ಸಿನಿಮಾ ಬಿಡುಗಡೆಗಾಗಿ ಕಾಯುತ್ತಿರುವ ಅವರನ್ನು ತೆಲುಗು ಚಿತ್ರರಂಗದಿಂದಲೂ ಕಥೆಗಳು ಹುಡುಕಿಕೊಂಡು ಬರುತ್ತಿವೆ.

'ಕೆಮಿಸ್ಟ್ರಿ ಆಫ್‌ ಕರಿಯಪ್ಪ' ಸಿನಿಮಾ ಕಥೆ ಮತ್ತುನಿರೂಪಣೆಯಿಂದ ಗಮನ ಸೆಳೆದಿತ್ತು. ಆ ಸಿನಿಮಾದ ನಾಯಕಿ ಸಂಜನಾ ಆನಂದ್‌ ಕೂಡ ನಾಲ್ಕೈದು ಸಿನಿಮಾಗಳನ್ನು ಒಪ್ಪಿಕೊಂಡಿದ್ದರು. 

ಆದರೆ ಸದ್ಯದ ಮಾಹಿತಿ ಪ್ರಕಾರ ಡೇಟ್ಸ್ ಹೊಂದಾಣಿಕಯಾಗದ ಕಾರಣ ಎಪಿ ಅರ್ಜುನ್ ನಿರ್ದೇಶನದ ಅದ್ಧೂರಿ ಲವರ್ ಸಿನಿಮಾದಿಂದ ನಟಿ ಸಂಜನಾ ಆನಂದ್ ಹೊರಬಂದಿದ್ದಾರೆ. ಅದ್ಧೂರಿ  ಲವರ್ ಸಿನಿಮಾ ಜುಲೈ 21 ರಿಂದ ಸೆಟ್ಟೇರಬೇಕಿತ್ತು. 

ಎಪಿ ಅರ್ಜುನ್ ಎರಡು ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ, ಅದ್ಧೂರಿ ಲವರ್ ಮತ್ತು ಇನ್ನೂ ಹೆಸರಿಡದ ಸಿನಿಮಾದಲ್ಲಿ ಧ್ರುವ ಸರ್ಜಾ ನಟನೆಯ ಸಿನಿಮಾವನ್ನು  ನಿರ್ದೇಶಿಸುತ್ತಿದ್ದಾರೆ. ಆದರೆ ಅವರ ಎರಡು ಸಿನಿಮಾಗಳ ನಡುವೆ ನನಗೆ ಡೇಟ್ಸ್ ಹೊಂದಾಣಿಕೆಯಾಗದ ಕಾರಣ ಸಿನಿಮಾದಿಂದ ಹೊರಬಂದಿರುವುದಾಗಿ ಸಂಜನಾ  ಸ್ಫಷ್ಟ ಪಡಿಸಿದ್ದಾರೆ.

ಪರಸ್ಪರ ಒಪ್ಪಿಗೆ ಮೇಲೆ ನಾನು ಹೊರಬಂದಿದ್ದೇನೆ, ಸಲಗ ಸಿನಿಮಾ ರಿಲೀಸ್ ಗಾಗಿ ಸಂಜನಾ ಕಾಯುತ್ತಿದ್ದಾರೆ, ಅದರ ಜೊತೆ ವಿಂಡೋ ಸೀಟ್, ಶೋಕಿವಾಲಾ, ಶಶಾಂಕ್ ನಿರ್ದೇಶನದ ಮತ್ತೊಂದು ಸಿನಿಮಾದಲ್ಲೂ ಸಂಜನಾ ಬ್ಯುಸಿಯಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ