ಸಂಯುಕ್ತಾ ಹೆಗ್ಡೆ 
ಸಿನಿಮಾ ಸುದ್ದಿ

'ಪಂಚ್ ಬೀಟ್' ಸೀಸನ್-2 ವೆಬ್ ಸಿರೀಸ್: 'ಮೀಶಾ' ಪಾತ್ರದಲ್ಲಿ ಸಂಯುಕ್ತಾ ಹೆಗ್ಡೆ!

ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಆರ್ಯ ಎಂಬ ಪಾತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ನಟಿ ಸಂಯುಕ್ತಾ ಹೆಗ್ಡೆ ತಮಿಳು, ತೆಲುಗು ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಆರ್ಯ ಎಂಬ ಪಾತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ನಟಿ ಸಂಯುಕ್ತಾ ಹೆಗ್ಡೆ ತಮಿಳು, ತೆಲುಗು ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ.

ನಟಿ ಸಂಯುಕ್ತಾ ಹೆಗ್ಡೆ ಸದ್ಯ ಪಂಚ್ ಬೀಟ್ ಸೀಸನ್-2 ಎಂಬ ಹಿಂದಿ ವೆಬ್ ಸಿರೀಸ್ ನಲ್ಲಿ ಅಭಿನಯಿಸುತ್ತಿದ್ದಾರೆ. ಈ ವಿಷಯವನ್ನು ಸಂಯುಕ್ತಾ  ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಮೀಶಾ ನಿಮಗೆ ಹೆಲೋ ಹೇಳುತ್ತಿದ್ದಾಳೆ. ನಿಮ್ಮನ್ನು ಭೇಟಿ ಮಾಡಲು ಕಾತುರಳಾಗಿದ್ದಾಳೆ ಎಂದು ಸಂಯುಕ್ತ ಬರೆದುಕೊಂಡಿದ್ದಾರೆ, ಅಕ್ಷಯ್ ಚೌಬೆ ನಿರ್ದೇಶನದ ವೆಬ್ ಸರಣಿಯನ್ನು ಎಕ್ತಾ ಕಪೂರ್ ನಿರ್ಮಾಣ ಮಾಡುತ್ತಿದ್ದಾರೆ.

ಜೂನ್ 11 ರಂದು ಟ್ರೇಲರ್ ರಿಲೀಸ್ ಆಗಲಿದೆ., ಮಾರ್ಷಲ್ ಆರ್ಟ್ಸ್ ನಲ್ಲಿ ಪರಿಣಿತೆ ಮೀಶಾ ತನ್ನ ತಂದೆಯ ಜಿಮ್ ನಡೆಸುತ್ತಿರುತ್ತಾಳೆ, ಆಕೆ ಶ್ರೀಮಂತೆ, ಹಾಟ್, ಕ್ರೇಜಿ, ಆಕೆ ಸೂಪರ್ ಬೈಕ್ ರೈಡ್ ಮಾಡುತ್ತಾಳೆ, ಇದೊಂದು ಅದ್ಭುತ ಪಾತ್ರವಾಗಿದೆ ಎಂದು ಸಂಯುಕ್ತಾ ಹೇಳಿದ್ದಾರೆ.
 
ಈ ಮೊದಲು ನಾನು ಈ ರೀತಿಯ ಪಾತ್ರದಲ್ಲಿ ನಟಿಸಿರಲಿಲ್ಲ, ನಟನೆಗೆ ಅತಿ ಹೆಚ್ಚು ಸ್ಕೋಪ್ ಇದೆ, ನನ್ನ ದೈನಂದಿನ ಜೀವನದಲ್ಲಿ ಬಳಸುವ ಕೆಲವು ಅಂಶಗಳನ್ನು ಇದರಲ್ಲಿ ಪ್ರಯೋಗಿಸಿದ್ದೇನೆ, ಈ ವೆಬ್ ಸಿರೀಸ್ ನನಗೆ ತುಂಬಾ ಹತ್ತಿರವಾಗಿದೆ ಏಕೆಂದರೆ ಪಾತ್ರ ನನ್ನ ನೈಜ ಜೀವನಂತಿದೆ ಎಂದು ಹೇಳಿದ್ದಾರೆ.

ಪಂಚ್ ಬೀಟ್ ಸೀಸನ್ 2 ನಲ್ಲಿ ಪ್ರಿಯಾಂಕ್ ಶರ್ಮಾ, ಸಮೀರ್ ಸೋನಿ, ನಿಕಿ ವಾಲಿಯಾ, ಸಿಂಗುಜಾ ಥ್ರೂಲಪತಿ, ಕಾಜೋಲ್ ತ್ಯಾಗಿ, ಸಿದ್ಧಾರ್ಥ್ ಶರ್ಮಾ, ಖುಷಿ ಜೋಶಿ, ಅನುಜ್  ಚೌದರಿ, ಶತಾಫ್, ಮತ್ತು ನಿಖಿಲ್ ಸೇರಿದಂತೆ ಹಲವಾರು ನಟರು ಇದ್ದಾರೆ.  ಜೂನ್ 27 ರಿಂದ ಸ್ಟ್ರೀಮಿಂಗ್ ಪ್ರಾರಂಭವಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೀದಿ ಜೊತೆಗೆ ಕಾಂಗ್ರೆಸ್ ಗೂ ಶಾಕ್; TMC ಬೆಂಬಲ ಬೆನ್ನಲ್ಲೇ ನಂದಿಗ್ರಾಮ 'ಕೈ' ಅಭ್ಯರ್ಥಿ ಕೊಲೆ ಕೇಸ್`ನಲ್ಲಿ ಅರೆಸ್ಟ್!

ಟಿ. ನರಸೀಪುರ ಶೋಭಾಯಾತ್ರೆ: ಮಸೀದಿ ಮುಂದೆ ಪಟಾಕಿ ಸಿಡಿಸಿ ಸಂಭ್ರಮ, ಒಂದುವರೆ ವರ್ಷದಲ್ಲಿ ನಾವು ಬರ್ತೀವಿ, ಅವಾಗ ಲೆಕ್ಕ ಚುಪ್ತ ಮಾಡ್ತೀವಿ- ಪ್ರತಾಪ್ ಸಿಂಹ

ಸಾಕ್ಷ್ಯ ವಿಚಾರಣೆ ವೇಳೆ ದರ್ಶನ್ ಖುದ್ದು ಹಾಜರಾಗಲು ಹೈಕೋರ್ಟ್ ಒಪ್ಪಿಗೆ, ಷರತ್ತು ಅನ್ವಯ!

18 ಎಸೆತ, 38 ರನ್: ಜೂನಿಯರ್ Dravid ಅಬ್ಬರಕ್ಕೆ ಆಸಿಸ್ ತತ್ತರ; 7 ರನ್‌ಗಳಿಂದ ಗೆದ್ದ ಭಾರತ U-19 ತಂಡ

T20 ಕ್ರಿಕೆಟ್‌ನಲ್ಲಿ ಹೊಸ ವಿಶ್ವ ದಾಖಲೆ; 15,000 ರನ್‌ ಗಡಿ ದಾಟಿದ Jos Buttler; ಪೊಲಾರ್ಡ್ ದಾಖಲೆ ಧ್ವಂಸ!