ಒಪ್ಪಂದ ಸಿನಿಮಾ ಹಾಡುಗಳು ರಿಲೀಸ್ 
ಸಿನಿಮಾ ಸುದ್ದಿ

ಅರ್ಜುನ್ ಸರ್ಜಾ ನಟನೆಯ 'ಒಪ್ಪಂದ' ಸಿನಿಮಾ ಹಾಡುಗಳು ನಾಲ್ಕು ಭಾಷೆಗಳಲ್ಲಿ ರಿಲೀಸ್

ಬಹುಭಾಷಾ ನಟ ಅರ್ಜುನ್ ಸರ್ಜಾ, ರಾಧಿಕಾ ಕುಮಾರಸ್ವಾಮಿ ಹಾಗೂ ಖ್ಯಾತ ನಟ ಜೆ ಡಿ ಚಕ್ರವರ್ತಿ ಪ್ರಮುಖಪಾತ್ರದಲ್ಲಿ ನಟಿಸಿರುವ "ಒಪ್ಪಂದ" ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿತು

ಬೆಂಗಳೂರು: ಬಹುಭಾಷಾ ನಟ ಅರ್ಜುನ್ ಸರ್ಜಾ, ರಾಧಿಕಾ ಕುಮಾರಸ್ವಾಮಿ ಹಾಗೂ ಖ್ಯಾತ ನಟ ಜೆ ಡಿ ಚಕ್ರವರ್ತಿ ಪ್ರಮುಖಪಾತ್ರದಲ್ಲಿ ನಟಿಸಿರುವ "ಒಪ್ಪಂದ" ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿತು. ಇದೇ ಸಂದರ್ಭದಲ್ಲಿ ಟ್ರೇಲರ್ ಸಹ ಅನಾವರಣಗೊಂಡಿತು.

ನಿರ್ಮಾಪಕರಾದ ರೆಹಮಾನ, ಕೆ.ಮಂಜು, ಸೆವೆನ್ ರಾಜ್, ಫ್ಯಾಷನ್ ಡಿಸೈನರ್ ರಾಜೇಶ್ ಶೆಟ್ಟಿ, ಭವ್ಯಗೌಡ, ಮೋಹಿನಿ ಚೌಧರಿ ಮುಂತಾದ ಗಣ್ಯರು ಈ ಸಮಾರಂಭಕ್ಕೆ ಆಗಮಿಸಿ ಹಾಡುಗಳನ್ನು ಬಿಡುಗಡೆ ಮಾಡಿ ಶುಭ ಕೋರಿದರು.

ಈ ಚಿತ್ರ ಉತ್ತಮವಾಗಿ ಮೂಡಿಬರಲು ಅರ್ಜುನ್ ಸರ್ಜಾ, ಜೆ ಡಿ ಚಕ್ರವರ್ತಿ ಹಾಗೂ ರಾಧಿಕಾ ಕುಮಾರಸ್ವಾಮಿ ಅವರ ಸಹಕಾರ ಬಹಳ ಮುಖ್ಯ. ಅವರೆಲ್ಲರೂ ಚಿತ್ರದಲ್ಲಿ ಅಮೋಘವಾಗಿ ನಟಿಸಿದ್ದಾರೆ. ನಾಲ್ಕು ಭಾಷೆಗಳಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ. ಇದೇ ತಿಂಗಳಲ್ಲಿ ಚಿತ್ರ ತೆರೆಗೆ ಬರಲಿದೆ ಎಂದು ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕ ಸಮೀರ್‌‌ ತಿಳಿಸಿದರು.

ಅರ್ಜುನ್ ಸರ್ಜಾ ಅವರು ವಿಡಿಯೋ ಮೂಲಕ ಚಿತ್ರತಂಡಕ್ಕೆ ಶುಭಕೋರಿದರು. ಸಮೀರ್ ಅವರೇ ನಿರ್ಮಿಸಿ, ನಿರ್ದೇಶಿಸಿರುವ ಈ ಚಿತ್ರಕ್ಕೆ ಅಮೀರ್ ಲಾಲ್ ಛಾಯಾಗ್ರಹಣ, ಸುಭಾಷ್ ಆನಂದ್ ಸಂಗೀತ ನಿರ್ದೇಶನ, ರಾಘು ಕುಲಕರ್ಣಿ ಕಲಾ ನಿರ್ದೇಶನ, ಅಮ್ಮ ರಾಜಶೇಖರ್ ನೃತ್ಯ ನಿರ್ದೇಶನ, ಖಾಲಿ ಕಿಕಾಸ್ ಸಾಹಸ ನಿರ್ದೇಶನ ಹಾಗೂ ಪ್ರಭು ಅವರ ಸಂಕಲನವಿದೆ.ಅರ್ಜುನ್ ಸರ್ಜಾ, ರಾಧಿಕಾ ಕುಮಾರಸ್ವಾಮಿ, ಜೆ.ಡಿ.ಚಕ್ರವರ್ತಿ, ಅಮೀರ್ ಖಾನ್ ಸಹೋದರ ಫೈಸಲ್ ಖಾನ್, ಸೋ‌ನಿ ಚರಿಶ್ಟಾ, ವಿಶ್ವನಾಥ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

17 ಭಾಷೆಗಳಲ್ಲಿ ಹಾಡಿದರೂ ಕನ್ನಡದ ನೆಲದಲ್ಲೇ ಮಣ್ಣಾದ ಗಾನಕೋಗಿಲೆ: ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಎಸ್.ಜಾನಕಿ ಅಂತ್ಯಕ್ರಿಯೆ!

ನಿಮ್ಮ ತಲೆ ತೆಗಿತೀವಿ: ಟ್ರಂಪ್, ನೆತನ್ಯಾಹು, ಮೆಲೋನಿ ಹಾಗೂ ಯುರೋಪಿಯನ್ ನಾಯಕರು ನಮ್ಮ ಟಾರ್ಗೆಟ್; ಇರಾನ್ ಪತ್ರಿಕೆ

ಮಾರುವೇಷ ಯಾಕೆ ಸ್ವಾಮಿ... ಇದು ಚಿಲ್ಲರೆ ಕಾಲವಲ್ಲ, ಕ್ಯೂಆರ್ ಕೋಡ್ ಕಾಲ: ಸಚಿವ ಸುರೇಶ್‌ಗೆ ಶಾಸಕ ಸುರೇಶ್ ಕುಮಾರ್ ಪಾಠ

'Health camp' ಚಿಕಿತ್ಸೆಯಿಂದ ಕಾಲು ಕಳೆದುಕೊಂಡ ಮಹಿಳೆ! ಪೊಲೀಸರಿಗೆ ದೂರು, ಅಭಿಷೇಕ್ ಬ್ಯಾನರ್ಜಿ ವಿರುದ್ಧ ಕೇಸ್ ದಾಖಲು

ಅಯೋಧ್ಯೆ ಟ್ರಸ್ಟ್ ಸಿಇಒ ಅಧಿಕಾರಗಳನ್ನು ನಿರ್ಧರಿಸುತ್ತದೆ, ಸರ್ಕಾರವಲ್ಲ: ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ