777 ಚಾರ್ಲಿ ಸ್ಟಿಲ್ 
ಸಿನಿಮಾ ಸುದ್ದಿ

ಡಿಸೆಂಬರ್ 31 ರಂದು ರಕ್ಷಿತ್‌ ಶೆಟ್ಟಿ ಅಭಿನಯದ ‘777 ಚಾರ್ಲಿ' ತೆರೆಗೆ

ನಟ ರಕ್ಷಿತ್‌ ಶೆಟ್ಟಿ ಅಭಿನಯದ ‘777 ಚಾರ್ಲಿ’ ಚಿತ್ರವು ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ 2021ರ ಡಿ.31ರಂದು ತೆರೆ ಕಾಣಲಿದೆ. 

ನಟ ರಕ್ಷಿತ್‌ ಶೆಟ್ಟಿ ಅಭಿನಯದ ‘777 ಚಾರ್ಲಿ’ ಚಿತ್ರವು ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ 2021ರ ಡಿ.31ರಂದು ತೆರೆ ಕಾಣಲಿದೆ. 

ಕಿರಣ್‌ ರಾಜ್‌ ಕೆ. ನಿರ್ದೇಶನದ ಈ ಚಿತ್ರದ ಮೊದಲ ವಿಡಿಯೊ ಹಾಡು ‘ಹೆಂಗೋ ಇದ್ದ ಧರ್ಮ, ತಗಲ್ಲಾಕ್ಕೋತು ಕರ್ಮ..’ ಗುರುವಾರ ಬಿಡುಗಡೆಯಾಗಿದ್ದು, 6 ನಿಮಿಷಗಳ ಹಾಡಿನಲ್ಲಿ ಧರ್ಮ ಮತ್ತು ಚಾರ್ಲಿ ನಡುವೆ ನಡೆಯಲಿರುವ ಟಾಮ್‌ ಆ್ಯಂಡ್‌ ಜೆರಿ ಆಟ, ಧರ್ಮನಿಗೆ ಚಾರ್ಲಿ ನೀಡುವ ಚಿತ್ರಹಿಂಸೆಯನ್ನು ಸೆರೆಹಿಡಿಯಲಾಗಿದೆ.

ರಕ್ಷಿತ್‌ ಶೆಟ್ಟಿ ಅಭಿನಯದ ‘ಕಿರಿಕ್‌ ಪಾರ್ಟಿ’, ‘ಅವನೇ ಶ್ರೀಮನ್ನಾರಾಯಣ’ ಚಿತ್ರವೂ ವರ್ಷದ ಕೊನೆಯ ಶುಕ್ರವಾರ ಬಿಡುಗಡೆಯಾಗಿತ್ತು. ಈ ವರ್ಷದ ಕೊನೆಯ ಶುಕ್ರವಾರ(ಡಿ.31) ಹೇಮಂತ್‌ ಎಂ.ರಾವ್‌ ನಿರ್ದೇಶನದಲ್ಲಿ ಮೂಡಿಬಂದಿರುವ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಬಿಡುಗಡೆಗೆ ರಕ್ಷಿತ್‌ ಶೆಟ್ಟಿ ಅವರು ಮೊದಲು ನಿರ್ಧರಿಸಿದ್ದರು.

ಈ ಸಂದರ್ಭದಲ್ಲಿ ಸೆಪ್ಟೆಂಬರ್‌– ಅಕ್ಟೋಬರ್‌ನಲ್ಲೇ ‘777 ಚಾರ್ಲಿ’ ಬಿಡುಗಡೆಗೆ ನಿರ್ಧರಿಸಲಾಗಿತ್ತು. ಆದರೆ ಲಾಕ್‌ಡೌನ್‌ ಹಾಗೂ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ನಿರ್ಬಂಧದ ಕಾರಣದಿಂದಾಗಿ ಬಿಗ್‌ಬಜೆಟ್‌ ಚಿತ್ರಗಳ ಬಿಡುಗಡೆ ವಿಳಂಬವಾಗಿದೆ. ಈ ಕಾರಣದಿಂದಾಗಿ ಡಿಸೆಂಬರ್‌ ಅಂತ್ಯಕ್ಕೆ ‘777 ಚಾರ್ಲಿ’ ಬಿಡುಗಡೆಗೆ ರಕ್ಷಿತ್‌ ನಿರ್ಧರಿಸಿದ್ದಾರೆ.  ಜಿ.ಎಸ್‌.ಗುಪ್ತ ಹಾಗೂ ರಕ್ಷಿತ್‌ ಶೆಟ್ಟಿ ಈ ಚಿತ್ರದ ನಿರ್ಮಾಪಕರಾಗಿದ್ದಾರೆ. ಸಂಗೀತಾ ಶೃಂಗೇರಿ ಚಿತ್ರದ ನಾಯಕಿ. ಚಿತ್ರದಲ್ಲಿ ನಟ, ನಿರ್ದೇಶಕ ರಾಜ್‌ ಬಿ.ಶೆಟ್ಟಿ, ಡ್ಯಾನಿಶ್‌ ಸೇಟ್‌ ತಾರಾಗಣದಲ್ಲಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ