ಹಾಲಿವುಡ್ ನಿರ್ದೇಶಕರ ಜೊತೆ ಸಮಂತಾ 
ಸಿನಿಮಾ ಸುದ್ದಿ

ವಿಚ್ಛೇದನದ ಬಳಿಕ ಹಾಲಿವುಡ್ ಗೆ ಹಾರಿದ ನಟಿ ಸಮಂತಾ ರುತ್ ಪ್ರಭು

ನಟ ನಾಗ ಚೈತನ್ಯರಿಂದ ವಿಚ್ಛೇದನ ಪಡೆದುಕೊಂಡ ಬಳಿಕ ಚಿತ್ರರಂಗದಿಂದ ತುಸು ವಿರಾಮ ಪಡೆದಿದ್ದ ನಟಿ ಸಮಂತಾ ರುತ್ ಪ್ರಭು ಮತ್ತೆ ಸಿನಿಮಾ ಕ್ಷೇತ್ರಕ್ಕೆ ಮರಳಿದ್ದಾರೆ.

ಬೆಂಗಳೂರು: ನಟ ನಾಗ ಚೈತನ್ಯರಿಂದ ವಿಚ್ಛೇದನ ಪಡೆದುಕೊಂಡ ಬಳಿಕ ಚಿತ್ರರಂಗದಿಂದ ತುಸು ವಿರಾಮ ಪಡೆದಿದ್ದ ನಟಿ ಸಮಂತಾ ರುತ್ ಪ್ರಭು ಮತ್ತೆ ಸಿನಿಮಾ ಕ್ಷೇತ್ರಕ್ಕೆ ಮರಳಿದ್ದಾರೆ.

'ಅರೇಂಜ್‌ಮೆಂಟ್ಸ್ ಆಫ್ ಲವ್' ಎಂಬ ಚೊಚ್ಚಲ ಹಾಲಿವುಡ್ ಚಿತ್ರದಲ್ಲಿ ಸಮಂತಾ ಅವರು ತಮಿಳು ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ನಿರ್ದೇಶಕ ಫಿಲಿಪ್ ಜಾನ್ ಜತೆಗೆ ಫೋಟೊ ಒಂದನ್ನು ಸಮಂತಾ ಅವರು ಪೋಸ್ಟ್ ಮಾಡಿದ್ದು, ಹೊಸ ಸಿನಿಮಾದ ಪೋಸ್ಟರ್ ಅನ್ನು ಕೂಡ ಶೇರ್ ಮಾಡಿಕೊಳ್ಳುವ ಮೂಲಕ ಹಾಲಿವುಡ್‌ಗೆ ತೆರಳುತ್ತಿರುವ ಬಗ್ಗೆ ದೃಢಪಡಿಸಿದ್ದಾರೆ. ಹೊಸ ಜಗತ್ತು, ಹೊಸ ಕೆಲಸಕ್ಕೆ ತೆರೆದುಕೊಳ್ಳುತ್ತಿದ್ದೇನೆ. ವಿಶೇಷ ಅವಕಾಶವೊಂದು ನನ್ನ ಪಾಲಿಗೆ ಬಂದಿದೆ ಎಂದು ಸಮಂತಾ ಹೇಳಿಕೊಂಡಿದ್ದಾರೆ.

ಈ ಹಿಂದೆ ಸಮಂತಾ ನಟಿಸಿದ್ದ ‘ಓಹ್​ ಬೇಬಿ’ ಸಿನಿಮಾವನ್ನು ನಿರ್ಮಾಣ ಮಾಡಿದ್ದ ‘ಗುರು ಫಿಲ್ಮ್ಸ್​’ ಬ್ಯಾನರ್​ ಮೂಲಕವೇ ‘ಅರೇಂಜ್​ಮೆಂಟ್ಸ್​ ಆಫ್​ ಲವ್​’ ಸಿನಿಮಾ ತಯಾರಾಗಲಿದೆ. ಅದೇ ಶೀರ್ಷಿಕೆಯ ಕಾದಂಬರಿ ಆಧರಿಸಿ ಈ ಚಿತ್ರ ಮೂಡಿಬರಲಿದೆ.

ಇದು ನನಗೆ ಹೊಸ ಪ್ರಪಂಚ. ನಾನು ಕೊನೆ ಬಾರಿಗೆ ಆಡಿಷನ್​ ನೀಡಿದ್ದು 2009ರಲ್ಲಿ ‘ಏ ಮಾಯ ಚೇಸಾವೆ’ ಚಿತ್ರಕ್ಕಾಗಿ. 12 ವರ್ಷಗಳ ಬಳಿಕ ಮತ್ತೆ ಆಡಿಷನ್​ ನೀಡಿದ್ದೇನೆ. ಮತ್ತೆ ಅದೇ ರೀತಿ ನರ್ವಸ್​ ಆಗಿದ್ದೇನೆ. ಫಿಲಿಪ್​ ಜಾನ್ ಜೊತೆ ಕೆಲಸ ಮಾಡುವುದು ತುಂಬ ಅಪರೂಪದ ಅವಕಾಶ. ಈ ಪಾತ್ರಕ್ಕೆ ಆಯ್ಕೆ ಆಗಿರುವುದು ತುಂಬ ಖುಷಿ ಆಗುತ್ತಿದೆ. ಈ ಪಯಣ ಆರಂಭಿಸಲು ಕಾತರದಿಂದ ಕಾಯುತ್ತಿದ್ದೇನೆ’ ಎಂದು ಸಮಂತಾ ಹೇಳಿದ್ದಾರೆ.​ ಆಗಸ್ಟ್ 2022 ರಂದು  ಸಿನಿಮಾ ಸೆಟ್ಟೇರುವ ನಿರೀಕ್ಷೆಯಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal Floods: ಸಾವಿನ ಸಂಖ್ಯೆ 359ಕ್ಕೆ ಏರಿಕೆ; 288 ಭಾರತೀಯರು ಸೇರಿ 826 ಮಂದಿ ನಾಪತ್ತೆ; ಮತ್ತೆ ಪ್ರವಾಹ ಭೀತಿ! ಹೊಸ ಸರೋವರ ಪತ್ತೆ!

Nepal floods: ನೇಪಾಳ ಪ್ರವಾಹದ ಭೀಕರತೆ, 150 ಕಿ.ಮೀ ದೂರದ ಉತ್ತರ ಪ್ರದೇಶಕ್ಕೆ ಕೊಚ್ಚಿಕೊಂಡು ಬಂದ ಶವಗಳು!

Nepal Floods: ‘ಸಾವಿನ ಸಂಖ್ಯೆ ಊಹೆಗೂ ನಿಲುಕದಷ್ಟು ಏರಬಹುದು’; ಚೀನಾ ನಡೆ ಕುರಿತು ನೇಪಾಳ ಮಾಜಿ ಸಚಿವರ ಅನುಮಾನ!

RSS ಪಥಸಂಚಲನದಲ್ಲಿ ಭಾಗಿ: ಯಾದಗಿರಿಯ ಇಬ್ಬರು ಸರ್ಕಾರಿ ಶಿಕ್ಷಕರ ಅಮಾನತು

ಮಣಿಪುರದಲ್ಲಿ ಉಗ್ರರ ಅಟ್ಟಹಾಸ: ನಾಲ್ವರ ಸಾವು, ಒಬ್ಬ ನಾಪತ್ತೆ