ದ್ವಿಪಾತ್ರ ಚಿತ್ರ ಪೋಸ್ಟರ್ 
ಸಿನಿಮಾ ಸುದ್ದಿ

ಬಿಗ್ ಬಾಸ್ ಸ್ಪರ್ಧಿ ರಘುಗೌಡಗೆ ಸಿನಿಮಾ ಆಫರ್, ಕ್ರೈಂ-ಥ್ರಿಲ್ಲರ್ 'ದ್ವಿಪಾತ್ರ'ದಲ್ಲಿ ಹ್ಯಾಕರ್!

ಚಾರ್ಟರ್ಡ್ ಅಕೌಂಟೆಂಟ್ ಶ್ರೀವತ್ಸ ಆರ್ ದ್ವಿಪಾತ್ರ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಇದರಲ್ಲಿ ಚಂದು ಗೌಡರನ್ನು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡರೆ ಬಿಗ್ ಬಾಸ್ ಸ್ಪರ್ಧಿ ರಘು ಗೌಡ ಸೈಬರ್ ಹ್ಯಾಕರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಚಾರ್ಟರ್ಡ್ ಅಕೌಂಟೆಂಟ್ ಶ್ರೀವತ್ಸ ಆರ್ ದ್ವಿಪಾತ್ರ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಇದರಲ್ಲಿ ಚಂದು ಗೌಡರನ್ನು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡರೆ ಬಿಗ್ ಬಾಸ್ ಸ್ಪರ್ಧಿ ರಘು ಗೌಡ ಸೈಬರ್ ಹ್ಯಾಕರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. 

ಕಥೆ ಬರೆದಿರುವ ಶ್ರೀವಾತ್ಸ ಅವರೇ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಶೇಕಡಾ 60ರಷ್ಟು ಚಿತ್ರೀಕರಣ ಪೂರ್ಣಗೊಂಡಿದ್ದು ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಲಾಗಿದೆ. ಚಂದು ಪ್ರಕಾರ, ದ್ವಿಪಾತ್ರ ಸರಣಿ ಕೊಲೆಗಾರನ ಬಗೆಗಿನ ಆಸಕ್ತಿದಾಯಕ ವಿಷಯವಾಗಿದೆ. ಚಿತ್ರದ ಟೈಟಲ್ ಸೈಕೋಪಾತ್ ಕೊಲೆಗಾರನ ಬಹು ಅಸ್ವಸ್ಥತೆಯ ಗುಣಲಕ್ಷಣವನ್ನು ವಿವರಿಸುತ್ತದೆ. ನಾನು ಡಿಸಿಪಿ ಅಧಿಕಾರಿಯ ಪಾತ್ರವನ್ನು ನಿರ್ವಹಿಸುತ್ತೇನೆ. ಇದು ವಿಷಯ-ಆಧಾರಿತ ಮತ್ತು ಗಂಭೀರವಾದ ಚಿತ್ರಕಥೆಯಾಗಿದ್ದು, ನಾಯಕಿಯ ಪಾತ್ರವರ್ಗ ಸೃಷ್ಟಿಲಾಗಿಲ್ಲ ಎಂದು ಚಂದು ಹೇಳಿದರು. 

ಬೆಂಗಳೂರು, ಚಿಕ್ಕಮಗಳೂರು, ತುಮಕೂರು ಮತ್ತು ಸಕಲೇಶಪುರದಲ್ಲಿ 60ರಷ್ಟು ಚಿತ್ರೀಕರಣ ಮಾಡಲಾಗಿದ್ದು ಇನ್ನುಳಿದ ಭಾಗಗಳ ಚಿತ್ರೀಕರಣಕ್ಕಾಗಿ ಉತ್ತರ ಭಾರತ ಮತ್ತು ಲೇಹ್ ಕಡೆಗೆ ತೆರಳಲು ಸಜ್ಜಾಗಿದ್ದರು. ಆದರೆ ಕೊರೋನಾ ಲಾಕ್ ಡೌನ್ ನಿಂದಾಗಿ ಯೋಜನೆಯನ್ನು ಮುಂದೂಡಲಾಗಿದೆ.

ಇನ್ನು ಕೊರೋನಾ ಪರಿಸ್ಥಿತಿಗಳ ಮೇಲೆ ಮುಂದಿನ ಚಿತ್ರೀಕರಣ ನಿಂತಿದೆ. ಸತ್ಯಶ್ರಯ ನಿರ್ಮಿಸಿರುವ ಈ ಚಿತ್ರದಲ್ಲಿ ಸುಚೇಂದ್ರ ಪ್ರಸಾದ್, ಪಾಯಲ್ ಚೆಂಗಪ್ಪ ಮತ್ತು ಅಶ್ವತ್ ನಿನಾಸಂ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಚಿತ್ರಕ್ಕೆ ಮಹಾರಾಜ್ ತೇವರ್ ಸಂಗೀತ ಸಂಯೋಜಿಸಿದ್ದಾರೆ.

ಲಕ್ಷ್ಮಿ ಬಾರಮ್ಮಾ ಧಾರಾವಾಹಿಯೊಂದಿಗೆ ಕಿರುತೆರೆಗೆ ಎಂಟ್ರಿಕೊಟ್ಟಿದ್ದ ಚಂದು, ಕೊನೆಯ ಬಾರಿಗೆ ದರ್ಶನ್-ನಟಿಸಿದ ರಾಬರ್ಟ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ವಿಲನ್ ಗಳಲಲ್ಲಿ ಒಬ್ಬರಾಗಿ ನಟಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT