ಸಿನಿಮಾ ಸುದ್ದಿ

ಕಿರುತೆರೆಯಲ್ಲಿ ಹೊಸ ದಾಖಲೆ ಸೃಷ್ಟಿಸಿದ ಮೋಹನ್ ಲಾಲ್ ಅಭಿನಯದ ‘ದೃಶ್ಯಂ 2’

Raghavendra Adiga

ಒಟಿಟಿಯಲ್ಲಿ ಬಿಡುಗಡೆಯಾಗಿ ಭಾರೀ ಯಶಸ್ಸು ಪಡೆದಿದ್ದ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಅಭಿನಯದ "ದೃಶ್ಯಂ 2" ಕಿರುತೆರೆಯಲ್ಲಿಯೂ ಹೊಸ ದಾಖಲೆ ಮಾಡಿದೆ. ಮೇ 21, 2021ರಂದು ಟಿವಿಯಲ್ಲಿ ಪ್ರಥಮ ಪ್ರದರ್ಶನ ಕಂಡ ಸಿನಿಮಾ ಅದ್ಭುತ ಪ್ರತಿಕ್ರಿಯೆ ಗಳಿಸಿದೆ. ಈ ಸಿನಿಮಾ ಟಿಆರ್‌ಪಿ ರೇಟಿಂಗ್‌ ನಲ್ಲಿ ದಾಖಲೆ ಬರೆದಿದ್ದು ಮಲಯಾಳಂ ಕಿರುತೆರೆ ಇತಿಹಾಸದಲ್ಲಿ ಇದುವರೆಗೆ ಹೆಚ್ಚು ವೀಕ್ಷಿಸಿದ ಮೂರನೇ ಚಿತ್ರವಾಗಿ ಹೊರಹೊಮ್ಮಿದೆ.

ಜಿತು ಜೋಸೆಫ್ ನಿರ್ದೇಶನದ "ದೃಶ್ಯಂ 2"  ಕಿರುತೆರೆಯಲ್ಲಿ ಪ್ರಥಮ ಬಾರಿಗೆ ಪ್ರದರ್ಶನವಾದ ಸಮಯದಲ್ಲಿ 6.58 ಟಿಆರ್‌ಪಿ ಇಂಪ್ರೆಶನ್ ಗಳನ್ನು ದಾಖಲಿಸಿದೆ ಇದು ಮಲಯಾಳಿ ಚಿತ್ರ, ಮೋಹನ್ ಲಾಲ್ ಅವರ "ಪುಲೊಇಮುರುಗನ್" ಹಾಗೂ ಪ್ರಭಾಸ್ ಅಭಿನಯದ ಬ್ಲಾಕ್ ಬಸ್ಟರ್ "ಬಾಹುಬಲಿ ದಿ ಕನ್‌ಕ್ಲೂಷನ್" ನಂತರದ ಅತಿ ಹೆಚ್ಚು ಮಂದಿ ಟಿವಿಯಲ್ಲಿ ವೀಕ್ಷಿಸಿದ ಸಿನಿಮಾ ಆಗಿದೆ.

"ದೃಶ್ಯಂ 2" ಕಿರಿತೆರೆಯಲ್ಲಿ ಪ್ರಸಾರವಾಗುವ ಕೇವಲ ಒಂದು ದಿನಕ್ಕೆ ಮುನ್ನ ಈ ಬಗ್ಗೆ ಘೋಷಿಸಲಾಗಿತ್ತು. ಕೇವಲ ಈ ಚಿಕ್ಕ ಸೂಚನೆಯಿಂದ ಇಷ್ಟು ಟಿಆರ್‌ಪಿ ರೇಟಿಂಗ್ ಪಡೆಯುವುದು ಮೋಹನ್ ಲಾಲ್ ಅವರ ಸೂಪರ್ ಸ್ಟಾರ್ ಹಿರಿಮೆಗೆ ಸಾಕ್ಷಿ. ಮಲಯಾಳಂ ಚಿತ್ರರಂಗದ ಟಾಪ್ 5 ಸಾರ್ವಕಾಲಿಕ ಅತಿ ಹೆಚ್ಚು ಟಿಆರ್‌ಪಿ ರೇಟಿಂಗ್ ಪಟ್ಟಿಯಲ್ಲಿ ನಾಲ್ಕು ಮೋಹನ್ ಲಾಲ್ ಚಲನಚಿತ್ರಳಿವೆ.

ಮಾಲಿವುಡ್ ನಲ್ಲಿ ಇದುವರೆಗಿನ ಎಲ್ಲರಿಗಿಂತ ಹೆಚ್ಚು ಜನಪ್ರಿಯ ಸೂಪರ್ ಸ್ಟಾರ್ ನಟ ಮೋಹನ್ ಲಾಲ್ ಎನ್ನಲು ಈ ವಿವರಣೆ ಸಾಕಾಗಲಿದೆ.

SCROLL FOR NEXT