ಅರುಣ್ ಸಾಗರ್ ಪುತ್ರಿ ಅದಿತಿ ಸಾಗರ್ 
ಸಿನಿಮಾ ಸುದ್ದಿ

ಶಿವರಾಜ್ ಕುಮಾರ್ 125 ನೇ ಸಿನಿಮಾ "ವೇದ"ದಲ್ಲಿ ಅರುಣ್ ಸಾಗರ್ ಪುತ್ರಿ ಅದಿತಿ ಸಾಗರ್ ಪ್ರಮುಖ ಪಾತ್ರ

ಶಿವರಾಜ್ ಕುಮಾರ್ ಅವರ 125 ನೇ ಸಿನಿಮಾ "ವೇದ"ಗೆ ಸರಳ ಕಾರ್ಯಕ್ರಮವೊಂದರಲ್ಲಿ ಚಾಲನೆ ನೀಡಲಾಗಿದೆ. 

ಶಿವರಾಜ್ ಕುಮಾರ್ ಅವರ 125 ನೇ ಸಿನಿಮಾ "ವೇದ"ಗೆ ಸರಳ ಕಾರ್ಯಕ್ರಮವೊಂದರಲ್ಲಿ ಚಾಲನೆ ನೀಡಲಾಗಿದೆ. ಎ ಹರ್ಷ ನಿರ್ದೇಶನದ ಸಿನಿಮಾ ಇದಾಗಿದ್ದು, ಡಿಸೆಂಬರ್ ನಿಂದ ಚಿತ್ರೀಕರಣ ಪ್ರಾರಂಭ ಮಾಡುವ ಯೋಜನೆ ಇದೆ. ಬೆಂಗಳೂರಿನಲ್ಲಿ ನಿರ್ಮಾಣವಾಗಲಿರುವ ಬೃಹತ್ ಸೆಟ್ ನಲ್ಲಿ ಮೊದಲ ಶೆಡ್ಯೂಲ್ ಚಿತ್ರೀಕರಣ ನಡೆಯಲಿದೆ. 

ನಿರ್ದೇಶಕ ತಾರಾಗಣದ ಆಯ್ಕೆಯನ್ನು ಅಂತಿಮಗೊಳಿಸುತ್ತಿದ್ದು, ಸಿನಿಮಾ ಎಕ್ಸ್ ಪ್ರೆಸ್ ಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಶಿವರಾಜ್ ಕುಮಾರ್ ನಟನೆಯ ಸಿನಿಮಾದ ಮೂಲಕ ಗಾಯಕಿ ಅದಿತಿ ಸಾಗರ್ ನಟನೆಗೆ ಪ್ರವೇಶಿಸುತ್ತಿದ್ದಾರೆ. ನಟ-ಕಲಾ ನಿರ್ದೇಶಕ ಅರುಣ್ ಸಾಗರ್ ಅವರ ಪುತ್ರಿಯಾಗಿರುವ ಅದಿತಿ ಸಾಗರ್, ರ್ಯಾಂಬೋ 2 ನ ದಮ್ ಮಾರೋ ದಮ್ ಮೂಲಕ ಗಾಯನ ಕ್ಷೇತ್ರಕ್ಕೆ ಪ್ರವೇಶಿಸಿದ್ದರು. ಅದಿತಿ ಸಾಗರ್ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶೀಘ್ರವೇ ವಿವರಗಳು ಬಹಿರಂಗಗೊಳ್ಳಲಿವೆ. 

ಶಿವರಾಜ್ ಕುಮಾರ್ ಬೈರಾಗಿ ಹಾಗೂ ನೀ ಸಿಗುವವರೆಗೂ ಸಿನಿಮಾಗಳಲ್ಲಿ ನಟಿಸಲಿದ್ದಾರೆ. ಗೀತಾ ಪಿಕ್ಚರ್ಸ್ ನ ಹೋಮ್ ಪ್ರೊಡಕ್ಷನ್ ನ ಮೊದಲ ನಿರ್ಮಾಣದ ಚಿತ್ರವಾಗಿರಲಿದೆ ವೇದ ಸಿನಿಮಾ.

ವೇದ ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಜೆ ಸ್ವಾಮಿ ಸಿನಿಮೆಟೋಗ್ರಾಫಿ, ದೀಪು ಎಸ್ ಕುಮಾರ್ ಸಂಕಲನ ಇರಲಿದೆ. ಭಜರಂಗಿ-2 ಸಿನಿಮಾ ನಿರ್ದೇಶನ ಮಾಡಿದ್ದ ಹರ್ಷ ವೇದಾ ಸಿನಿಮಾಗೂ ನಿರ್ದೇಶಕರಾಗಿದ್ದಾರೆ. ವಜ್ರಕಾಯ, ಭಜರಂಗಿ, ಭಜರಂಗಿ-2 ಸಿನಿಮಾಗಳ ನಂತರ ಹರ್ಷ ನಿರ್ದೇಶನದ್ಲಲಿ ಶಿವರಾಜ್ ಕುಮಾರ್ ನಟಿಸುತ್ತಿರುವ 4 ನೇ ಸಿನಿಮಾ ಇದಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

ಬೆಂಗಳೂರಿಗೂ ಎಂಟ್ರಿ ಕೊಟ್ಟಿತೇ ಮಹಾಮಾರಿ ಎಬೋಲಾ? ಆಫ್ರಿಕಾದಿಂದ ಬಂದ ಮಹಿಳೆಯಲ್ಲಿ ಸೋಂಕಿನ ಲಕ್ಷಣ ಪತ್ತೆ, ಆರೋಗ್ಯ ಇಲಾಖೆ ಹೈ ಅಲರ್ಟ್

CMRL ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ED ದಾಳಿ..!

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

SCROLL FOR NEXT