ಪ್ರಜ್ವಲ್ ದೇವರಾಜ್ 
ಸಿನಿಮಾ ಸುದ್ದಿ

ಪ್ರಜ್ವಲ್ ದೇವರಾಜ್ ಈಗ ಬ್ಯುಸಿ ನಟ, ಮತ್ತೆ ಎರಡು ಚಿತ್ರಗಳಿಗೆ ಸಹಿ

ಕೋವಿಡ್ ಲಾಕ್ ಡೌನ್ ನಂತರ, ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರು ಕಳೆದುಹೋದ ಸಮಯವನ್ನು ಸರಿದೂಗಿಸುತ್ತಿದ್ದು, ಎರಡು ಹೊಸ ಚಿತ್ರಗಳಿಗೆ ಸಹಿ ಮಾಡಿದ್ದಾರೆ.

ಬೆಂಗಳೂರು: ಕೋವಿಡ್ ಲಾಕ್ ಡೌನ್ ನಂತರ, ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರು ಕಳೆದುಹೋದ ಸಮಯವನ್ನು ಸರಿದೂಗಿಸುತ್ತಿದ್ದು, ಎರಡು ಹೊಸ ಚಿತ್ರಗಳಿಗೆ ಸಹಿ ಮಾಡಿದ್ದಾರೆ.

ಪ್ರಜ್ವಲ್ ಅವರು ಈಗ ತಮ್ಮ ಮುಂಬರುವ ಚಿತ್ರಗಳಿಗಾಗಿ ಕೆಲವು ಆಸಕ್ತಿದಾಯಕ ವಿಷಯಗಳನ್ನು ಆರಿಸಿಕೊಳ್ಳುತ್ತಿದ್ದಾರೆ. ಅವರು ಪ್ರಸ್ತುತ ವೀರಂ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಮುಂದಿನ ಸೆಪ್ಟೆಂಬರ್‌ನಿಂದ ‘ಗುರುದತ್ತ ಗಾಣಿಗ ಅವರ ಮಾಫಿಯಾ’ದ ಚಿತ್ರೀಕರಣ ಪ್ರಾರಂಭಿಸಲಿದ್ದಾರೆ. ಇದಲ್ಲದೆ, ಅವರು ಹೊಸ ನಿರ್ದೇಶಕರೊಂದಿಗೆ ಒಂದಲ್ಲ ಎರಡು ಹೊಸ ಚಿತ್ರಗಳಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.

“ನಿರ್ದೇಶಕ ಜಕ್ಕಾ ಹರಿಪ್ರಸಾದ್ ಅವರ ಚೊಚ್ಚಲ ಚಿತ್ರದಲ್ಲಿ ಅಭಿನಯಿಸುತ್ತಿದ್ದೇನೆ. ಅವರು ತೆಲುಗು ನಿರ್ದೇಶಕ ಸುಕುಮಾರ್ ಅವರ ಬರವಣಿಗೆ ತಂಡದ ಭಾಗವಾಗಿದ್ದಾರೆ ಮತ್ತು ಶೇ. 100 ರಷ್ಟು ಲವ್ ಕಥೆಯನ್ನು ಬರೆದಿದ್ದಾರೆ. ಅವರು ಈಗ ತಮ್ಮ ವಿಭಿನ್ನ ಕಥೆಯೊಂದಿಗೆ ನಿರ್ದೇಶಕರಾಗಲಿದ್ದಾರೆ, ಅದನ್ನು ನಾನು ಕಳೆದುಕೊಳ್ಳಲು ಬಯಸುವುದಿಲ್ಲ”ಎಂದು ಪ್ರಜ್ವಲ್ ದೇವರಾಜ್ ಹೇಳಿದ್ದಾರೆ.

ಇತರ ಯೋಜನೆಗಾಗಿ, ಪ್ರಜ್ವಲ್ ಅವರು ಸಂಪಾದಕ, ನಿರ್ದೇಶಕ ಕಿರಣ್ ಅವರೊಂದಿಗೆ ಕೆಲಸ ಮಾಡಲಿದ್ದಾರೆ. ಕಿರಣ್ ಅವರು ಥ್ರಿಲ್ಲರ್ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. "ಕಿರಣ್ ಅವರೊಂದಿಗಿನ ನನ್ನ ಪ್ರಾಜೆಕ್ಟ್ ಅಷ್ಟೇ ಆಸಕ್ತಿದಾಯಕವಾಗಿದೆ, ಮತ್ತು ಸ್ಕ್ರಿಪ್ಟ್ ಕೆಲಸ ಮುಂದುವರೆದಿದೆ" ಎಂದು ನಟ ಹೇಳಿದ್ದಾರೆ.

"ಪೋಸ್ಟ್ ಮಾಫಿಯಾ, ನಾನು ಕಿರಣ್ ದಿನಾಂಕಗಳನ್ನು ನಿಗದಿಪಡಿಸಿದ್ದೇನೆ ಮತ್ತು ನಂತರ ಜಕ್ಕಾ ಹರಿಪ್ರಸಾದ್ ಚಿತ್ರದದಲ್ಲಿ ತೊಡಗಿಕೊಳ್ಳುತ್ತೇನೆ. ಈಗ ನಂದ ಕಿಶೋರ್ ಅವರ ಪೋಸ್ಟ್ ಮಾಫಿಯಾ ಚಿತ್ರದ ಚಿತ್ರೀಕರಣ ಪ್ರಾರಂಭಿಸುತ್ತಿದ್ದೇವೆ. ”
ಎಂದಿದ್ದಾರೆ.

ಅದೃಷ್ಟವಶಾತ್, ಚಲನಚಿತ್ರ ನಿರ್ಮಾಪಕರು ವಿಭಿನ್ನ ವಿಷಯಗಳೊಂದಿಗೆ ನನ್ನನ್ನು ಸಂಪರ್ಕಿಸುತ್ತಿದ್ದಾರೆ ಮತ್ತು ಅದನ್ನು ಕೈಗೆತ್ತಿಕೊಳ್ಳುವುದು ಉತ್ತಮ ಎಂದು ನಾನು ಭಾವಿಸಿದೆ" ಎಂದು ಪ್ರಜ್ವಲ್ ಹೇಳಿದ್ದಾರೆ.

ಚೌಕಾದಲ್ಲಿ ನಿರ್ವಹಿಸಿದ ಪಾತ್ರವನ್ನು ನೆನಪಿಸಿಕೊಂಡ ಪ್ರಜ್ವಲ್, ಇದು ಅವರು ತೆಗೆದುಕೊಳ್ಳುವ ಪಾತ್ರಗಳ ವಿಷಯದಲ್ಲಿ ಎಚ್ಚರಿಕೆ ವಹಿಸಲು ಸಹಾಯ ಮಾಡಿದೆ. “ಚೌಕಾ ಚಿತ್ರದ ನಂತರ ನಾನು ಸುಮಾರು 7 ತಿಂಗಳು ಯಾವುದೇ ಚಿತ್ರಗಳನ್ನು ಒಪ್ಪಿಕೊಳ್ಳಲಿಲ್ಲ. ಏಕೆಂದರೆ ಸರಿಯಾದ ರೀತಿಯ ಚಿತ್ರಗಳನ್ನು ಆಯ್ಕೆ ಮಾಡಲು ನಾನು ಸಮಯ ತೆಗೆದುಕೊಂಡೆ. ನಂತರ ಲೈಫ್ ಜೋತೆ ಒಂದ್ ಸೆಲ್ಫಿ, ಜಂಟಲ್ಮನ್ ಮತ್ತು ಇನ್ಸ್ಪೆಕ್ಟರ್ ವಿಕ್ರಮ್ ಚಿತ್ರಗಳಲ್ಲಿ ಅಭಿನಯಿಸಿದೆ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!