ಚಿತ್ರದ ಸ್ಟಿಲ್ 
ಸಿನಿಮಾ ಸುದ್ದಿ

ಭಾರತದಲ್ಲಿ ಮೊದಲ ಬಾರಿಗೆ ಜೇಮ್ಸ್ ಬಾಂಡ್ ಚಿತ್ರ 3ಡಿ ಯಲ್ಲಿ ಬಿಡುಗಡೆ!

ವಿಶ್ವದಾದ್ಯಂತ ಜೇಮ್ಸ್ ಬಾಂಡ್ ಚಿತ್ರಗಳಿಗೆ ಅಭಿಮಾನಿ ಬಳಗ ಹೆಚ್ಚು ಎಂಬುದು ಜನಜನಿತ. ಈ ಸರಣಿಯಲ್ಲಿ ಈವರೆಗೆ 24 ಚಿತ್ರಗಳು ಬಿಡುಗಡೆಗೊಂಡು ಒಳ್ಳೆಯ ಯಶಸ್ಸು ಕಂಡಿವೆ. ಪ್ರಸ್ತುತ ಡೇನಿಯಲ್ ಕ್ರೇಗ್ ಪ್ರಧಾನ ಪಾತ್ರದಲ್ಲಿ...

ಮುಂಬೈ: ವಿಶ್ವದಾದ್ಯಂತ ಜೇಮ್ಸ್ ಬಾಂಡ್ ಚಿತ್ರಗಳಿಗೆ ಅಭಿಮಾನಿ ಬಳಗ ಹೆಚ್ಚು ಎಂಬುದು ಜನಜನಿತ. ಈ ಸರಣಿಯಲ್ಲಿ ಈವರೆಗೆ 24 ಚಿತ್ರಗಳು ಬಿಡುಗಡೆಗೊಂಡು ಒಳ್ಳೆಯ ಯಶಸ್ಸು ಕಂಡಿವೆ. ಪ್ರಸ್ತುತ ಡೇನಿಯಲ್ ಕ್ರೇಗ್ ಪ್ರಧಾನ ಪಾತ್ರದಲ್ಲಿ ನಟಿಸಿದ 25ನೇ ಸಿನಿಮಾವಾಗಿ 'ನೋ ಟೈಮ್ ಟು ಡೈ' ಬಿಡುಗಡೆಗೆ ತಯಾರಿ ನಡೆಸಿದೆ. ಮೊದಲ ಬಾರಿಗೆ, ಭಾರತದಲ್ಲಿ ಬಾಂಡ್ ಚಲನಚಿತ್ರವನ್ನು 3ಡಿಯಲ್ಲಿ ಬಿಡುಗಡೆ ಮಾಡಲು ಸಿದ್ದತೆಗಳು ನಡೆಯುತ್ತಿವೆ.

ಕೊರೋನಾದ ಈ ಕಾಲದಲ್ಲಿ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರುತ್ತಾರೋ.. ಇಲ್ಲವೋ ಎಂಬ ಬಗ್ಗೆ ಎಲ್ಲರೂ ಸಂಶಯದಲ್ಲಿದ್ದಾರೆ. ಈ ಮಧ್ಯೆ ಬಿಡುಗಡೆಗೊಂಡ ಹಾಲಿವುಡ್ ಚಿತ್ರ 'ಶಾಂಗ್ ಚಿ': ದಿ ಲೆಜೆಂಡ್ ಆಫ್ ದಿ ಟೆನ್ ರಿಂಗ್ಸ್ ' ಭಾರತದಲ್ಲಿ ಕೂಡ ಉತ್ತಮ ಹಣ ಸಂಗ್ರಹಿಸಿದೆ. ಇದರೊಂದಿಗೆ, ಜೇಮ್ಸ್ ಬಾಂಡ್ ನ 'ನೋ ಟೈಮ್ ಟು ಡೈ' ದೊಡ್ಡ ಪ್ರಮಾಣದಲ್ಲಿ 1600ಕ್ಕೂ ಹೆಚ್ಚು ಥಿಯೇಟರ್‌ ಗಳಲ್ಲಿ ಸೆಪ್ಟೆಂಬರ್ 30 ರಂದು 2D, 3D ಯಲ್ಲಿ ಬಿಡುಗಡೆಗೊಳಿಸಲು ಮುಂದಾಗಿದ್ದಾರೆ. 

ತೆಲುಗು, ತಮಿಳು, ಹಿಂದಿ, ಕನ್ನಡ, ಇಂಗ್ಲಿಷ್‌ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಇದಕ್ಕೂ ಮೊದಲು "ಫಾಸ್ಟ್ ಅಂಡ್‌ ಫ್ಯೂರಿಯಸ್ 9" ನಂತಹ ಇತರ ಚಿತ್ರಗಳು ವಿಶ್ವಾದ್ಯಂತ 3D ಯಲ್ಲಿ ಬಿಡುಗಡೆಯಾಗಿದ್ದರೂ, ಇಲ್ಲಿ ಮಾತ್ರ 2D ಯಲ್ಲಿ ಬಿಡುಗಡೆಗೊಳಿಸಿದ್ದರು. ಈ ಬಾರಿ ಈ ಚಿತ್ರವನ್ನು 3D ಯಲ್ಲಿ ಬಿಡುಗಡೆ ಗೊಳಿಸುತ್ತಿರುವುದು ಒಂದು ವಿಶೇಷ.
ಆದರೆ, ಕಳೆದ ವರ್ಷ ಬಿಡುಗಡೆಯಾಗಬೇಕಿದ್ದ ಈ ಚಿತ್ರ ಕೋವಿಡ್ ಪರಿಸ್ಥಿತಿಯಿಂದ ವಿಳಂಬಗೊಳ್ಳುತ್ತಿದೆ.

ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟ್ರೇಲರ್ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಕ್ಯಾರಿ ಜೋಜಿ ನಿರ್ದೇಶನದ 'ನೋ ಟೈಮ್ ಟು ಡೈ' ಅಕ್ಟೋಬರ್ 8 ರಂದು ಅಮೆರಿಕಾದಲ್ಲಿ ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT