ನೈಟ್ ಕರ್ಫ್ಯೂ ಚಿತ್ರ ತಂಡ 
ಸಿನಿಮಾ ಸುದ್ದಿ

ಧೀರನ್ ಅಭಿನಯದ 2ನೇ ಚಿತ್ರ 'ನೈಟ್ ಕರ್ಫ್ಯೂ'ಗೆ ಚಾಲನೆ

ಸ್ಯಾಂಡಲ್ ವುಡ್ ನ ಉದಯೋನ್ಮುಖ ನಟ ಧೀರನ್ ಅಭಿನಯದ 'ನೈಟ್ ಕರ್ಫ್ಯೂ' ಚಿತ್ರಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ.

ಬೆಂಗಳೂರು: ಸ್ಯಾಂಡಲ್ ವುಡ್ ನ ಉದಯೋನ್ಮುಖ ನಟ ಧೀರನ್ ಅಭಿನಯದ 'ನೈಟ್ ಕರ್ಫ್ಯೂ' ಚಿತ್ರಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ.

ಧೀರನ್ ಅವರ ಚೊಚ್ಚಲ ಚಿತ್ರ ಶಿವಾ 143 ಇನ್ನೂ ತೆರೆಗೆ ಬಂದಿಲ್ಲ, ಅದಾಗಲೇ ಅವರ ಎರಡನೇ ಚಿತ್ರದತ್ತ ಮುಖ ಮಾಡಿದ್ದಾರೆ. ಅವರ 2ನೇ ಚಿತ್ರಕ್ಕೆ ನೈಟ್ ಕರ್ಫ್ಯೂ ಎಂಬ ಥ್ರಿಲ್ಲರ್ ಹೆಸರನ್ನಿಡಲಾಗಿದ್ದು, ಚಿತ್ರವನ್ನು ನಟ ನಿರ್ದೇಶಕ ರವೀಂದ್ರ ವಂಶಿ ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ ನಿರ್ದೇಶಕರು, ಪುಟಾಣಿ ಸಫಾರಿ  ಮತ್ತು ವಾಸಂತಿ ನಲಿದಾಗ ಎಂಬ ಚಿತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಈ ಚಿತ್ರಗಳು ಅವರಿಗೆ ಸಾಕಷ್ಟು ಖ್ಯಾತಿ ಕೂಡ ನೀಡಿದ್ದವು. ಇದೀಗ ನೈಟ್ ಕರ್ಫ್ಯೂ ಅವರ ನಾಲ್ಕನೇ ಬಹು ನಿರೀಕ್ಷಿತ ಯೋಜನೆಯಾಗಿದೆ.

ಈ ಚಿತ್ರವು ಲಾಕ್‌ಡೌನ್ ಅವಧಿ ಕಥಾಹಂದರ ಹೊಂದಿದ್ದು, ಧೀರನ್ ಯುವ ವೈದ್ಯರಾಗಿ ನಟಿಸಲಿದ್ದಾರೆ. ಅನೇಕ ನಿಜ ಜೀವನದ ಘಟನೆಗಳು ಚಿತ್ರಕ್ಕೆ ಸ್ಫೂರ್ತಿ ನೀಡಿವೆ. ಬಿಎಸ್ ಚಂದ್ರಶೇಖರ್ ಅವರು ನೈಟ್ ಕರ್ಫ್ಯೂ ಅನ್ನು ನಿರ್ಮಿಸುತ್ತಿದ್ದು, ಬುಧವಾರ ಚಿತ್ರದ ಪರೀಕ್ಷಾ ಚಿತ್ರೀಕರಣವನ್ನು ನಡೆಸಲಾಗಿದ್ದು,  ಶೀಘ್ರದಲ್ಲೇ ಚಿತ್ರದ ಅಧಿಕೃತ ಘೋಷಣೆಯನ್ನು ಮಾಡಲಾಗುವುದು ಎನ್ನಲಾಗಿದೆ. ಅಕ್ಟೋಬರ್ ನಲ್ಲಿ ಚಿತ್ರೀಕರಣ ಆರಂಭಿಸಲು ಚಿತ್ರ ತಂಡ ಯೋಜಿಸಿದ್ದು, ಫೆಬ್ರವರಿ 2022 ರಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಗುರಿ ಹೊಂದಲಾಗಿದೆ.

ಏತನ್ಮಧ್ಯೆ, ಜಯಕುಮಾರ್ ಫಿಲ್ಮ್ಸ್ ನಿರ್ಮಾಣದ ಬ್ಯಾನರ್ ಅಡಿಯಲ್ಲಿ ತಯಾರಾಗಿರುವ ಶಿವಾ 143 ಬಿಡುಗಡೆಗೆ ರಾಜಕುಮಾರ್ ಕುಟುಂಬದಿಂದ ಬಂದ ಮತ್ತೊಬ್ಬ ನಟ ಧೀರನ್ ಕಾಯುತ್ತಿದ್ದಾರೆ. ಅನಿಲ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಮಾನ್ವಿತಾ ಕಾಮತ್ ಮಹಿಳಾ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.  ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಈ ಚಿತ್ರದ ಬಳಿಕ ಧೀರನ್ ಮತ್ತೊಮ್ಮೆ ನಿರ್ಮಾಪಕ ಜಯಣ್ಣ ಜೊತೆ ಸೇರಿಕೊಳ್ಳಲಿದ್ದಾರೆ. ಈ ತಂಡದ ಕೈಯಲ್ಲಿ ಸ್ಕ್ರಿಪ್ಟ್ ಹೊಂದಿದ್ದು, ಸೂಕ್ತ ನಿರ್ದೇಶಕರನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿದೆ. ಈ ಸಿನಿಮಾದಲ್ಲಿ ಛಾಯಾಗ್ರಾಹಕ ಜೀವನ್ ಇದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಸಿದ್ದರಾಮಯ್ಯ ರಾಜೀನಾಮೆ; ಸಿಎಲ್‌ಪಿ ಸಭೆ ಶನಿವಾರ; ಅಂದೇ ನೂತನ ಸಿಎಂ ಪ್ರಮಾಣ ವಚನ ಸಾಧ್ಯತೆ!

ವಿದಾಯದ ಕೊನೇ ಕ್ಷಣದಲ್ಲೂ Siddaramaiah ಮಹತ್ವದ ಕ್ರಮ: ಆಪ್ತ ಕಾರ್ಯದರ್ಶಿ, ವಿಶೇಷಾಧಿಕಾರಿ ವರ್ಗಾವಣೆ

ನಿಮ್ಮ ಪ್ರೀತಿಗೆ ಧನ್ಯವಾದ: ರಾಜೀನಾಮೆ ನೀಡಿದ ಬಳಿಕ ರಾಜ್ಯದ ಜನರಿಗೆ ಸಿಎಂ ಸಿದ್ದರಾಮಯ್ಯ ಭಾವುಕ ಪೋಸ್ಟ್!

Siddaramaiah Press Meet: 'ಹೈಕಮಾಂಡ್ ಆದೇಶದ ಮೇಲೆ ರಾಜಿನಾಮೆ ನೀಡಿದ್ದೇನೆ': ಸಿದ್ದರಾಮಯ್ಯ ವಿದಾಯದ ಮಾತು

Siddaramaiah ರಾಜಿನಾಮೆ: 'ನಾನು ಆ ಪಕ್ಷದಲ್ಲಿ ಇಲ್ಲದೆ ಇರಬಹುದು, ಆದರೆ ಅವರೊಂದಿಗಿನ ಒಡನಾಟ ಮರೆಯುವಂತದ್ದಲ್ಲ': BC ಪಾಟೀಲ್ ಭಾವುಕ

SCROLL FOR NEXT