ಹಂಸಲೇಖ 
ಸಿನಿಮಾ ಸುದ್ದಿ

“ರಂಗ ಸಮುದ್ರ” ಮೋಷನ್ ಪೋಸ್ಟರ್ ಗೆ ಚಿತ್ರ ರಸಿಕರ ಮೆಚ್ಚುಗೆ

ಹೊಯ್ಸಳ ಕ್ರಿಯೇಷನ್ಸ್ ಲಾಂಛನದಲ್ಲಿ ಕೊಣನೂರು ಹೊಯ್ಸಳ ನಿರ್ಮಿಸುತ್ತಿರುವ ರಂಗ ಸಮುದ್ರ ಚಿತ್ರದ ಮೋಷನ್ ಪೋಸ್ಟರ್ ವಿಜಯ ದಶಮಿ ದಿನದಂದು ಬಿಡುಗಡೆಯಾಗಿದೆ.

ಬೆಂಗಳೂರು: ಹೊಯ್ಸಳ ಕ್ರಿಯೇಷನ್ಸ್ ಲಾಂಛನದಲ್ಲಿ ಕೊಣನೂರು ಹೊಯ್ಸಳ ನಿರ್ಮಿಸುತ್ತಿರುವ ರಂಗ ಸಮುದ್ರ ಚಿತ್ರದ ಮೋಷನ್ ಪೋಸ್ಟರ್ ವಿಜಯ ದಶಮಿ ದಿನದಂದು ಬಿಡುಗಡೆಯಾಗಿದೆ.

ಯುವ ಪ್ರತಿಭೆ ರಾಜ್ ಕುಮಾರ್ ಅಸ್ಕಿ ನಿರ್ದೇಶನದ ರಂಗಸಮುದ್ರ ಚಿತ್ರದ ಮೋಷನ್ ಪೋಸ್ಟರ್ ಇದೀಗ ತನ್ನ ವಿಭಿನ್ನ ನೋಟದಿಂದ ಗಮನ ಸೆಳೆದಿದೆ. ಈ ಚಿತ್ರದಲ್ಲಿ ರಂಗಾಯಣ ರಘು ಇದೇ ಮೊದಲ ಬಾರಿಗೆ ಕಾಮಿಡಿಯಿಂದ ಹೊರತಾದ ಗಂಭೀರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಮೋಷನ್ ಪೋಸ್ಟರ್ ನಲ್ಲಿ ರಿವೀಲ್ ಆಗಿದೆ. ಹಂಸಲೇಖ ಗರಡಿಯಲ್ಲಿ ಪಳಗಿದ ಯುವ ಸಂಗೀತ ನಿರ್ದೇಶಕ ದೇಸೀ ಮೋಹನ್ ಸಂಗೀತ ಮೆರುಗು ನೀಡಿದೆ. 

ಅಧರ್ಮದ ಕೇಕೆ ಹೆಚ್ಚಾದಾಗ, ಧರ್ಮದ ಕಹಳೆ ಎತ್ತು.... ಎಂಬ ಹಿನ್ನೆಲೆ ಧ್ವನಿಯೊಂದಿಗೆ ಕುತೂಹಲ ಮೂಡಿಸುವ ದೃಶ್ಯಗಳು ತೆರೆದುಕೊಳ್ಳುವ ಮೋಷನ್ ಪೋಸ್ಟರ್ ಅನ್ನು ಝೇಂಕಾರ್ ಮ್ಯೂಸಿಕ್ ಯೂ ಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಹೊಯ್ಸಳ ಮೂವೀಸ್, ಹೊಯ್ಸಳ ಕ್ರಿಯೇಷನ್ ಸಾಮಾಜಿಕ ಜಾಲತಾಣದಲ್ಲಿಯೂ ಬಿಡುಗಡೆ ಕಂಡಿರುವ ಚಿತ್ರದ ಮೋಷನ್ ಪೋಸ್ಟರ್ ಗೆ ಚಂದನವನದ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮೋಷನ್ ಪೋಸ್ಟರ್ ವೀಕ್ಷಿಸಿರುವ ಗೀತ ಸಾಹಿತಿ ಜಯಂತ್ ಕಾಯ್ಕಿಣಿ ಮನಮೋಹಕ.. ಎಂದು ಇಡೀ ತಂಡಕ್ಕೆ ಶುಭಾಶಯ ತಿಳಿಸಿದ್ದಾರೆ. ದೇಸೀ ದೊರೆ ಹಂಸಲೇಖರವರು ಮೋಷನ್ ಪೋಸ್ಟರ್ ಮ್ಯೂಸಿಕ್ ಈಸ್ ರಿಯಲಿ ಎನರ್ಜಿಟಿಕ್ ಎಂದು ಚಿತ್ರ ತಂಡಕ್ಕೆ ಶಬಾಶ್ ಗಿರಿ ಕೊಟ್ಟಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಪ್ರವೀಣ್ ದತ್ ಸ್ಟೀಫನ್ ವಂಡರ್ ಫುಲ್ ವರ್ಕ್ ಎಂದರೆ, ಕರ್ನಾಟಕ ಚಲನ ಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ‘ಮೊದಲ ಪ್ರಯತ್ನದಲ್ಲಿಯೇ ಚಿತ್ರ ವಿಶ್ವಾಸ ಮೂಡಿಸುವಂತೆ, ಸಕಾರಾತ್ಮಕವಾಗಿದೆ ತಂಡಕ್ಕೆ ಶುಭಾಶಯಗಳು ಎಂದಿದ್ದಾರೆ.

ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಚೇತನ್‌ಮುಂಡಾಡಿ ಹಾಗೂ ನಟ ಡಾಲಿ ಧನಂಜಯ ಕೂಡ ಮೋಷನ್ ಪೋಸ್ಟರ್ ಗೆ ಮೆಚ್ಚುಗೆ ವ್ಯಕ್ತಪಡಿಸಿ, ಚಿತ್ರ ತಂಡಕ್ಕೆ ಶುಭ ಹಾರೈಸಿದ್ದಾರೆ. ಆರ್.ಗಿರಿ ಸಿನಿಮಾಟೋಗ್ರಫಿ, ಗೀತ ಸಾಹಿತ್ಯ ವಾಗೀಶ್ ಚನ್ನಗಿರಿ ಮತ್ತು ಸಂಕಲನ ಶ್ರೀಕಾಂತ್ ರಂಗಸಮುದ್ರ ಚಿತ್ರಕ್ಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT