ಯೋಗರಾಜ್ ಭಟ್ ಜೊತೆ ಬಿಸಿ ಪಾಟೀಲ್ ಸಿನಿಮಾ 
ಸಿನಿಮಾ ಸುದ್ದಿ

ಕೃಷಿ ಸಚಿವ ಬಿಸಿ ಪಾಟೀಲ್ ಜೊತೆ ನಿರ್ದೇಶಕ ಯೋಗರಾಜ್ ಭಟ್ ಹೊಸ ಸಿನಿಮಾ

ನಿರ್ದೇಶಕ ಯೋಗರಾಜ್ ಭಟ್  ಮತ್ತೊಂದು ಸಿನಿಮಾ ಮಾಡುತ್ತಿದ್ದು, ಅದನ್ನು ಕೃಷಿ ಸಚಿವ ಬಿ.ಸಿ ಪಾಟೀಲ್‌ ನಿರ್ಮಾಣ ಮಾಡುತ್ತಿದ್ದಾರೆ.

ನಿರ್ದೇಶಕ ಯೋಗರಾಜ್ ಭಟ್  ಮತ್ತೊಂದು ಸಿನಿಮಾ ಮಾಡುತ್ತಿದ್ದು, ಅದನ್ನು ಕೃಷಿ ಸಚಿವ ಬಿ.ಸಿ ಪಾಟೀಲ್‌ ನಿರ್ಮಾಣ ಮಾಡುತ್ತಿದ್ದಾರೆ. 

ಕೆಲವು ವರ್ಷಗಳ ಹಿಂದೆಯಷ್ಟೇ ಅವರು 'ಹ್ಯಾಪಿ ನ್ಯೂ ಇಯರ್‌' ಸಿನಿಮಾಗೆ ಬಂಡವಾಳ ಹೂಡಿದ್ದರು. ಇದೀಗ ಅವರು ಸಚಿವರಾದರೂ ಸಿನಿಮಾ ನಂಟು ಬಿಡದೆ ಮತ್ತೆ ಭಟ್ಟರ ಜತೆಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ.

ನನ್ನದು ಮತ್ತು ಬಿ.ಸಿ ಪಾಟೀಲ್‌ರದ್ದು ಬಯಲು ಸೀಮೆಯ ಸ್ನೇಹ. ಇಬ್ಬರೂ ಒಂದೇ ಭಾಗದಿಂದ ಬಂದವರು. ಹಾಗಾಗಿ ನಮ್ಮಿಬ್ಬರಲ್ಲಿ ಪರಸ್ಪರ ವಿಶೇಷವಾದ ಪ್ರೀತಿ, ವಿಶ್ವಾಸವಿದೆ. ಯಾವುದೋ ವಿಚಾರಕ್ಕೆ ಕೆಲವು ದಿನಗಳ ಹಿಂದೆಯಷ್ಟೇ ಅವರನ್ನು ಭೇಟಿ ಮಾಡಿದ್ದೆ. ಆಗ ಸಿನಿಮಾ ಮಾಡುವ ವಿಚಾರ ಪ್ರಸ್ತಾಪವಾಯಿತು. ಈ ಬಗ್ಗೆ ಒಂದೆರಡು ಲೈನ್‌ ಹೇಳಿದ್ದೆ. ನಂತರ ಸಿನಿಮಾ ನಿರ್ಮಾಣ ಫೈನಲ್‌ ಆಯಿತು. ಗುರು ಪೂರ್ಣಿಮೆಯ ದಿನ ನಾವು ಮತ್ತೆ ಭೇಟಿಯಾದೆವು ಎಂದು ಯೋಗರಾಜ್ ಭಟ್ ತಿಳಿಸಿದ್ದಾರೆ. 

ಈ ಸಿನಿಮಾಗೆ ಕಥೆ ಮತ್ತು ಕಲಾವಿದರು ಫೈನಲ್‌ ಆಗಿದ್ದು, ಇವೆಲ್ಲವನ್ನೂ ಅವರು ಸದ್ಯದಲ್ಲೇ ಅನೌನ್ಸ್‌ ಮಾಡಲಿದ್ದಾರೆ. ಇದೊಂದು ಪಕ್ಕಾ ಕಮರ್ಷಿಯಲ್‌ ಮತ್ತು ಆ್ಯಕ್ಷನ್‌ ಓರಿಯೆಂಟೆಡ್‌ ಸಿನಿಮಾ. ಕನ್ನಡ , ತೆಲುಗು, ತಮಿಳು ಭಾಷೆಗಳಲ್ಲಿ ನಟಿಸುತ್ತಿರುವ ಕಲಾವಿದರೊಬ್ಬರು ಈ ಸಿನಿಮಾದಲ್ಲಿ ನಾಯಕರಾಗಿದ್ದು, ನಾಯಕಿ ಕೂಡ ದಕ್ಷಿಣ ಭಾರತದ ಖ್ಯಾತ ತಾರೆ ಎನ್ನಲಾಗುತ್ತಿದೆ.

ಯೋಗರಾಜ್‌ ಭಟ್‌ ಮತ್ತು ಸಂಗೀತ ನಿರ್ದೇಶಕ ಹರಿಕೃಷ್ಣ ಕಾಂಬಿನೇಶನ್‌ನಲ್ಲಿ ಸಾಕಷ್ಟು ಯಶಸ್ವಿ ಹಾಡುಗಳು ಬಂದಿದ್ದು, ಬಿ.ಸಿ ಪಾಟೀಲರ ಸಿನಿಮಾಗಾಗಿ ಈ ಜೋಡಿ ಮತ್ತೆ ಒಂದಾಗಿದೆ. ಗುರು ಪೂರ್ಣಿಮೆ ದಿನ ಯೋಗರಾಜ್‌ ಭಟ್ಟರ ಕಚೇರಿಯಲ್ಲಿ ಹರಿಕೃಷ್ಣ, ಯೋಗರಾಜ್‌ ಭಟ್‌ ಮತ್ತು ಅವರ ಸ್ನೇಹಿತ, ನಿರ್ದೇಶಕ ಸೂರಿ, ಸುಧೀರ್‌ ಅರಸ್‌, ನಟ, ಕಥೆಗಾರ ವಿಕಾಸ್‌ ಮತ್ತು ಬಿ.ಸಿ ಪಾಟೀಲ್‌ ಇರುವ ಫೋಟೊಗಳು ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!

ಉಪಚುನಾವಣೆಯಲ್ಲಿ ಗೆಲುವು, ಜನರೊಂದಿಗೆ NDA ಆಳವಾದ ನಂಟಿನ ಪ್ರತೀಕ: ಪ್ರಧಾನಿ ಮೋದಿ

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

'ಅಸಹ್ಯ, ಅತಿರೇಕ.. ನಿಮ್ಮನ್ನು ಈ ರೀತಿ ನೋಡಲು ಇಚ್ಛಿಸುವುದಿಲ್ಲ, BiggBoss ಶೋ ಬಿಟ್ಟು ಹೊರಬನ್ನಿ': Kichcha Sudeepಗೆ ಪತ್ರ