ಸಿನಿಮಾ ಸುದ್ದಿ

'ಅನಿರೀಕ್ಷಿತ' ಮೂಲಕ ಮಿಮಿಕ್ರಿ ದಯಾನಂದ್ ನಿರ್ದೇಶನಕ್ಕೆ ಪ್ರವೇಶ

Shilpa D

ಮಿಮಿಕ್ರಿ ಮೂಲಕ ಖ್ಯಾತಿ ಹೆಚ್ಚಿಸಿಕೊಂಡವರು ದಯಾನಂದ್. ಅವರು ಮಿಮಿಕ್ರಿ ದಯಾನಂದ್ ಎಂದೇ ಫೇಮಸ್. ಈಗ ಅವರು ನಿರ್ದೇಶನಕ್ಕೆ ಇಳಿದಿದ್ದಾರೆ. ಲಾಕ್​ಡೌನ್​ ಟೈಮನಲ್ಲೇ ಸಿನಿಮಾ ಕೂಡ ಸಿದ್ಧಪಡಿಸಿದ್ದಾರೆ.

59 ವರ್ಷದ ಕಾನ್ಸ್ ಸ್ಟೇಬಲ್ ಒಬ್ಬರು ತಮ್ಮ ಮಗನನ್ನು ಕಳೆದುಕೊಂಡು ಅನುಭವಿಸುವ ಯಾತನೆ ಬಗ್ಗೆ ಸಿನಿಮಾ ಸಾಗುತ್ತದೆ. ಜೀವನದ ಅನಿರೀಕ್ಷಿತ ತಿರುವುಗಳು ಬದುಕಿನ ಗತಿಯನ್ನೇ ಬದಲಿಸಿ, ಯಾರೂ ಕಲಿಸದ ಪಾಠವನ್ನು ಕಲಿಸಿಬಿಡುತ್ತದೆ. ಇಂತಹ ಎಳೆಯೊಂದು, ಕುತೂಹಲ ಹಿಡಿದಿಟ್ಟುಕೊಂಡು ಅನಿರೀಕ್ಷಿತ’ ಚಿತ್ರ ನಿರ್ದೇಶನ ಮಾಡಿದ್ದಾರೆ ದಯಾನಂದ್. ಎರಡು ಪಾತ್ರಗಳನ್ನಿಟ್ಟುಕೊಂಡು ಒಂದೇ ಚಿತ್ರೀಕರಣ ಸ್ಥಳವನ್ನು ನಾಲ್ಕು ಲೊಕೇಶನ್​​ಗಳಂತೆ ಬಳಸಲಾಗಿದೆ. 13 ಮಂದಿ ಸಿನಿಮಾಗಾಗಿ ಕೆಲಸ ಮಾಡಿದ್ದಾರೆ.

ಎಸ್.ಕೆ.ಟಾಕೀಸ್ ಲಾಂಛನದಲ್ಲಿ ‌ಶಾಂತಕುಮಾರ್‌ ನಿರ್ಮಿಸಿರುವ ಈ‌ ಚಿತ್ರಕ್ಕೆ ಸಂತೋಷ್ ಕೊಡಂಕೇರಿ, ರಘು ಎಸ್ ಹಾಗೂ ಮಿಮಿಕ್ರಿ ದಯಾನಂದ್ ಸಹ ನಿರ್ಮಾಪಕರು.‌ ಮಿಮಿಕ್ರಿ ದಯಾನಂದ್ ಅವರೇ ಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆಯನ್ನು ನೆಳ್ಳುಳ್ಳಿ ರಾಜಶೇಖರನ್ ಬರೆದಿದ್ದಾರೆ. ಗುರುಕಿರಣ್ ಸಂಗೀತ ನೀಡಿದ್ದಾರೆ. ಜೀವನ್ ಗೌಡ ಛಾಯಾಗ್ರಹಣ ಹಾಗೂ ರಘು ಅವರ ಸಂಕಲನ ಈ ಚಿತ್ರಕ್ಕಿದೆ.‌ ಚಿತ್ರದಲ್ಲಿ ಕೇವಲ ಎರಡು ಪಾತ್ರಗಳಿದ್ದು,‌ ಮಿಮಿಕ್ರಿ ದಯಾನಂದ್ ಹಾಗೂ ಭಾಮ ಅಭಿನಯಿಸಿದ್ದಾರೆ.

SCROLL FOR NEXT