ಚಿತ್ರದ ಪೋಸ್ಟರ್ 
ಸಿನಿಮಾ ಸುದ್ದಿ

'ಕೂ' ಮೂಲಕ 'ಭಜರಂಗಿ 2' ಚಿತ್ರದ ಟ್ರೈಲರ್ ಪೋಸ್ಟರ್ ಹಂಚಿಕೊಂಡ ಶಿವಣ್ಣ!

ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ಅವರು ಭಾರತದ ಅತಿದೊಡ್ಡ ಬಹುಭಾಷಾ ಮೈಕ್ರೋ ಬ್ಲಾಗಿಂಗ್ ಪ್ಲಾಟ್ಫಾರ್ಮ್-ಕೂ ಸೇರಿದ್ದು, @NimmaShivanna ಹ್ಯಾಂಡಲ್ ಬಳಸಿ ಭಜರಂಗಿ 2 ಟ್ರೈಲರ್ ಪೋಸ್ಟರ್ ಹಂಚಿಕೊಂಡಿದ್ದಾರೆ. 

ಬೆಂಗಳೂರು: ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ಅವರು ಭಾರತದ ಅತಿದೊಡ್ಡ ಬಹುಭಾಷಾ ಮೈಕ್ರೋ ಬ್ಲಾಗಿಂಗ್ ಪ್ಲಾಟ್ಫಾರ್ಮ್-ಕೂ ಸೇರಿದ್ದು, @NimmaShivanna ಹ್ಯಾಂಡಲ್ ಬಳಸಿ ಭಜರಂಗಿ 2 ಟ್ರೈಲರ್ ಪೋಸ್ಟರ್ ಹಂಚಿಕೊಂಡಿದ್ದಾರೆ. 

ಶಿವರಾಜ್ ಕುಮಾರ್ ಅವರು 'ಕೂ' ಸೇರುವ ಮೂಲಕ ಭಾರತದಾದ್ಯಂತ ಇರುವ ಅವರ ಅಭಿಮಾನಿಗಳಿಗೆ ಅವರವರ ಭಾಷೆಯಲ್ಲೇ ತಲುಪಲಿದ್ದಾರೆ. ಇನ್ನಷ್ಟು ಜನರಿಗೆ ಹತ್ತಿರವಾಗಲಿದ್ದಾರೆ. ಅಭಿಮಾನಿಗಳು ಅವರ ಮುಂದಿನ ಸಿನೆಮಾಗಳ ಕುರಿತು ಕೂ ನಲ್ಲಿ ತಿಳಿಯಬಹುದು.  ಈಗಾಗಲೇ ಮುಖ್ಯಮಂತ್ರಿ ಸೇರಿ ವಿವಿಧ ಗಣ್ಯರು ಕೂ ಮೂಲಕ ಜನರನ್ನು ತಲುಪುತ್ತಿದ್ದಾರೆ. 

ನಿರ್ದೇಶಕ ಎ. ಹರ್ಷ ಮತ್ತು ನಟ ಶಿವರಾಜ್​ಕುಮಾರ್​ ಕಾಂಬಿನೇಷನ್​ನಲ್ಲಿ ಮೂಡಿಬಂದಿರುವ ‘ಭಜರಂಗಿ 2’ ಚಿತ್ರದ ಬಗ್ಗೆ ಅಭಿಮಾನಿಗಳು ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈಗಾಗಲೇ ಈ ಸಿನಿಮಾದ ಟೀಸರ್​ ಮತ್ತು ಪೋಸ್ಟರ್​ಗಳು ಭಾರಿ ಹೈಪ್​ ಸೃಷ್ಟಿಸಿವೆ. ಈಗ ಶಿವರಾಜ್ ಕುಮಾರ್ ಅವರು ಕೂ ವೇದಿಕೆಯಲ್ಲಿ  ಟ್ರೈಲರ್ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಮನ ತಣಿಸಿದ್ದಾರೆ. 

ಸೂಪರ್​ ನ್ಯಾಚುರಲ್​ ಅಂಶಗಳನ್ನು ಹೊಂದಿರುವ ಈ ಸಿನಿಮಾ ಹೇಗೆ ಮೂಡಿಬಂದಿದೆ ಎಂಬುದರ ಝಲಕ್​ ಅನ್ನು ಈ ಟ್ರೇಲರ್​ನಲ್ಲಿ ತೋರಿಸಲಾಗಿದೆ. ನಾಯಕ ನಟ ಶಿವರಾಜ್​ಕುಮಾರ್​, ನಾಯಕಿ ಭಾವನಾ ಮೆನನ್​ ಮಾತ್ರವಲ್ಲದೇ ಎಲ್ಲ ಪಾತ್ರಗಳ ಪೋಸ್ಟರ್​ಗಳನ್ನು ತುಂಬ ಚೆನ್ನಾಗಿ ವಿನ್ಯಾಸಗೊಳಿಸಲಾಗಿದೆ. ಕೆಲವೇ ದಿನಗಳ ಹಿಂದೆ ಹಿರಿಯ ನಟಿ ಶ್ರುತಿ, ಖಳನಟ ಲೋಕಿ, ಖಳನಟ ಚೆಲುವರಾಜು ಅವರ ಪೋಸ್ಟರ್​ಗಳನ್ನು ಬಿಡುಗಡೆ ಮಾಡಲಾಗಿತ್ತು.

ಮಂಜು ಪಾವಗಡ, ಶಿವರಾಜ್​ ಕೆ. ಆರ್​ ಪೇಟೆ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಜಯಣ್ಣ ಕಂಬೈನ್ಸ್​ ಬ್ಯಾನರ್​ನಲ್ಲಿ ‘ಭಜರಂಗಿ 2’ ನಿರ್ಮಾಣ ಆಗಿದೆ. ಈ ಚಿತ್ರಕ್ಕೆ ಅರ್ಜುನ್​ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ಸ್ವಾಮಿ ಜೆ. ಗೌಡ ಛಾಯಾಗ್ರಹಣ, ದೀಪು ಎಸ್​. ಕುಮಾರ್​ ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT