ಸಿನಿಮಾ ಸುದ್ದಿ

ಒಟಿಟಿಯಲ್ಲಿ 'ಐರಾವನ್' ಬಿಡುಗಡೆಗೆ ಚಿಂತನೆ: ಕಾರ್ತಿಕ್ ಜಯರಾಮ್

Vishwanath S

ನಟ ಕಾರ್ತಿಕ್ ಜಯರಾಮ್ ಋಷಿಯಲ್ಲಿದ್ದಾರೆ. ಇದಕ್ಕೆ ಕಾರಣ ಅವರ ಮೂರು ಭಾಷೆಗಳಲ್ಲಿನ ಚಿತ್ರಗಳು. ಕನ್ನಡದಲ್ಲಿ ಛಾಪು ಮೂಡಿಸಿರುವ ಅವರು ತಮ್ಮ ತಮಿಳಿನ ಚೊಚ್ಚಲ ಚಿತ್ರದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಅಲ್ಲದೆ ತಮ್ಮ ಎರಡನೇ ಬಾಲಿವುಡ್ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಲು ಎದುರು ನೋಡುತ್ತಿದ್ದಾರೆ. ಇನ್ನು ಕನ್ನಡದ ಐರಾವನ್ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ರಾಮ್ಸ್ ರಂಗ ಚೊಚ್ಚಲ ನಿರ್ದೇಶನದ ಥ್ರಿಲ್ಲರ್ ಸಿನಿಮಾ ಐರಾವನ್. ಕಾರ್ತಿಕ್ ಜಯರಾಮ್ ಜನ್ಮದಿನ ಮೇ 1ರಂದು ಭಾವಗೀತಾತ್ಮಕ ವೀಡಿಯೊವನ್ನು ಚಿತ್ರತಂಡ ಬಿಡುಗಡೆ ಮಾಡಿದ್ದರು. 'ಪ್ರಸ್ತುತ ಸಾಂಕ್ರಾಮಿಕ ರೋಗ ಅತಂತ್ರಸ್ಥಿತಿ ನಿರ್ಮಾಣ ಮಾಡಿದೆ. ಇನ್ನು ಲಾಕ್ ಡೌನ್ ನಿಂದಾಗಿ ನಾವು ಮನೆಯಲ್ಲೇ ಇರಬೇಕಾಗಿದೆ. ಇದಲ್ಲದೆ, ಲಾಕ್‌ಡೌನ್ ನಿಂದಾಗಿ ಚಿತ್ರಮಂದಿರಗಳನ್ನು ಮತ್ತೆ ತೆರೆಯಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಅಲ್ಲದೆ ಶೇ. 50ರಷ್ಟು ಆಸನಗಳ ಭರ್ತಿಗೆ ಮಾತ್ರ ಅವಕಾಶ ಸಿಗುತ್ತದೆ. 

ಈ ಎಲ್ಲಾ ಸಮಸ್ಯೆಗಳು ನಿವಾರಣೆ ಆಗಲು ಕನಿಷ್ಠ ಆರು ತಿಂಗಳುಗಳು ಬೇಕಾಗಬಹುದು. ಅಲ್ಲಿಯವರೆಗೆ ಕಾಯಲು ಸಾಧ್ಯವಿಲ್ಲ. ಇವೆಲ್ಲವನ್ನೂ ಪರಿಗಣಿಸಿ, ನಾವು ಒಟಿಟಿ ಮೊರೆ ಹೋಗಲು ಯೋಜಿಸುತ್ತಿದ್ದೇವೆ. ಪ್ರೊಡಕ್ಷನ್ ಹೌಸ್ ಚಿತ್ರವನ್ನು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗೆ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ಕಾರ್ತಿಕ್ ಹೇಳಿದ್ದಾರೆ. ಥ್ರಿಲ್ಲರ್ ಕಥೆಯಾಧಾರಿತ ಚಿತ್ರಗಳಿಗೆ ಒಟಿಟಿಯಲ್ಲಿ ಹೆಚ್ಚು ಬೇಡಿಕೆಯಿದೆ ಎಂದರು. 

ಮೂರು ಪಾತ್ರಗಳು ಮತ್ತು ಕೊಲೆಗಳ ಸುತ್ತ ಸುತ್ತುವ ಈ ಚಿತ್ರದಲ್ಲಿ ಅದ್ವಿತಿ ಶೆಟ್ಟಿ ಮತ್ತು ವಿವೇಕ್ ಕೂಡ ನಟಿಸಿದ್ದಾರೆ. ಐರಾವನ್ ಚಿತ್ರ ನಿರ್ಮಾಣ ಮಾಡಿದ್ದ ನಿರಂತರಾ ಪ್ರೊಡಕ್ಷನ್ಸ್ ಜೊತೆ ಮತ್ತೆ ತಂಡ ಸೇರುವುದನ್ನು ಕಾರ್ತಿಕ್ ಖಚಿತಪಡಿಸಿದ್ದಾರೆ. ಮತ್ತೊಂದು ಕ್ರೈಮ್ ಥ್ರಿಲ್ಲರ್ ಕಥೆ ಇದ್ದು, ನಮ್ಮಲ್ಲಿ ಒಂದೆರಡು ಉತ್ತಮ ಕಥಾಹಂದರಗಳಿವೆ. ಇನ್ನು ನಾವು ಹೊಸ ನಿರ್ದೇಶಕರಿಗಾಗಿ ಹುಡುಕಾಟ ನಡೆಸಿದ್ದೇವೆ ಎಂದರು. 

ಏತನ್ಮಧ್ಯೆ, ಓ ಪುಷ್ಪಾ ಐ ಹೇಟ್ ಟಿಯರ್ಸ್ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟಿರುವ ಕಾರ್ತಿಕ್ ತಮ್ಮ ಮುಂದಿನ ಹಿಂದಿ ಚಿತ್ರ ಶಬಾಶ್ ಮಿಥು ಚಿತ್ರೀಕರಣವನ್ನು ಪ್ರಾರಂಭಿಸಲು ಎದುರು ನೋಡುತ್ತಿದ್ದಾರೆ. ನಟಿ ತಾಪ್ಸಿ ಪನ್ನು ನಟಿಸಿರುವ ಕ್ರೀಡಾ ನಾಟಕದಲ್ಲಿ ಕಾರ್ತಿಕ್ ಪ್ರಮುಖ ಪಾತ್ರವಹಿಸಿದ್ದಾರೆ.ದೇಶಾದ್ಯಂತ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ರಾಜ್ಯಗಳು ಲಾಕ್‌ಡೌನ್ ಘೋಷಿಸುತ್ತಿರುವುದರಿಂದ ಚಿತ್ರದ ಶೂಟಿಂಗ್ ಅನ್ನು ಮುಂದೂಡಲ್ಪಟ್ಟಿದ್ದೇವೆ ಎಂದು ಹೇಳಿದರು. 

ತಮ್ಮ ತಮಿಳಿ ಚೊಚ್ಚಲ ಮಾಲಿಗೈ ಚಿತ್ರ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. "ಮಾಲಿಗೈ ಚಿತ್ರವನ್ನು ಒಟಿಟಿ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸುತ್ತಿದೆ ಎಂದು ಕೇಳಿದ್ದೇನೆ ಆದರೆ ಇದು ಇನ್ನು ದೃಢಪಟ್ಟಿಲ್ಲ ಎಂದು ಹೇಳಿದರು. 

SCROLL FOR NEXT