ಸಿನಿಮಾ ಸುದ್ದಿ

ರವಿಚಂದ್ರನ್ ಪುತ್ರ ಮನೋರಂಜನ್ ಅಭಿನಯದ 'ಮುಗಿಲ್ ಪೇಟೆ' ನವೆಂಬರ್ ನಲ್ಲಿ ರಿಲೀಸ್

Shilpa D

ನವೆಂಬರ್ ತಿಂಗಳಲ್ಲಿ ಸಿನಿಮಾ ಪ್ರೇಕ್ಷಕರಿಗೆ ಭರ್ಜರಿ ರಸದೌತಣ ಬಡಿಸಲು ಸಾಲು ಸಾಲು ಕನ್ನಡ ಸಿನಿಮಾಗಳು ತೆರೆ ಕಾಣುತ್ತಿವೆ.   

ರಾಜ್ ಬಿ ಶೆಟ್ಟಿ ಅವರ ಗರುಡ ಗಮನ ವೃಷಭ ವಾಹನ, ರಮೇಶ್ ಅರವಿಂದ್ ನಟನೆಯ 100  ಸಿನಿಮಾ ಜೊತೆಗೆ ಮನೋರಂಜನ್ ರವಿಚಂದ್ರನ್ ನಟನೆಯ ಮುಗಿಲ್ ಪೇಟೆ ಕೂಡ ತೆರೆ ಕಾರಣಲಿದೆ.

ಭರತ್ ಎಸ್ ನಾವುಂಡ ನಿರ್ದೇಶನದ ಮುಗಿಲ್ ಪೇಟೆ ನವೆಂಬರ್ 19 ರಂದು ರಿಲೀಸ್ ಆಗಲಿದೆ.  ಮಂಗಳವಾರ ಸಿನಿಮಾ ತಂಡ ಅಧಿಕೃತ ಘೋಷಣೆ ಮಾಡಿದೆ. 

ಆಕ್ಷನ್ ಮತ್ತು ಕೌಟುಂಬಿಕ ಕಥಾ ವಂಸ್ತು ಹೊಂದಿರುವ ರೋಮ್ಯಾಂಟಿಕ್ ಎಂಟರ್‌ಟೈನರ್‌ನಲ್ಲಿ ಕಯಾಡು ಲೋಹರ್ ನಾಯಕಿಯಾಗಿದ್ದಾರೆ. ಮನೋರಂಜನ್ ನಾಲ್ಕನೇ ಸಿನಿಮಾ ಮುಗಿಲ್ ಪೇಟೆಗೆ ಶ್ರೀಧರ್ ವಿ ಸಂಭ್ರಮ್ ಸಂಗೀತ ನೀಡಿದ್ದಾರೆ.

SCROLL FOR NEXT