ಕಣ್ಸೆಳೆವ ಮಾಯಾವಿ 
ಸಿನಿಮಾ ಸುದ್ದಿ

ಬಿಗ್ ಬಾಸ್ ಸ್ಪರ್ಧಿ ಪ್ರಿಯಾಂಕಾ ಅಭಿನಯದ 'ಕಣ್ಸೆಳೆವ ಮಾಯಾವಿ' ಟೀಸರ್ ಇಂದು ಬಿಡುಗಡೆ

ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿ ಪ್ರಿಯಾಂಕಾ ತಿಮ್ಮೇಶ್ ಈಗ ತಮ್ಮ ಮೊದಲ ಕನ್ನಡ ಆಲ್ಬಮ್ ಹಾಡಿನ ಬಿಡುಗಡೆಗಾಗಿ ಎದುರು ನೋಡುತ್ತಿದ್ದಾರೆ. 

ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿ ಪ್ರಿಯಾಂಕಾ ತಿಮ್ಮೇಶ್ ಈಗ ತಮ್ಮ ಮೊದಲ ಕನ್ನಡ ಆಲ್ಬಮ್ ಹಾಡಿನ ಬಿಡುಗಡೆಗಾಗಿ ಎದುರು ನೋಡುತ್ತಿದ್ದಾರೆ. 

"ಕಣ್ಸೆಳೆವ ಮಾಯಾವಿ" ಹೆಸರಿನ ಆಲ್ಬಮ್ ಟೀಸರ್ ಇಂದು ಬಿಡುಗಡೆಯಾಗಲಿದ್ದು, ಈ ಹಾಡು ಮೇ 28 ರಂದು ಅನಾವರಣಗೊಳ್ಳಲಿದೆ. ಈ ರೊಮ್ಯಾಂಟಿಕ್ ಆಲ್ಬಂನಲ್ಲಿ ಪ್ರಿಯಾಂಕಾ ಮತ್ತು ದರ್ಶಿತ್ ನಟಿಸಿದ್ದಾರೆ ಇದಕ್ಕೆ ಸ್ಯಾಮ್ ಸಿ ಎಸ್ ಅವರ ಸಂಗೀತವಿದೆ.

ಸಾಹಿತ್ಯವನ್ನು ಸುಪ್ರೀತ್ ಶರ್ಮಾ ಎಸ್ ಬರೆದಿದ್ದರೆ, ಅರ್ಫಾಜ್ ಉಲ್ಲಾಳ್ ಹಿನ್ನೆಲೆ ಗಾಯಕರಾಗಿದ್ದಾರೆ. ದಿಲೀಪ್ ಕೆ ಗೌಡ ನೃತ್ಯ ಸಂಯೋಜನೆ ಮಾಡಿದ್ದಾರೆ ಮತ್ತು ರವೀಂದ್ರನಾಥ ಟಿ ಅವರು ಕ್ಯಾಮೆರಾ ವರ್ಕ್ ಅನ್ನು ನಿರ್ವಹಿಸುತ್ತಿದ್ದಾರೆ.

ಆಲ್ಬಮ್ ಮೂಲಕ ಪಾದಾರ್ಪಣೆ ಮಾಡುತ್ತಿರುವ ನಟಿ “ನಾನು ಸಂಗೀತ ಆಲ್ಬಮ್‌ಗಾಗಿ ಕೆಲಸ ಮಾಡಿದ ಟೀಂ ಸಿನಿಮಾ ಮಾಡಲು ತಯಾರಿಯಲ್ಲಿದೆ. ನಮ್ಮ ಕೌಶಲ್ಯಗಳನ್ನು ಅನ್ವೇಷಿಸಲು ಸಂಬಂಧವನ್ನು ಉತ್ತಮಪಡಿಸಿಕೊಳ್ಳಲು ಇದು ಮೊದಲ ಹೆಜ್ಜೆ ಎಂದು ನಾನು ಭಾವಿಸಿದ್ದೇನೆ. ಈ ಹಾಡು ನಿರ್ಮಾಪಕರಿಗೆಸೂಕ್ತವಾಗಿ ಬರಲಿದೆ. ಇದಕ್ಕಾಗಿ ನನ್ನ ಎಲ್ಲ ಸ್ನೇಹಿತರನ್ನು ಒಟ್ಟಾಗಿಸಿ ಈ ಸಂಗೀತ ಆಲ್ಬಂನಲ್ಲಿ ಹೂಡಿಕೆ ಮಾಡಿದ್ದಾಗಿತ್ತು.  ಮೊದಲ ಲಾಕ್‌ಡೌನ್ ಸಮಯದಲ್ಲಿ ಇದನ್ನು ಮಾಡಲಾಗಿದೆ. ”

ದಿವಂಗತ ರಾಮು ನಿರ್ಮಿಸಿದ ಮತ್ತು ಲಕ್ಕಿ ಶಂಕರ್ ನಿರ್ದೇಶನದ ಅರ್ಜುನ್ ಗೌಡ ಎಂಬ ಕಮರ್ಷಿಯಲ್ ಎಂಟರ್ಟೈನರ್ ಬಿಡುಗಡೆಗಾಗಿ ಪ್ರಿಯಾಂಕಾ ಕಾಯುತ್ತಿದ್ದಾರೆ. ಅಲ್ಲಿ ಅವರು ಪ್ರಜ್ವಲ್ ದೇವರಾಜ್ ಎದುರು ಜೋಡಿಯಾಗಿದ್ದಾರೆ. ಶಶಿಧರ್ ಕೆಎಂ ನಿರ್ದೇಶನದ ಶುಗರ್ಲೆಸ್ಚಿತ್ರದ ಚಿತ್ರೀಕರಣವನ್ನೂ ನಟ ಪೂರ್ಣಗೊಳಿಸಿದ್ದಾರೆ. ಈ ಚಿತ್ರದಲ್ಲಿ ಪೃಥ್ವಿ ಅಂಬರ್ ಮುಖ್ಯ ಪಾತ್ರದಲ್ಲಿದ್ದಾರೆ. ತನ್ನ ಮುಂದಿನ ಯೋಜನೆ ಬಗ್ಗೆ ಯಾಂಕಾ ಬಹಿರಂಗಪಡಿಸುವ ಪ್ರಕಾರ, ಅವರು ಮತ್ತೆ  ಶುಗರ್‌ಲೆಸ್‌ನ ಪ್ರೊಡಕ್ಷನ್ ತಂಡದೊಡನೆ ಸೇರಲಿದ್ದಾರೆ.

"ನಾವು ಇನ್ನೂ ಆರಂಭಿಕ ಚರ್ಚೆಯಲ್ಲಿದ್ದೇವೆ, ಇನ್ನೂ ಯಾವುದನ್ನೂ ಅಂತಿಮಗೊಳಿಸಲಾಗಿಲ್ಲ. ಏತನ್ಮಧ್ಯೆ, ನಾನು ಒಂದೆರಡು ನಿರ್ದೇಶಕರೊಂದಿಗೆ ಮಾತುಕತೆ ನಡೆಸುತ್ತಿದ್ದೇನೆ" ಎಂದು ಅವರು ಹೇಳುತ್ತಾರೆ. ಸಾಂಕ್ರಾಮಿಕ-ಪ್ರೇರಿತ ಲಾಕ್‌ಡೌನ್ ಕಾರಣದಿಂದಾಗಿ ಬಿಗ್ ಬಾಸ್ ಮನೆಯಿಂದ ಹೊರಬರುವುದು ಅಥವಾ ಮನೆಯಲ್ಲಿಯೇ ಇರುವುದು ಒಂದೇ ಎಂದಿರುವ ನಟಿ ವೈಲ್ಡ್ಕಾರ್ಡ್ ಪ್ರವೇಶದ ಮೂಲಕ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ ನಟಿಯರಲ್ಲಿ ಅವರೂ ಒಬ್ಬರಾಗಿದ್ದಾರೆ ಎಂದರು. ಬಿಗ್ ಬಾಸ್ ಮನೆಯಲ್ಲಿ ಅವರು ಒಂದು ತಿಂಗಳು ಇದ್ದರು.

ಬಿಗ್ ಬಾಸ್ ಮನೆಯಲ್ಲಿ ತನ್ನ ಅಲ್ಪಾವಧಿಯ ನಂತರ, ಪ್ರಿಯಾಂಕಾ ಅವರನ್ನು ಜನ ಮಿತ ಭಾಷಿ ಎಂದು ಜನರು ಭಾವಿಸಿದ್ದಾರೆ. ದರೆ ಅದೇ ಸಮಯದಲ್ಲಿ ನೇರ ನುಡಿಯವರೆಂದೂ ತಿಳಿದಿದ್ದಾರೆ. "ನನ್ನನ್ನು ಈ ಹಿಂದೆ ಗಣಪ ಮತ್ತು ಪಟಾಕಿಯಂತಹ ಚಿತ್ರಗಳಿಂದ ಜನರು ಗುರುತಿಸಿದ್ದರು, ಈಗ ನನ್ನನ್ನು ಚೆನ್ನಾಗಿ ತಿಳಿದಿದ್ದಾರೆ” ಎಂದು ಅವರು ಹೇಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬೆಂಗಳೂರು: ರಾತ್ರಿಯಿಡೀ ಸುರಿದ ಮಳೆಯಿಂದ ಹಲವೆಡೆ ಜಲಾವೃತ, ಸಂಚಾರ ದಟ್ಟಣೆ, ಇಂದಿನ IMD ವರದಿ!

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬೆಳಗಾವಿ: ಬೀದಿ ನಾಯಿಗಳ ಅಟ್ಟಹಾಸ, 2 ವರ್ಷದ ಬಾಲಕಿ ಮೇಲೆ ಭೀಕರ ದಾಳಿ

SCROLL FOR NEXT