ಸಿನಿಮಾ ಸುದ್ದಿ

ಕೊರೋನಾ ಸಂಕಷ್ಟ: ಚಿತ್ರರಂಗದ ಸಂತ್ರಸ್ತರಿಗೆ "ಕರ್ನಾಟಕ ಚಿತ್ರೋದ್ಯಮ"ದ ನೆರವು

Vishwanath S

ಬೆಂಗಳೂರು: ಕಳೆದೊಂದು ವರ್ಷದಿಂದ ಕೊರೋನಾದಿಂದ ಚಿತ್ರರಂಗ ಭಾಗಶಃ ಬಂದ್ ಆಗಿದೆ. ಚಿತ್ರೋದ್ಯಮವನ್ನೇ ನಂಬಿ ಬದುಕುತ್ತಿದ್ದ ಹಲವಾರು ಕುಟುಂಬಗಳು ಅಕ್ಷರಶಃ ನಲುಗಿ ಹೋಗಿವೆ.

ಇಂಥ ಸಮಯದಲ್ಲಿ ನಮ್ಮ ಬಂಧುಗಳ ಸಹಾಯಕ್ಕೆ ನೆರವಾಗುವುದು ನಮ್ಮೆಲ್ಲರ ಕರ್ತವ್ಯ ಎಂಬ ಉದ್ದೇಶದಿಂದ "ಕರ್ನಾಟಕ ಚಿತ್ರೋದ್ಯಮ"ದ ನಾಗೇಶ್ ಕುಮಾರ್ ಯು ಎಸ್, ನಾಗೇಂದ್ರ ಅರಸ್, ಜೆ.ಜೆ ಶ್ರೀನಿವಾಸ್, ಕುಮಾರ್ ಎಸ್ ತಮ್ಮ ಗೆಳೆಯರನ್ನು ಒಗ್ಗೂಡಿಸಿ ಅವರ ಸಹಾಯವನ್ನೊ ಪಡೆದು ಕಳೆದೊಂದು ವರ್ಷದಿಂದ ಅತಿ ಸಂಕಷ್ಟದಲ್ಲಿರುವ ಚಿತ್ರೋದ್ಯಮದವರಿಗೆ ಸಹಾಯ ಮಾಡುತ್ತಾ ಬಂದಿದ್ದಾರೆ. 

ಸಂತ್ರಸ್ತರಿಗೆ ಮೆಡಿಸಿನ್ ಕಿಟ್" ಕೊರೋನಾ ಪೀಡಿತರ ಉಸಿರಾಟದ ತೊಂದರೆ ಯಾದವರಿಗೆ "ಆಕ್ಸಿಜನ್ ಕಿಟ್" "ದಿನಸಿ ಕಿಟ್" ಮತ್ತು ದೂರದ ಊರುಗಳಿಗೆ ಹೋಗಲಾಗದ ಪರಿಸ್ಥಿತಿ ಬಂದಾಗ ಅವರಿಗೆ ಧನಸಹಾಯ ಮಾಡುತ್ತಾ ಬರುತ್ತಿದ್ದಾರೆ. ಅದರಂತೆ ಈ ಕೊರೋನಾ ಎರಡನೇ ಅಲೆಯಲ್ಲಿಯೂ ಸಹ ಸಂಕಷ್ಟದಲ್ಲಿರುವ ಚಿತ್ರೋದ್ಯಮ ಬಂಧುಗಳಿಗಾಗಿ ಒಂದು ಸಾವಿರ ದಿನಸಿ ಕಿಟ್ ಗಳನ್ನು ಕೊಡುವ ಗುರಿ ಹಮ್ಮಿಕೊಂಡಿದ್ದಾರೆ.

ಈಗಾಗಲೇ ಈ ಕಾರ್ಯ ಶುರುವಾಗಿದ್ದು ನೇರ ಸಂತ್ರಸ್ಥರಿಗೆ ಕರೆ ಮಾಡಿ ಅವರಿಗೆ ಕಿಟ್ ತಲುಪಿಸುವ ವ್ಯವಸ್ಥೆ ಆಗುತ್ತಿದೆ ಇಂತಹ ಸಂಕಷ್ಟ ಸಮಯದಲ್ಲಿ ಈ ನಾಲ್ವರ ನಿಸ್ವಾರ್ಥ ಸೇವೆಯನ್ನು ಚಿತ್ರೋದ್ಯಮ ಶ್ಲಾಘಿಸಿದೆ.

SCROLL FOR NEXT