ರಚಿತಾ ರಾಮ್ 
ಸಿನಿಮಾ ಸುದ್ದಿ

'ಶಬರಿ ಸರ್ಚಿಂಗ್ ಫಾರ್ ರಾವಣ' ಪೋಸ್ಟರ್ ರಿವೀಲ್: ಹೊಸ ಗೆಟಪ್ ನಲ್ಲಿ ಗುಳಿಕೆನ್ನೆ ಬೆಡಗಿ ರಚಿತಾ ರಾಮ್!

ಸ್ಯಾಂಡಲ್​ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಜನ್ಮದಿನದ ಹಿನ್ನೆಲೆಯಲ್ಲಿ ಶಬರಿ ಸೆರ್ಚಿಂಗ್ ಫಾರ್ ರಾವಣ ಚಿತ್ರತಂಡ ಸಿನಿಮಾದ ಪೋಸ್ಟರ್ ರಿವೀಲ್ ಮಾಡಿದೆ.

ಸ್ಯಾಂಡಲ್​ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಜನ್ಮದಿನದ ಹಿನ್ನೆಲೆಯಲ್ಲಿ ಶಬರಿ ಸರ್ಚಿಂಗ್ ಫಾರ್ ರಾವಣ ಚಿತ್ರತಂಡ ಸಿನಿಮಾದ ಪೋಸ್ಟರ್ ರಿವೀಲ್ ಮಾಡಿದೆ.

ಶಬರಿ ತಂಡ ರಿಲೀಸ್ ಮಾಡಿರುವ ಪೋಸ್ಟರ್ ನಲ್ಲಿ ರಚಿತಾ ಹೊಸಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ರಚಿತಾ ಮೊದಲ ಬಾರಿಗೆ ಶಾರ್ಟ್ ಹೇರ್ ಕಟ್ ನಲ್ಲಿ ಕಾಣಿಸಿಕೊಂಡಿದ್ದಾರೆ, ಸಿನಿಮಾದಲ್ಲಿ ಆಫೀಸರ್ ಪಾತ್ರದಲ್ಲಿ ರಚಿತಾ ನಟಿಸುತ್ತಿದ್ದಾರೆ.

ಪೋಸ್ಟರ್​ನಲ್ಲಿ ಅಭಿಮಾನಿಗಳಿಗೆ ಬಹುದೊಡ್ಡ ಅಚ್ಚರಿ ಎದುರಾಗಿದೆ. ಕಾರಣ, ರಚಿತಾ ಇದುವರೆಗೂ ಕಾಣಿಸಿಕೊಳ್ಳದ ಗೆಟಪ್​ನಲ್ಲಿ ಮಿಂಚುತ್ತಿದ್ದಾರೆ. ಸಣ್ಣ ಕೂದಲಿನ ಮಾಸ್ ಲುಕ್​ನಲ್ಲಿದ್ದು, ಅವರ ಟೇಬಲ್​ನಲ್ಲಿ ಒಂದು ಮುದ್ದಾದ ಬೆಕ್ಕೂ ಇದೆ. ಆಫೀಸರ್​ ಲುಕ್​ನಲ್ಲಿ ರಚಿತಾ ಕುಳಿತಿರುವುದು ಅವರ ಇದುವರೆಗಿನ ಚಿತ್ರಗಳಿಂದ ಇದು ಕಂಪ್ಲೀಟ್ ಡಿಫರೆಂಟ್ ಎನ್ನುವುದನ್ನು ಒತ್ತಿ ಹೇಳುತ್ತಿದೆ.

'ಶಬರಿ ಸರ್ಚಿಂಗ್ ಫಾರ್ ರಾವಣ' ಚಿತ್ರವನ್ನು ನವೀನ್ ಶೆಟ್ಟಿ ನಿರ್ದೇಶಿಸುತ್ತಿದ್ದು, ರಿವೆಂಜ್ ಥ್ರಿಲ್ಲರ್ ಮಾದರಿಯ ಕಥಾನಕ ಹೊಂದಿರಲಿದೆ. ಅನೂಪ್ ಸೀಳಿನ್ ಸಂಗೀತ ನೀಡಲಿದ್ದು, ವಿಶಾಲ್ ಕುಮಾರ್ ಗೌಡ ಛಾಯಾಗ್ರಹಣ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ರಚಿತಾ ಎರಡು ಶೇಡ್​ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ರಘು ಮುಖರ್ಜಿ, ಅರ್ಚನಾ ಕೊಟ್ಟಿಗೆ ಮೊದಲಾದವರು ಬಣ್ಣ ಹಚ್ಚುತ್ತಿದ್ದಾರೆ.

ಆಗಸ್ಟ್ ನಲ್ಲಿ ಶೂಟಿಂಗ್ ಆರಂಭಿಸಿದ್ದ ಚಿತ್ರತಂಡ ಮೈಸೂರಿನಲ್ಲಿ ಕೆಲ ದಿನಗಳ ಕಾಲ ಚಿತ್ರೀಕರಣ ಆರಂಭಿಸಿತ್ತು,  ಸದ್ಯ ದಸರಾ ನಂತರ ಮತ್ತೆ ಶೂಟಿಂಗ್ ಆರಂಭವಾಗಲಿದೆ. ರಚಿತಾ ರಾಮ್ ಕೈಯ್ಯಲ್ಲಿ ಹಲವು ಸಿನಿಮಾಗಳಿದ್ದು, 100 ಸಿನಿಮಾ ರಿಲೀಸ್ ಗಾಗಿ ಕಾಯುತ್ತಿದ್ದಾರೆ, ಇದರ ಜೊತೆಗೆ ವೀರಂ, ಲವ್ ಯೂ ರಚ್ಚು ಸಿನಿಮಾಗಳಲ್ಲಿಯೂ ಅಭಿನಯಿಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT