ಸಿನಿಮಾ ಸುದ್ದಿ

ತಮಿಳು ಜನರ ಬಗ್ಗೆ ಅಪಾರ ಗೌರವವಿದೆ: 'ದಿ ಫ್ಯಾಮಿಲಿ ಮ್ಯಾನ್ 2' ನಿರ್ದೇಶಕ

Raghavendra Adiga

"ದಿ ಫ್ಯಾಮಿಲಿ ಮ್ಯಾನ್" ವೆಬ್ ಸರಣಿ ನಿರ್ಮಾಪಕರು ರಾಜ್ ನಿದಿಮೋರ್  ಮತ್ತು ಕೃಷ್ಣ ಡಿಕೆ ತಾವು ತಮಿಳು ಜನರ ಭಾವನೆಗಳನ್ನು ಗೌರವಿಸುತ್ತೇವೆ ಅಲ್ಲದೆ ಶೋ ನ ಎರಡನೇ ಸೀಸನ್ ನಲ್ಲಿ "ಸೂಕ್ಷ್ಮ, ಸಮತೋಲಿತ ಮತ್ತು ರಿವರ್ಟಿಂಗ್ ಕಥೆ" ಇರಲಿದೆ ಎಂದು ಹೇಳಿದ್ದಾರೆ. "ದಿ ಫ್ಯಾಮಿಲಿ ಮ್ಯಾನ್" ವೆಬ್ ಸರಣಿ ತಮಿಳು ಜನಸಮುದಾಯದ ಮನೋಭಾವನೆಗೆ ನೋವುಂಟು ಮಾಡುವ ದೃಶ್ಯಗಳನ್ನು ಹೊಂದಿದೆ ಎಂದು ಆರೋಪ ಇದೆ.

ಮನೋಜ್ ಬಾಜಪೇಯಿ ಮುಖ್ಯ ಪಾತ್ರಧಾರಿಯಾಗಿರುವ, "ದಿ ಫ್ಯಾಮಿಲಿ ಮ್ಯಾನ್" ಸೀಸನ್ 2 ಈ ವರ್ಷದ ಆರಂಭದಲ್ಲಿ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲು ಸಿದ್ದವಾಗಿತ್ತು. ಆದರೆ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ನ "ತಾಂಡವ್" ಮತ್ತು "ಮಿರ್ಜಾಪುರ್" ಸುತ್ತ ವಿವಾದಗಳೆದ್ದ ಕಾರಣ ಮುಂದೂಡಲ್ಪಟ್ಟಿತು. ಈಗ, ಚೆನ್ನೈನಲ್ಲಿ ನಿಗದಿಪಡಿಸಲಾಗಿರುವ ಎರಡನೆಯ ಸೀಸನ್ ಜೂನ್ 4 ರಂದು ಬಿಡುಗಡೆಯಾಗಲಿದೆ. ಇದು ದಕ್ಷಿಣದ ಸ್ಟಾರ್ ನಟಿ ಸಮಂತಾ ಅಕ್ಕಿನೇನಿ ನಟಿಸಿರುವ ಸರಣಿಯಾಗಿದೆ.

ಸರಣಿಯನ್ನು ಬಹಿಷ್ಕರಿಸುವಂತೆ ಕರೆಗಳು ಬಂದಿದ್ದು ಈಳಂ ತಮಿಳರನ್ನು "ಹೆಚ್ಚು ಆಕ್ಷೇಪಾರ್ಹ ರೀತಿಯಲ್ಲಿ" ಚಿತ್ರಿಸಿರುವ ಬಗ್ಗೆ ಐಟಿ ಸಚಿವ ಟಿ ಮನೋ ತಂಗರಾಜ್ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ.

"ನಾವು ತಮಿಳು ಜನರ ಭಾವನೆಗಳನ್ನು ಗೌರವಿಸುತ್ತೇವೆ. ಟ್ರೇಲರ್ ಆಧರಿಸಿ ಅನಾವಶ್ಯಕ ವಿವಾದ ಮಾಡಬಾರದು ಟ್ರೈಲರ್‌ನಲ್ಲಿನ ಒಂದೆರಡು ಶಾಟ್ ಗಳನ್ನು ಆಧರಿಸಿ ಕೆಲವು ತಪ್ಪಾದ ಕಲ್ಪನೆ ಮಾಡಲಾಗಿದೆ. ನಾವು ತಮಿಳು ಜನರ ಭಾವನೆಗಳನ್ನು ಮತ್ತು ತಮಿಳು ಸಂಸ್ಕೃತಿಯನ್ನು ಬಹಳವಾಗಿ ತಿಳಿದಿದ್ದೇವೆ ಮತ್ತು ನಮ್ಮ ತಮಿಳು ಜನರ ಬಗ್ಗೆ ಹೆಚ್ಚಿನ ಪ್ರೀತಿ ಮತ್ತು ಗೌರವವನ್ನು ಹೊಂದಿದ್ದೇವೆ" ವೆಬ್ ಸರಣಿಯ ತಯಾರಕರು ಹೇಳಿದ್ದಾರೆ.

ಇಡೀ ಸರಣಿಯನ್ನು ನೋಡಿದ ನಂತರ ಪ್ರೇಕ್ಷಕರು ಮೆಚ್ಚುವ ಭರವಸೆ ಇದೆ" ನಾವು ಈ ಶೋಗೆ ಹಲವಾರು ವರ್ಷಗಳ ಕಠಿಣ ಪರಿಶ್ರಮವನ್ನು ಹಾಕಿದ್ದೇವೆ. ಶೋ ನ ಒಂದು ಸೀಸನ್ ನಲ್ಲಿರುವಂತೆ ಪ್ರೇಕ್ಷಕರಿಗೆ ಉತ್ಸಾಹಭರಿತ ಕಥೆಯನ್ನು ತರಲು ನಾವು ಬಹಳ ಪರಿಶ್ರಮ ಪಟ್ಟಿದ್ದೇವೆ". ನಾವು ಎಲ್ಲರೂ ಕಾಯುವಂತೆ ವಿನಂತಿಸುತ್ತೇವೆ ಮತ್ತು ಒಮ್ಮೆ ಬಿಡುಗಡೆಯಾದ ನಂತರ ಸರಣಿಯನ್ನು ವೀಕ್ಷಿಸಿ ನಂತರ ನೀವು ಅದನ್ನು ಪ್ರಶಂಸಿಸುತ್ತೀರಿ ಎಂದು ನಮಗೆ ತಿಳಿದಿದೆ" ಎಂದು ಅವರು ಹೇಳಿದರು.
 

SCROLL FOR NEXT