ಪುನೀತ್ ರಾಜಕುಮಾರ್ ಫೋಟೋ 
ಸಿನಿಮಾ ಸುದ್ದಿ

ಉತ್ತರ ಕರ್ನಾಟಕದಲ್ಲಿ ಪುನೀತ್ ಫೋಟೋ ಫ್ರೇಮ್‌ಗಳಿಗೆ ಬೇಡಿಕೆ; ದೇವರ ಪಕ್ಕದಲ್ಲಿಟ್ಟು ಪೂಜಿಸುವ ಅಭಿಮಾನಿಗಳು!

ಕರ್ನಾಟಕ ತನ್ನ ನೆಚ್ಚಿನ ನಟ ಪುನೀತ್ ರಾಜ್‌ಕುಮಾರ್ ಅವರನ್ನು ಕಳೆದುಕೊಂಡು 20 ದಿನಗಳು ಕಳೆದಿವೆ. 46ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ ಪುನೀತ್ ನೆನಪಿನಿಂದ ಅವರ ಸ್ನೇಹಿತರು, ಸಹ-ನಟರು, ಅಭಿಮಾನಿಗಳು ಮತ್ತು ಕುಟುಂಬ ಸದಸ್ಯರು ಇನ್ನೂ ಹೊರಬಂದಿಲ್ಲ.

ಹುಬ್ಬಳ್ಳಿ: ಕರ್ನಾಟಕ ತನ್ನ ನೆಚ್ಚಿನ ನಟ ಪುನೀತ್ ರಾಜ್‌ಕುಮಾರ್ ಅವರನ್ನು ಕಳೆದುಕೊಂಡು 20 ದಿನಗಳು ಕಳೆದಿವೆ. 46ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ ಪುನೀತ್ ನೆನಪಿನಿಂದ ಅವರ ಸ್ನೇಹಿತರು, ಸಹ-ನಟರು, ಅಭಿಮಾನಿಗಳು ಮತ್ತು ಕುಟುಂಬ ಸದಸ್ಯರು ಇನ್ನೂ ಹೊರಬಂದಿಲ್ಲ

ಇನ್ನು ಪುನೀತ್ ಅಭಿಮಾನಿಗಳಿಗೆ ಇದು ತಮ್ಮ ಕುಟುಂಬದ ಸದಸ್ಯರನ್ನೇ ಕಳೆದುಕೊಂಡಂತೆ ಆಗಿದೆ. ಇನ್ನು ಕೆಲವರು ಪುನೀತ್ ಸಾವಿನಿಂದ ನೊಂದು ಹೃದಯ ಸ್ತಂಭನ ಮತ್ತು ಆತ್ಮಹತ್ಯೆಗೆ ಶರಣಾಗಿದ್ದರು. ಇದು ಅವರ ಮೇಲಿನ ಪ್ರೀತಿಗೆ ಸಾಕ್ಷಿಯಾಗಿದೆ.

ಪುನೀತ್ ಸ್ಮರಣಾರ್ಥ ಅಭಿಮಾನಿಗಳು ಪುನೀತ್ ಅವರ ಭಾವಚಿತ್ರಗಳಿಗೆ ಪುಷ್ಪಮಾಲೆ ಹಾಕಿದರು. ಅಲ್ಲದೆ ಬಡವರಿಗೆ ಉಚಿತ ಆಹಾರವನ್ನು ವಿತರಿಸಿದರು. ಈಗ ಒಂದು ಹೆಜ್ಜೆ ಮುಂದೆ ಹೋಗಿರುವ ಅಭಿಮಾನಿಗಳು ದೇವರ ಫೋಟೋಗಳ ಮಧ್ಯೆ ಪುನೀತ್ ಫೋಟೋವನ್ನು ತಮ್ಮ ಮನೆಗಳಲ್ಲಿ ಇಡುತ್ತಿದ್ದಾರೆ. ಕಳೆದ ಎರಡು ವಾರಗಳಲ್ಲಿ ಪುನೀತ್ ಅವರ ಫೋಟೋ ಫ್ರೇಮ್‌ಗಳಿಗೆ ಬೇಡಿಕೆ ಹೆಚ್ಚಿದೆ ಎಂದು ಉತ್ತರ ಕರ್ನಾಟಕದ ಭಾಗಗಳಲ್ಲಿ ಹಲವಾರು ಫೋಟೋ ಫ್ರೇಮ್ ತಯಾರಕರು ಹೇಳುತ್ತಾರೆ.

ಪುನೀತ್ ಅವರ ಫೋಟೋ ಫ್ರೇಮ್‌ಗಳಿಗೆ ಜನರು ವಿವಿಧ ಆಕಾರ ಮತ್ತು ಗಾತ್ರಗಳಲ್ಲಿ ಆರ್ಡರ್ ಮಾಡುತ್ತಿದ್ದಾರೆ. 200 ರಿಂದ 2,500 ರೂ.ವರೆಗೆ ನಾವು ಕಳೆದ ಒಂದು ವಾರದಲ್ಲಿ ವಿವಿಧ ಫ್ರೇಮ್‌ಗಳನ್ನು ಸಿದ್ಧಪಡಿಸಿದ್ದೇವೆ. ನಮ್ಮ ಅಂಗಡಿಯು ಪುನೀತ್ ಅವರ 200 ಫ್ರೇಮ್‌ಗಳನ್ನು ಮಾರಾಟ ಮಾಡಿದೆ. ಈ ಫ್ರೇಮ್‌ಗಳನ್ನು ಸಂತಾಪ ಸೂಚಕ ಸಭೆಗಳು, ಸಮಾರಂಭಗಳು ಮತ್ತು ಇತ್ತೀಚೆಗೆ ನಡೆದ ರಾಜ್ಯೋತ್ಸವ ಆಚರಣೆಗಳಲ್ಲಿ ಬಳಸಲಾಗುತ್ತಿತ್ತು. ಸಾಮಾನ್ಯವಾಗಿ ದೇವರು ಮತ್ತು ದೇವತೆಗಳ ಫೋಟೋಗಳನ್ನು ಹಾಕಲು ಬಳಸುವ ಫ್ರೇಮ್‌ಗಳಿಗೆ ಅನೇಕ ಜನರು ಆರ್ಡರ್ ಮಾಡಿ ಪುನೀತ್ ಅವರ ಫೋಟೋ ಹಾಕುವಂತೆ ಕೇಳುತ್ತಿದ್ದಾರೆ, ”ಎಂದು ಹೊಸಪೇಟೆಯ ಫೋಟೋ ಫ್ರೇಮ್ ಅಂಗಡಿಯ ಕಲಾವಿದ ಸಂತೋಷ್ ಹೇಳಿದರು. 

ಹಾವೇರಿಯಲ್ಲಿಯೂ ಪುನೀತ್ ಅವರ ಫೋಟೋ ಫ್ರೇಮ್‌ಗಳನ್ನು ಆರ್ಡರ್‌ ಮಾಡುವುದು ಹೆಚ್ಚಾಗಿದೆ. ಎಲ್ಲರ ಪ್ರೀತಿಗೆ ಪಾತ್ರನಾದ ಪುನೀತ್ ರ ಫೋಟೋವನ್ನು ಯಾವುದೇ ಸಮಾರಂಭವಿರಲಿ, ಆಯೋಜಕರು ಪುನೀತ್ ಅವರ ಭಾವಚಿತ್ರವನ್ನು ಇಡಲು ಬಯಸುತ್ತಾರೆ. ಅವರು ಉತ್ತರ ಕರ್ನಾಟಕದ ನಗರಗಳಲ್ಲಿ ಅವರ ಅನೇಕ ಚಲನಚಿತ್ರಗಳ ಶೂಟಿಂಗ್ ಆಗಿದ್ದರಿಂದ ಇಲ್ಲಿಯ ಜನರು ಅವರಿಗೆ ತುಂಬಾ ಗೌರವವನ್ನು ತೋರಿಸುತ್ತಾರೆ ಎಂದು ಹಾವೇರಿಯ ಅಂಗಡಿಯವರೊಬ್ಬರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT