ತೋತಾಪುರಿ ಚಿತ್ರದಲ್ಲಿ ನಟ ಜಗ್ಗೇಶ್ 
ಸಿನಿಮಾ ಸುದ್ದಿ

ತೋತಾಪುರಿ ಚಿತ್ರಕ್ಕೆ ನಿರ್ದೇಶಕ ವಿಜಯ ಪ್ರಸಾದ್ ರಾಜ್ಯ ಪ್ರಶಸ್ತಿ ಸಿಗುತ್ತೆ: ಜಗ್ಗೇಶ್ ಅಭಿಮತ

ನಟನೆ ಹಾಗೂ ರಾಜಕೀಯ ಜರ್ನಿಯಲ್ಲಿ ಪಳಗಿರುವ ನಟ ಜಗ್ಗೇಶ್, ತೋತಾಪುರಿ ಚಿತ್ರದ ಕೆಲಸಗಳನ್ನು ಪುನರಾರಂಭಿಸಿದ್ದಾರೆ. ಸದ್ಯ ಅವರು ವಿಜಯ ಪ್ರಸಾದ್ ನಿರ್ದೇಶನದ ಚಿತ್ರಕ್ಕೆ ಡಬ್ಬಿಂಗ್ ನಲ್ಲಿ ತೊಡಗಿಸಿಕೊಂಡಿದ್ದಾರೆ.

ಬೆಂಗಳೂರು: ನಟನೆ ಹಾಗೂ ರಾಜಕೀಯ ಜರ್ನಿಯಲ್ಲಿ ಪಳಗಿರುವ ನಟ ಜಗ್ಗೇಶ್, ತೋತಾಪುರಿ ಚಿತ್ರದ ಕೆಲಸಗಳನ್ನು ಪುನರಾರಂಭಿಸಿದ್ದಾರೆ. ಸದ್ಯ ಅವರು ವಿಜಯ ಪ್ರಸಾದ್ ನಿರ್ದೇಶನದ ಚಿತ್ರಕ್ಕೆ ಡಬ್ಬಿಂಗ್ ನಲ್ಲಿ ತೊಡಗಿಸಿಕೊಂಡಿದ್ದಾರೆ. ಸ್ಟುಡಿಯೋದಿಂದಲೇ ಮಾತನಾಡಿರುವ ಜಗ್ಗೇಶ್, ತೋತಾಪುರಿ ವಿಷಯ ಆಧಾರಿತ ಸಿನಿಮಾವಾಗಿರುವುದಾಗಿ ತಿಳಿಸಿದರು.

ಇದೊಂದು ಎ-ಗ್ರೇಡ್ ಸಿನಿಮಾವಾಗಿದೆ. ತೋತಾಪುರಿ ನೀರ್ ದೋಸೆಗಿಂತ ಹತ್ತು ಪಟ್ಟು ಉತ್ತಮ ಸಿನಿಮಾವಾಗಿದೆ. ಈ ಚಿತ್ರದೊಂದಿಗೆ ವಿಜಯ ಪ್ರಸಾದ್ ಖಂಡಿತವಾಗಿ ರಾಜ್ಯ ಪ್ರಶಸ್ತಿ ಪಡೆಯಲಿದ್ದಾರೆ. ಕಾಲ ಬದಲಾಗಿದೆ. ಇಂದಿನ ಸಿನಿ ಪ್ರಿಯರು ಹೆಚ್ಚಾಗಿ ವಿಷಯ ಆಧಾರಿತ ಸಿನಿಮಾದ ಕಡೆಗೆ ಒಲವು ಹೊಂದಿದ್ದಾರೆ. ತೋತಾಪುರಿ ಅವರ ಇಷ್ಟಗಳನ್ನು ಪೂರೈಸಲಿದೆ ಎಂದರು. 

  ಕೆಎ ಸುರೇಶ್ ನಿರ್ಮಾಣದ ಈ ಚಿತ್ರ ಇದೀಗ ಪೋಸ್ಟ್ ಪ್ರೊಢಕ್ಷನ್ ಹಂತದಲ್ಲಿದೆ. ಎರಡು ಭಾಗಗಳಲ್ಲಿ ಹೊರಬರಲಿದೆ. ಜಗ್ಗೇಶ್ ಅವರೊಂದಿಗೆ ಆದಿತಿ ಪ್ರಭುದೇವಾ, ವೀಣಾ ಸುಂದರ್, ಧನಂಜಯ್, ಸುಮನ್ ರಂಗನಾಥ್ ಮತ್ತಿತರರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಜಗ್ಗೇಶ್ ಈ ಚಿತ್ರದಷ್ಟೇ ಮುಂದಿನ ಸಿನಿಮಾ ರಂಗನಾಯಕ ಸಿನಿಮಾ ಬಗ್ಗೆಯೂ ಕುತೂಹಲ ಹೊಂದಿದ್ದಾರೆ. ಎ ಆರ್ ವಿಕ್ಯಾತ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಗುರುಪ್ರಸಾದ್ ಆಕ್ಷನ್ ಕಟ್ ಹೇಳಲಿದ್ದಾರೆ. ರಂಗನಾಯಕ ಮತ್ತೊಂದು ಆಸಕ್ತಿದಾಯಕ ಕಥೆಯಾಗಿದ್ದು, ಆಗಸ್ಟ್ ಮೊದಲ ವಾರದಲ್ಲಿ ಚಿತ್ರೀಕರಣ ಆರಂಭಿಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಜಗ್ಗೇಶ್ ತಿಳಿಸಿದರು.

ಸದ್ಯ ಜಗ್ಗೇಶ್ ಕೈಯಲ್ಲಿ ಐದು ಪ್ರಮುಖ ಕಥೆಗಳಿದ್ದು, ನಟ ಆತುರ ಬೀಳುತ್ತಿಲ್ಲ. ಈ ವರ್ಷ ತೋತಾಪುರಿ ಪ್ರಚಾರ ಮತ್ತು ರಂಗನಾಯಕ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳುತ್ತೇನೆ. ಈ ಎರಡು ಪ್ರಾಜೆಕ್ಟ್ ಮುಗಿಸಿದ ನಂತರ ಮುಂದಿನ ಚಿತ್ರದ ಬಗ್ಗೆ ನಿರ್ಧರಿಸುತ್ತೇನೆ. ಈ ಎಲ್ಲಾ ಪ್ರಾಜೆಕ್ಟ್ ಗಳ ಮಧ್ಯೆ, ಆರೋಗ್ಯದ ಕಡೆಗೆ ಗಮನ ನೀಡಿ, ಕುಟುಂಬದೊಂದಿಗೆ ಕಾಲ ಕಳೆಯುವುದಾಗಿ ಜಗ್ಗೇಶ್ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!