ಅಮ್ಲೆಟ್ ಸಿನಿಮಾ ಸ್ಟಿಲ್ 
ಸಿನಿಮಾ ಸುದ್ದಿ

ಜುಲೈ 9 ರಂದು ನೇರವಾಗಿ ಕಲರ್ಸ್ ಕನ್ನಡ ಚಾನೆಲ್ ನಲ್ಲಿ 'ಆಮ್ಲೆಟ್' ವರ್ಲ್ಡ್ ಪ್ರೀಮಿಯರ್

ಇ-ಸಮುದಾಯದ ಸಹಕಾರದೊಂದಿಗೆ ಶ್ರೀಮತಿ ಸರಿತಾ ಓಂಪ್ರಕಾಶ್ ಮತ್ತು ಪ್ರಸನ್ನ ಮಿಯಾಪುರಂ ನಿರ್ಮಾಣದ ಮತ್ತು ವೆಂಕಟ್ ಭಾರದ್ವಾಜ್ ನಿರ್ದೇಶನದ ಕನ್ನಡದ ಆಮ್ಲೆಟ್ ಚಿತ್ರವು ಜುಲೈ 9ರಂದು ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಪ್ರದರ್ಶನಗೊಳ್ಳಲಿದೆ.

ಅಮೃತ ಫಿಲಂ ಸೆಂಟರ್ ಸಂಸ್ಥೆ ಅಡಿ ನಿರ್ಮಾಣವಾಗಿರುವ, ಇ-ಸಮುದಾಯದ ಸಹಕಾರದೊಂದಿಗೆ ಶ್ರೀಮತಿ ಸರಿತಾ ಓಂಪ್ರಕಾಶ್ ಮತ್ತು ಪ್ರಸನ್ನ ಮಿಯಾಪುರಂ ನಿರ್ಮಾಣದ ಮತ್ತು ವೆಂಕಟ್ ಭಾರದ್ವಾಜ್ ನಿರ್ದೇಶನದ ಕನ್ನಡದ ಆಮ್ಲೆಟ್ ಚಿತ್ರವು ಜುಲೈ 9ರಂದು ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಪ್ರದರ್ಶನಗೊಳ್ಳಲಿದೆ.

ಥಿಯೇಟರ್ ನಲ್ಲಿ ರಿಲೀಸ್ ಆಗದೇ ಈ ರೀತಿ ಪ್ರದರ್ಶನಗೊಳ್ಳುತ್ತಿರುವ ಕನ್ನಡದ ಮೊಟ್ಟ ಮೊದಲ ಚಿತ್ರ ಎಂದು ಚಿತ್ರ ನಿರ್ಮಾಪಕರಾದ ಸರಿತಾ ಓಂ ಪ್ರಕಾಶ್ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಆಡಿಯೋ, ಟೀಸರ್ ಮತ್ತು ಚಿತ್ರಕ್ಕೆ ಸಂಬಂಧಪಟ್ಟ ಕುತೂಹಲ ವಿಷಯಗಳನ್ನು ಬಿಡುಗಡೆ ಮಾಡಲಿದ್ದೇವೆ ಎಂದು ಸರಿತಾ ಓಂಪ್ರಕಾಶ್ ಹೇಳಿದ್ದಾರೆ.

ಆಮ್ಲೆಟ್ ಚಿತ್ರ ಕ್ಲಾಸ್ ಕಾಮಿಡಿ ಚಿತ್ರವಾಗಿದ್ದು, ನೋಡುಗರಿಗೆ ಒಳ್ಳೆಯ ಮನೋರಂಜನೆ ನೀಡಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ. ಇ-ಸಮುದಾಯ ಎಂಬ ಸಂಸ್ಥೆ ಈ ಚಿತ್ರಕ್ಕೆ ಸಹಕಾರ ನೀಡಿದೆ.  

ಸಂಯುಕ್ತ ಹೊರನಾಡು, ಶಿನವ(ನವೀನ್), ಬಲರಾಜ ವಾಡಿ, ಶರ್ಮಿತ ಗೌಡ, ನಿರಂಜನ್ ದೇಶಪಾಂಡೆ, ಪಿ.ಡಿ. ಸತೀಶ್ ಚಂದ್ರ, ಮಧುರ, ಬಿಗ್ ಬಾಸ್ ಖ್ಯಾತಿಯ ಸುಜಾತ ಅಕ್ಷಯ್, ಜ್ಯೂಸ್​ ಕುಡಿತೀಯಾ ಖ್ಯಾತಿಯ ವಿರಾಜ್ ಕನ್ನಡಿಗ, ವಂಶಿಧರ್ ಭೋಗರಾಜ್, ಲಾರೆನ್ಸ್ ಮತ್ತು ಹಲವಾರು ರಂಗಭೂಮಿ ಕಲಾವಿದರು ಆಮ್ಲೆಟ್ ಚಿತ್ರದಲ್ಲಿ ಕಾಣಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪರಸ್ಪರ ನಂಬಿಕೆ, ಗೌರವದ ಆಧಾರದ ಮೇಲೆ ಸಂಬಂಧ ಮುಂದುವರಿಸಲು ಬದ್ಧ: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ಪ್ರಧಾನಿ ಮೋದಿ

SCO ಶೃಂಗಸಭೆ: ಮೋದಿ ಭೇಟಿ ಹಿನ್ನೆಲೆ, ಅಮೆರಿಕದ ಸುಂಕಾಸ್ತ್ರ ವಿರುದ್ಧ ರಷ್ಯಾ ಅಧ್ಯಕ್ಷ ಪುಟಿನ್ ಕಿಡಿ! ಹೇಳಿದ್ದು ಏನು?

Pepsi To McDonald: ಸುಂಕ ಸಂಘರ್ಷದ ನಡುವೆ ಅಮೆರಿಕದ ದೈತ್ಯ ಕಂಪನಿಗಳಿಗೆ ಭಾರತದಲ್ಲಿ #Boycott ಬಿಸಿ!

SCO ಶೃಂಗಸಭೆ: ಪುಟಿನ್ ಭೇಟಿಗೂ ಮುನ್ನ ಉಕ್ರೇನ್ ಜೊತೆ ಮೋದಿ ಮಾತು; ರಷ್ಯಾಕ್ಕೆ ಸೂಕ್ತ ಸಂದೇಶ ನೀಡಲು ಭಾರತ ಸಿದ್ಧ!

US President: ಅನಾರೋಗ್ಯದ ವದಂತಿ, ಕೆಲವು ದಿನಗಳಿಂದ ಸಾರ್ವಜನಿಕವಾಗಿ ಕಾಣಿಸದ ಡೊನಾಲ್ಡ್ ಟ್ರಂಪ್!

SCROLL FOR NEXT