ಸಿನಿಮಾ ಸುದ್ದಿ

ಸಿನಿಮಾ ಒಂದು ಸಂಕೀರ್ಣ ಕಲೆ, ಸವಾಲು ನನಗೆ ತುಂಬಾ ಇಷ್ಟ: ಸೂರಜ್ ಗೌಡ

Shilpa D

ನಟ ಸೂರಜ್ ಗೌಡ ಗೆ ನಿನ್ನ ಸನಿಹಕೆ ನಾಲ್ಕನೇ ಸಿನಿಮಾವಾಗಿದೆ, ನಿರ್ದೇಶಕರಾಗಿ ಮೊದಲ ಚಿತ್ರವಾಗಿದೆ, ಮದುವೆಯ ಮಮತೆಯ ಕರೆಯೋಲೆ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ ಸೂರಜ್ ಗೌಡ ಪ್ರತಿ ಬಾರಿಯೂ ಹೊಸ ಸವಾಲನ್ನು ಸ್ವೀಕರಿಸುತ್ತಾರೆ.

ನಿರ್ಮಾಪಕರು ನನಗೆ ಆಹ್ವಾನ ನೀಡಿದಾಗ ನಾನು ಅವಕಾಶವನ್ನು ಸದುಪಯೋಗ ಪಡಿಸಿಕೊಂಡೆ, ಸೂರಜ್ ಗೌಡ ನಿರ್ದೇಶನದ ಚೊಚ್ಚಲ ಚಿತ್ರ ನಿನ್ನ ಸನಿಹಕೆ ಇದೇ ಅಕ್ಟೋಬರ್ 8 ರಂದು ರಿಲೀಸ್ ಆಗುತ್ತಿದೆ.

ನಾನು ಯಾವಾಗಲೂ ಸಿನಿಮಾದ ವಿವಿಧ ಅಂಶಗಳಲ್ಲಿ ಆಸಕ್ತಿ ತೋರಿಸಿದ ವ್ಯಕ್ತಿ, ಇದರಲ್ಲಿ ಎಡಿಟಿಂಗ್, ಸಿನಿಮಾಟೋಗ್ರಫಿ, ಇತ್ಯಾದಿಯಿದೆ. ಸಿನಿಮಾವನ್ನು ಅರ್ಥಮಾಡಿಕೊಳ್ಳುವುದು ನಿರ್ದೇಶಕರ ಮಾಧ್ಯಮದ ಬಗ್ಗೆ ನನಗೆ ಜ್ಞಾನವಿತ್ತು. ಮತ್ತಷ್ಟು ಹೊಸತನ್ನು ಕಲಿಯುವ ಮೂಲಕ ನನ್ನನ್ನು ಉತ್ತಮ ನಟನನ್ನಾಗಿ ಮಾಡಲು ಪ್ರಯತ್ನಿಸಿದೆ. ಅದು ಹೇಗೆ ಪ್ರಾರಂಭವಾಯಿತೋ ಹಾಗೆ ಫಲ ನೀಡಿದೆ ಎಂದು ಸೂರಜ್ ಗೌಡ ತಿಳಿಸಿದ್ದಾರೆ.

ನಾನು ಈ ಹಿಂದೆ ಕೆಲಸ ಮಾಡಿದ ನಿರ್ದೇಶಕರಿಂದ ಕಲಿಯುವ ಅವಕಾಶ ನನಗೆ ಸಿಕ್ಕಿತು. ಅವರು ಚಲನಚಿತ್ರ ನಿರ್ಮಾಣದ ಪ್ರತಿಯೊಂದು ವಿಭಾಗದಲ್ಲಿ ನನ್ನನ್ನು ತೊಡಗಿಸಿಕೊಂಡರು. ಸಿನಿಮಾದ ಪ್ರತಿಯೊಂದು ವಿಷಯದಲ್ಲೂ ನನಗೆ ಶಿಕ್ಷಣ ಪಡೆಯಲು ಅವಕಾಶ ಮಾಡಿಕೊಟ್ಟರು. ಸಿನಿಮಾ ಒಂದು ಸಂಕೀರ್ಣವಾದ ಕಲೆ ಎಂದು ನಾನು ನಂಬುತ್ತೇನೆ, ಮತ್ತು ಕೇವಲ ಚಲನಚಿತ್ರಗಳನ್ನು ನೋಡುವುದು ಮತ್ತು ನಿರ್ದೇಶಿಸುವುದು ಕಷ್ಟ. ತಾಂತ್ರಿಕವಾಗಿ ನಾವು ತಿಳಿಯುವುದು ಬಹಳಷ್ಟಿದೆ ಎಂದಿದ್ದಾರೆ.

ನಿನ್ನ ಸನಿಹಕೆ  ಸಿನಿಮಾಗೆ ಕಥೆ ಮತ್ತು ಚಿತ್ರಕಥೆ ಸೂರಜ್ ಬರೆದಿದ್ದಾರೆ. ಕಥೆ ಬರೆಯಲು ಅವಕಾಶ ಸಿಕ್ಕಿದ್ದು ಅವರು ನಿರ್ದೇಶನ ಮಾಡಲು ಮುಖ್ಯ ಕಾರಣ. ನಾನು ನಟನಿಗಿಂತ ಮೊದಲು ಬರಹಗಾರ ಮತ್ತು ನಿರ್ದೇಶನಕ್ಕೆ ಆದ್ಯತೆ ನೀಡುತ್ತೇನೆ" ಎಂದು ಸೂರಜ್ ಹೇಳುತ್ತಾರೆ.

"ನಾನು ನನ್ನ ಬಾಲ್ಯದಿಂದಲೂ ಕಥೆಗಾರನಾಗಿದ್ದೇನೆ ಮತ್ತು ನನ್ನ ಸುತ್ತ ಏನಾಗುತ್ತಿದೆ ಎಂಬುದನ್ನು ತಿಳಿದುಕೊಂಡು ಅದನ್ನು ಅಭಿವೃದ್ಧಿಪಡಿಸಲು ಇಷ್ಟಪಡುತ್ತೇನೆ. ಇದು ಮತ್ತೊಮ್ಮೆ ಪ್ಲಾನ್ ಮಾಡದ ವಿಷಯ. ನಾನು ಬಯಸಿದ ಪಾತ್ರಗಳು ಸಿಗದ ಹಿನ್ನೆಲೆಯಲ್ಲಿ ನಾನು ಕಥೆ ಬರೆಯಲು ಮುಂದಾದೆ, ನಾನು ನನ್ನದೇ ಬರೆಯಬೇಕು ಎಂದುಕೊಂಡೆ. ನಾನು ನಿನ್ನ ಸನಿಹಕೆಯಿಂದ ಆರಂಭಿಸಿದೆ ನನ್ನ ಬಳಿ ಇನ್ನು ಎರಡು ಸ್ಕ್ರಿಪ್ಟ್ ಗಳಿವೆ ಎಂದು ತಿಳಿಸಿದ್ದಾರೆ.

ಇದೊಂದು ಕೌಟುಂಬಿಕ ಸಿನಿಮಾ. ಚಿಕ್ಕ ಮಕ್ಕಳಿಂದು ಹಿಡಿದು ವಯಸ್ಸಾದ ಅಜ್ಜಿ ತಾತ ಕೂಡ ಯಾವುದೇ ಮುಜುಗರವಿಲ್ಲದೆ ನೋಡುವಂತಹ ಸಿನಿಮಾವಿದು. ಈಗಾಗಲೇ ಇದರ ಹಾಡುಗಳು ದೊಡ್ಡ ಮಟ್ಟದಲ್ಲಿ ವೈರಲ್‌ ಆಗಿವೆ. ರಘು ದೀಕ್ಷಿತ್‌ ಹಿನ್ನೆಲೆ ಸಂಗೀತ ಕೂಡ ಸೂಪರ್‌ ಆಗಿದೆ. ನನ್ನ ಮತ್ತು ಧನ್ಯಾ ಅವರ ಕಾಂಬಿನೇಶನ್‌ ಜನರಿಗೆ ಇಷ್ಟವಾಗುತ್ತದೆ.

SCROLL FOR NEXT