ಉಪೇಂದ್ರ 
ಸಿನಿಮಾ ಸುದ್ದಿ

ಉಪೇಂದ್ರ ಮುಂದಿನ ಸಿನಿಮಾಗೆ 'ರಾಜಾಹುಲಿ' ನಿರ್ದೇಶಕ ಗುರು ದೇಶಪಾಂಡೆ ಆ್ಯಕ್ಷನ್ ಕಟ್!

ನಟ ಉಪೇಂದ್ರ ಕೋವಿಡ್ ಪರಿಹಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ, ಇದೇ ವೇಳೆ ಗಾಂಧಿ ನಗರದಲ್ಲಿ ಹೊಸ ಸುದ್ದಿಯೊಂದು ಹರಿದಾಡುತ್ತಿದೆ.

ನಟ ಉಪೇಂದ್ರ ಕೋವಿಡ್ ಪರಿಹಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ, ಇದೇ ವೇಳೆ ಗಾಂಧಿ ನಗರದಲ್ಲಿ ಹೊಸ ಸುದ್ದಿಯೊಂದು ಹರಿದಾಡುತ್ತಿದೆ.

ಉಪೇಂದ್ರ ಅವರ ಮುಂದಿನ ಕಮರ್ಷಿಯಲ್ ಸಿನಿಮಾವನ್ನು ರಾಜಾಹುಲಿ ನಿರ್ದೇಶಕ ಗುರು ದೇಶಪಾಂಡೆ ನಿರ್ದೇಶಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಉಪೇಂದ್ರ ಅವರ ಜೊತೆ ಈಗಾಗಲೇ ಮೊದಲ ಸುತ್ತಿನ ಮಾತುಕತೆ ಪೂರ್ಣಗೊಂಡಿದ್ದು ಈ ಪ್ರಾಜೆಕ್ಟ್ ನಿರ್ದೇಶಕರ ಜಿ ಸಿನಿಮಾಸ್ ಬ್ಯಾನರ್ ಅಡಿ ತಯಾರಾಗಲಿದೆ ಎಂದು ಮೂಲಗಳು ತಿಳಿಸಿವೆ.

ಲಾಕ್ ಡೌನ್ ನಂತರ ನಟ ಉಪೇಂದ್ರ ಆರ್ ಚಂದ್ರು ನಿರ್ದೇಶನದ ಕಬ್ಜ ಸಿನಿಮಾ ಶೂಟಿಂಗ್ ಪೂರ್ಣಗೊಳಿಸಲಿದ್ದಾರೆ, ಇದರ ಜೊತೆಗೆ ಬುದ್ದಿವಂತ-2 ಹಾಗೂ ತ್ರಿಶೂಲಂ ಸಿನಿಮಾ ಕಡೆ ಗಮನ ಹರಿಸಲಿದ್ದಾರೆ. ಈ ಎರಡು ಸಿನಿಮಾಗಳು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿವೆ. 

ಇದೇ ವೇಳೆ ಉಪೇಂದ್ರ ಕೆ.ಮಾದೇಶ ನಿರ್ದೇಶನ ಲಗಾಮ್ ಸಿನಿಮಾದಲ್ಲಿ ಹಾಗೂ ಶಶಾಂಕ್ ನಿರ್ದೇಶನದ ಸಿನಿಮಾದಲ್ಲಿಯೂ ನಟಿಸಲಿದ್ದಾರೆ. ಈಗಾಗಲೇ ಉಪೇಂದ್ರ ತೆಲುಗಿನ ಘಣಿ ಸಿನಿಮಾ ಶೂಟಿಂಗ್ ಪೂರ್ಣಗೊಳಿಸಿದ್ದಾರೆ. ಇದರ ಜೊತೆಗೆ ಮಂಜು ಮಾಂಡವ್ಯ ಸಿನಿಮಾಗೂ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇದೆಲ್ಲದರ ನಡುವೆಯೇ ಗುರು ದೇಶಪಾಂಡೆ ಸಿನಿಮಾದಲ್ಲಿಯೂ ಉಪ್ಪಿ ನಟಿಸಲಿದ್ದಾರೆ ಎಂಬ ಸುದ್ದಿ  ಹರಿದಾಡುತ್ತಿದೆ.

ಯಶ್ ನಟನೆಯ ರಾಜಾಹುಲಿ ಸಿನಿಮಾ ನಿರ್ದೇಶಿಸಿ ಗುರು ದೇಶಪಾಂಡೆ ಯಶಸ್ಸು ಕಂಡಿದ್ದರು. ಅದಾದ ನಂತರ ರುದ್ರ ತಾಂಡವ, ಸಂಹಾರ ಹಾಗೂ ಪಡ್ಡೆಹುಲಿ ಸಿನಿಮಾಗಳಂತ ವಿಭಿನ್ನ ಕಥೆಯ ಚಿತ್ರ ನಿರ್ದೇಶಿಸಿದ್ದಾರೆ.

ಜಂಟಲ್ ಮ್ಯಾನ್ ಅವರ ನಿರ್ಮಾಣದ ಮೊದಲ ಸಿನಿಮಾವಾಗಿದೆ. ಈಗ, ಉಪೇಂದ್ರ ಅವರೊಂದಿಗಿನ ಈ ಯೋಜನೆಯು ಮತ್ತೊಂದು ದೊಡ್ಡ ಟಿಕೆಟ್ ಚಿತ್ರವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ