ದಿವ್ಯಾ ಸುರೇಶ್ 
ಸಿನಿಮಾ ಸುದ್ದಿ

ಪುಸ್ತಕದ ಬಗ್ಗೆ ಅದರ ಮುಖಪುಟ ನೋಡಿ ನಿರ್ಣಯಿಸಬೇಡಿ: ಬಿಗ್ ಬಾಸ್ ಸ್ಪರ್ಧಿ ದಿವ್ಯಾ ಸುರೇಶ್

ಬಿಗ್ ಬಾಸ್ ಕನ್ನಡ ಸೀಸನ್ 8 ರಿಯಾಲಿಟಿ ಶೋ ಮೂಲಕ ಹೆಸರಾದ ದಿವ್ಯಾ ಸುರೇಶ್ ಅವರು ತಮ್ಮ ಮುಂಬರುವ ಚಿತ್ರ ರೌಡಿ ಬೇಬಿ ಬಗ್ಗೆ ಇನ್ನಷ್ಟು ಗಮನ ನೀಡುತ್ತಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 8 ರಿಯಾಲಿಟಿ ಶೋ ಮೂಲಕ ಹೆಸರಾದ ದಿವ್ಯಾ ಸುರೇಶ್ ಅವರು ತಮ್ಮ ಮುಂಬರುವ ಚಿತ್ರ ರೌಡಿ ಬೇಬಿ ಬಗ್ಗೆ ಇನ್ನಷ್ಟು ಗಮನ ನೀಡುತ್ತಿದ್ದಾರೆ. ಚಿತ್ರ ನಿರ್ಮಾಪಕರು ಇತ್ತೀಚೆಗೆ ರೆಡ್ಡಿ ಕೃಷ್ಣ ನಿರ್ದೇಶನದ ಚಿತ್ರದ ಎಮೋಷನಲ್ ಹಾಡಿನ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಅಂದಿನಿಂದ ಹಾಡಿನಲ್ಲಿ ನಾಯಕ ನಟ ರವಿಗೌಡ ಜತೆಗೆ ದಿವ್ಯಾ ಅವರ ಲಿಪ್‌ಲಾಕ್ ದೃಶ್ಯ ಚರ್ಚೆಯ ಬಿಸಿ ಬಿಸಿ ಸಮಾಚಾರವಾಗಿದೆ. ಆದರೆ ಇಡೀ ಚಿತ್ರ ನೋಡದೆ ಕೇವಲ ಈ ಒಂದು ದೃಶ್ಯದಿಂದ ನಿರ್ಣಯಕ್ಕೆ ಬರಬಾರದೆಂದು ನಟಿ ದಿವ್ಯಾ ಹೇಳಿದ್ದಾರೆ.

“ಪುಸ್ತಕವನ್ನು ಅದರ ಮುಖಪುಟದಿಂದ ನಿರ್ಣಯಿಸಬೇಡಿ ಅದು ನನ್ನ ಟೇಕ್. ಕೇವಲ ಟೀಸರ್ ಮತ್ತು ಟ್ರೇಲರ್ ಗಳಿಂದ ಚಿತ್ರದ ಬಗ್ಗೆ ತೀರ್ಮಾನಕ್ಕೆ ಬರಬಾರದು".

"ಆ ದೃಶ್ಯದ ಅವಶ್ಯಕತೆಯನ್ನು ಅರಿಯಲು ವೀಕ್ಷಕರು ಚಿತ್ರವನ್ನು ವೀಕ್ಷಿಸಬೇಕು." ದಿವ್ಯಾ ಹೇಳಿದ್ದಾರೆ. “ ರೌಡಿ ಬೇಬಿ ಕಾಲೇಜು ಹಿನ್ನೆಲೆಯ ಪ್ರೇಮಕಥೆ ಎಂಬ ವಿಚಾರ ಬಹಿರಂಗವಾಗಿದೆ.ಈ ನಿರ್ದಿಷ್ಟ ಲಿಪ್-ಲಾಕ್ ದೃಶ್ಯವು ಕಥೆಯನ್ನು ಮುಂದೆ ಕೊಂಡೊಯ್ಯುವ ಒಂದು ನಿರ್ಣಾಯಕ ಸನ್ನಿವೇಶವೆಂದು ನಾನು ಹೇಳುತ್ತೇನೆ." ಥರ್ಡ್ ಕ್ಲಾಸ್, ಮತ್ತು ನಂ .9, ಹಿಲ್ಟನ್ ರೋಡ್ ಎಂಬ ಎರಡು ಸಿನಿಮಾಗಳಲ್ಲಿ ನಟಿಸಿರುವ ನಟಿ ದಿವ್ಯಾ ಹೇಳಿದ್ದಾರೆ.

ದಿವ್ಯಾ ಬ್ಯುಸಿ ಪೋಲೀಸ್ ಎನ್ನುವ ತೆಲುಗು ಸಿನಿಮಾದಲ್ಲಿ ಸಹ ಅಭಿನಯಿಸಿದ್ದರೂ ಅದು ಅವರಿಗೆ ನಿರೀಕ್ಷಿಸಿದಂತಹಾ ಪ್ರಸಿದ್ದಿಯನ್ನು ತಂದಿಲ್ಲ. ಆದರೆ ಬಿಗ್ ಬಾಸ್ ಶೋ ಜತೆಗೆ ಆಕೆ ಹುಡುಕುತ್ತಿದ್ದ ಖ್ಯಾತಿಯನ್ನು ಪಡೆದಿದ್ದಾರೆ. ಅದಾಗ ಅದೃಷ್ಟವು ಅವರತ್ತ ತಿರುಗಿತು. . "ನಾನು ಈ ಕ್ಷೇತ್ರಕ್ಕೆ ಹೊಸಬಳು.ಈ ರಿಯಾಲಿಟಿ ಶೋ ನಾನು ಯಾರೆಂದು ಅರ್ಥಮಾಡಿಕೊಳ್ಳಲು ಜನರಿಗೆ ಸಹಾಯ ಮಾಡಿದೆ" ಎಂದು ದಿವ್ಯಾ ಹೇಳುತ್ತಾರೆ. ನಟಿ ಸವಾಲಿನ ಪಾತ್ರಗಳನ್ನು ಇಷ್ಟಪಡುತ್ತಾರೆ. ಪಾತ್ರಗಳು ಪ್ರೇಕ್ಷಕರ ಮನಸ್ಸಿನಲ್ಲಿಉಳಿಯಬೇಕು ಎಂದು ಬಯಸುತ್ತಾರೆ.

"ನಾನು ಬಯೋಪಿಕ್ ಪಾತ್ರಗಳನ್ನು ಮಾಡುವುದಕ್ಕೆ ಬಯಸುತ್ತೇನೆ. ಅಂತಹ ಒಂದು ಕಥೆ ಪಡೆದುಕೊಳ್ಳುವ ಭರವಸೆ ಇದೆ" ಎಂದು ದಿವ್ಯಾ ಹೇಳುತ್ತಾರೆ, ಬಿಗ್ ಬಾಸ್ ಬಳಿಕ ಒಂದೆರಡು ಯೋಜನೆಗಳಿಗಾಗಿ ಮಾತುಕತೆಗಳು ನಡೆಯುತ್ತಿವೆ, ಅಂತಹಾ ಒಂದು ಸಿನಿಮಾದ ಬಗ್ಗೆ ವಿವರಗಳನ್ನು ಅಧಿಕೃತವಾಗಿ ಬಹಿರಂಗಪಡಿಸಲು ಲಾಕ್‌ಡೌನ್ ಅನ್ನು ತೆಗೆಯುವುದಕ್ಕಾಗಿ ಕಾಯುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT