777 ಚಾರ್ಲಿ ಸಿನಿಮಾ ಸ್ಟಿಲ್ 
ಸಿನಿಮಾ ಸುದ್ದಿ

'ಪ್ಯಾನ್ ಇಂಡಿಯಾ' ಎಂಬುದು ಕೇವಲ ವ್ಯವಹಾರಿಕ ಸಂಬಂಧವಾಗಬಾರದು: '777 ಚಾರ್ಲಿ' ಬಗ್ಗೆ ರಕ್ಷಿತ್ ಶೆಟ್ಟಿ ಮಾತು

ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಸಿನಿಮಾ ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಸೇರಿದಂತೆ ಐದು ಭಾಷೆಗಳಲ್ಲಿ ತೆರೆಕಾಣಲಿದೆ.

ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಸಿನಿಮಾ ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಸೇರಿದಂತೆ ಐದು ಭಾಷೆಗಳಲ್ಲಿ ತೆರೆಕಾಣಲಿದೆ.

ಈ ಚಿತ್ರವನ್ನು ನಟ-ಚಲನಚಿತ್ರ ನಿರ್ಮಾಪಕ ಪೃಥ್ವಿರಾಜ್ ಅವರು ಮಲಯಾಳಂನಲ್ಲಿ ಪ್ರಸ್ತುತಪಡಿಸುವುದಾಗಿ ಈ ಹಿಂದೆ ಘೋಷಿಸಲಾಗಿತ್ತು ಮತ್ತು ಇದೀಗ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಅವರು ತಮ್ಮ ನಿರ್ಮಾಣ ಸಂಸ್ಥೆ ಸ್ಟೋನ್ ಬೆಂಚ್ ಫಿಲ್ಮ್ಸ್ ಅಡಿಯಲ್ಲಿ ತಮಿಳಿನಲ್ಲಿ ಚಿತ್ರವನ್ನು ವಿತರಿಸಲಿದ್ದಾರೆ ಎಂದು ತಿಳಿದುಬಂದಿದೆ.

ಇನ್ನುಳಿದಂತೆ ಕಿರಣ್ ರಾಜ್ ಈ ಚಿತ್ರ ನಿರ್ದೇಶಿಸಿದ್ದು, ಬಿಎಸ್ ಗುಪ್ತಾ, ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿದ್ದಾರೆ. ಜೂನ್ 6 ರಂದು ಟ್ರೈಲರ್ ರಿಲೀಸ್ ಆಗುತ್ತಿದೆ. 

ನಟ ಪೃಥ್ವಿರಾಜ್ ಅವರ ಪ್ರೊಡಕ್ಷನ್ ಹೌಸ್ 777 ಚಾರ್ಲಿ ಚಿತ್ರದ ಮಲಯಾಳಂ ವಿತರಣ ಹಕ್ಕನ್ನು ಖರೀದಿ ಮಾಡಿದೆ. ಬಗ್ಗೆ ನಟ ಸ್ವತಃ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಚಿತ್ರದ ಕೆಲವು ದೃಶ್ಯಗಳನ್ನು ವೀಕ್ಷಣೆ ಮಾಡಿರುವ ಪೃಥ್ವಿರಾಜ್ ಫಿದಾ ಆಗಿದ್ದಾರೆ. ಚಿತ್ರ ಹೃದಯಸ್ಪರ್ಶಿಯಾಗಿದೆ ಎಂದಿರುವ ಪೃಥ್ವಿರಾಜ್ ಚಿತ್ರದ ಭಾಗವಾಗಿರುವುದು ಸಂತೋಷವಾಗಿದೆ ಎಂದು ಹೇಳಿದ್ದಾರೆ.

777 ಚಾರ್ಲಿಯನ್ನು ಪ್ಯಾನ್-ಇಂಡಿಯನ್ ಪ್ರೇಕ್ಷಕರ ಬಳಿಗೆ ಕರೆದೊಯ್ಯುವ ನಮ್ಮ ಕ್ರಮಗಳು ಸರಿಯಾದ ದಾರಿಯಲ್ಲಿ ಸಾಗುತ್ತಿವೆ" ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ. 

ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ರಕ್ಷಿತ್ ಶೆಟ್ಟಿ, ಭಾಷೆ ಎಂಬುದು ಕೇವಲ ವ್ಯವಹಾರ ಸಂಬಂಧವಾಗಬಾರದು. ಎಲ್ಲಾ ಪ್ರೇಕ್ಷಕರನ್ನು ತಲುಪಬೇಕು ಎಂಬುದು ನಮ್ಮ ಬಯಕೆ ಎಂದು ರಕ್ಷಿತ್ ಶೆಟ್ಟಿ ಬರೆದುಕೊಂಡಿದ್ದಾರೆ. ಕೋವಲ ಶೋ ರೀಲ್ ನೋಡುವ ಮೂಲಕ ಪೃಥ್ವಿರಾಜ್ ಸಿನಿಮಾ ವಿತರಿಸಲು ಮುಂದೆ ಬಂದಿದ್ದಾರೆ, ಮಲಾಯಾಳಂ  ಪೇಕ್ಷಕರಿಗೆ ನಮ್ಮ ಸಿನಿಮಾವನ್ನು ತಲುಪಿಸಲು ಮುಂದಾಗಿದ್ದಾರೆ ಎಂದು ತಿಳಿಸಿದ್ದಾರೆ.

ರಕ್ಷಿತ್ ಶೆಟ್ಟಿ ನಟನೆಯ ಚಾರ್ಲಿ ಸಿನಿಮಾ ಟೀಸರ್ ಜೂನ್ 6 ರಂದು ರಿಲೀಸ್ ಆಗಲಿದೆ. ಕಾರ್ತಿಕ್ ಸುಬ್ಬರಾಜು ಕೂಡ ಪಾಸಿಟಿವ್ ಪ್ರತಿಕ್ರಿಯೆ ನೀಡಿದ್ದಾರೆ. ಜಿಎಸ್ ಗುಪ್ತಾ ಅವರ ಪರಮಾವ್ ಸ್ಟುಡಿಯೋಸ್ ಸಹಯೋಗದೊಂದಿಗೆ 777 ಚಾರ್ಲಿ ನಿರ್ಮಾಣವಾಗಿದ್ದು, ನೋಬಿನ್ ಪಾಲ್ ಸಂಗೀತ ನೀಡಿದ್ದಾರೆ. ಮಲಯಾಳಂ ನಟ-ಚಲನಚಿತ್ರ ನಿರ್ಮಾಪಕ-ಗಾಯಕ ವಿನೀತ್ ಶ್ರೀನಿವಾಸನ್ ಅವರು ಟೀಸರ್ ನ ಮಲಯಾಳಂ ಆವೃತ್ತಿಗೆ ಹಿನ್ನೆಲೆ ಧ್ವನಿ ನೀಡಿದ್ದು, ಒಂದು ಹಾಡನ್ನು ಹಾಡಿದ್ದಾರೆ.

ಬಾಬಿ ಸಿಮ್ಹಾ ಚೊಚ್ಚಲವಾಗಿ ಕನ್ನಡ ಸಿನಿಮಾದಲ್ಲಿ ನಟಿಸಿದ್ದು, ಸಂಗೀತಾ ಶೃಂಗೇರಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಮತ್ತು ಡ್ಯಾನಿಶ್ ಸೈಟ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರತಂಡ  ಸಿನಿಮಾವನ್ನು ಡಿಸೆಂಬರ್‌ನಲ್ಲಿ ಬಿಡುಗಡೆ ಮಾಡಲು ಪ್ಲಾನ್ ಮಾಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Ramnath Goenka Sahithya Samman 2025: ಸಾಹಿತಿ ಚಂದ್ರಶೇಖರ ಕಂಬಾರರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ

ಬಳ್ಳಾರಿ ಫೈರಿಂಗ್: ಜನಾರ್ದನ ರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ!

ಗಂಡನಿಲ್ಲದಾಗ ಪ್ರೇಮಿಯನ್ನು ಕರೆಸಿಕೊಂಡ ವಿವಾಹಿತೆ ಮಾಡಿದ್ದು ಘೋರ ಕೃತ್ಯ: ಮರ್ಮಾಂಗ ಕಳೆದುಕೊಂಡು ವ್ಯಕ್ತಿ ನರಳಾಟ!

'ನೆರೆಹೊರೆಯವರು ಕೆಟ್ಟವ್ರು, ನಾವೇನ್ ಮಾಡ್ಬೇಕು ಅನ್ನೋದನ್ನ ಬೇರೆಯವ್ರು ಹೇಳೋದ್ ಬೇಡ: ಜೈಶಂಕರ್‌ ಖಡಕ್ ವಾರ್ನಿಂಗ್

ಬರೋಬ್ಬರಿ 10 ಕೋಟಿ ರೂ. ಲಂಚ: ಗುಜರಾತ್ ಐಎಎಸ್ ಅಧಿಕಾರಿಯನ್ನು ಬಂಧಿಸಿದ ED

SCROLL FOR NEXT