ಸಿನಿಮಾ ಸುದ್ದಿ

'ಮರ್ಫಿ' ಪ್ರಮೋಷನ್ ಗಾಗಿ ಕೊಡವ-ಸ್ಪಾನಿಶ್ ಭಾಷೆಯ ಪ್ರೋಮೋ ಸಾಂಗ್

Shilpa D

ಊರ್ವಿ ಸಿನಿಮಾ ನಿರ್ದೇಶಕ ಬಿ.ಎಸ್ ಪ್ರದೀಪ್ ಕುಮಾರ್ ಅವರ ಮರ್ಫಿ ಸಿನಿಮಾ ತಂಡ ಗೋವಾದಲ್ಲಿ ಸುದೀರ್ಘ ಚಿತ್ರೀಕರಣ ಮುಗಿಸಿದೆ.  ರೋಮ್ಯಾಂಟಿಂಕ್ ಸಿನಿಮಾ ಮರ್ಫಿಯಲ್ಲಿ ಪ್ರಭು ಮುಂದ್ಕರ್ ಮತ್ತು ರೋಶಿನಿ ಪ್ರಕಾಶ್ ಮತ್ತು ಇಲ್ಲಾ ವೀರಮಲ್ಲಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಗೋವಾದ ಸುಮಾರು 400 ವರ್ಷದ ಮ್ಯಾನ್ಸನ್ ನಲ್ಲಿ ಶೂಟಿಂಗ್ ನಡದಿದೆ. ಚಿತ್ರದ ಪ್ರಮೋಷನ್ ಗಾಗಿ ಕೊಡವ ಮತ್ತು ಸ್ಪಾನಿಷ್ ಭಾಷೆಯ ಮೊಗಚಿ ಎಂಬ ಹಾಡನ್ನು ಚಿತ್ರತಂಡ ಸಿದ್ಧಗೊಳಿಸಿದೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರ. ಕನ್ನಡ ಭಾಷೆಯ ಭಾಗವನ್ನು ಧನಂಜಯ್ ರಂಜನ್ ಬರೆದಿದ್ದಾರೆ, ಪೋರ್ಚುಗೀಸ್ ಭಾಗವನ್ನು ಮ್ಯಾನ್ಸನ್ ಮಾಲೀಕ ಬರೆದಿದ್ದಾರೆ ಎಂದು ಪ್ರಭು ಮುಂದ್ಕರ್ ಹೇಳಿದ್ದಾರೆ. 

ಸಿನಿಮಾದ ಕೆಲವು ಸ್ಟಿಲ್ ಗಳನ್ನು ಶೂಟಿಂಗ್ ಸ್ಥಳದಿಂದಲೇ ಪ್ರಭು ಶೇರ್ ಮಾಡಿದ್ದಾರೆ. ಮರ್ಫಿ ಶೀರ್ಷಿಕೆಯು ಚಲನಚಿತ್ರದಲ್ಲಿ ಪಾತ್ರ ಕುಟುಂಬದ ಹೆಸರನ್ನು ಸೂಚಿಸುತ್ತದೆ ಎಂದು ಈ ಹಿಂದೆ ಸಿನಿಮಾ ಎಕ್ಸ್ ಪ್ರೆಸ್ ಗೆ ತಿಳಿಸಿದ್ದರು. ಪ್ರಭು ಡೇವಿಡ್ ಮರ್ಫಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ, ಹಿರಿಯ ನಟ ದತ್ತಣ್ಣ ಅವರ ಅಜ್ಜ ರಿಚರ್ಡ್ ಪಾತ್ರದಲ್ಲಿ ನಟಿಸಿದ್ದಾರೆ.

ಮರ್ಫಿ ಚಿತ್ರವು ಎರಡು ವಿಭಿನ್ನ ಕಾಲಮಿತಿಗಳನ್ನು ಅನುಸರಿಸುತ್ತದೆ. "ಚಿತ್ರದ ಸರಿಯಾದ ವೈಬ್ ಪಡೆಯಲು ಪರಂಪರೆಯ ರಚನೆಯ ಹಿನ್ನೆಲೆಯಲ್ಲಿ ಚಿತ್ರವನ್ನು ಚಿತ್ರೀಕರಿಸುವ ಬಗ್ಗೆ ನಿರ್ಮಾಪಕರು ಸರಿಯಾದ ರೀತಿಯಲ್ಲಿ ಗಮನ ವಹಿಸಿದ್ದರು ಎಂದು ಪ್ರಭು ತಿಳಿಸಿದ್ದಾರೆ. ಚಿತ್ರವು ಶೀಘ್ರದಲ್ಲೇ ಪ್ರೋಮೋ ಸಾಂಗ್ ಬಿಡುಗಡೆಯಾಗಲಿದ್ದು ಆ ವೇಳೆ  ಚಿತ್ರದ ಇತರ ವಿವರಗಳನ್ನು ಬಹಿರಂಗಪಡಿಸುವುದಾಗಿ ಹೇಳಿದ್ದಾರೆ.

ಮರ್ಫಿ ಸಿನಿಮಾ ಶೂಟಿಂಗ್ ಅಂತಿಮ ಹಂತಕ್ಕೆ ತಲುಪಿದ್ದು, ದತ್ತಣ್ಣ ಅವರ ಭಾಗದ ಶೂಟಿಂಗ್ ಬಾಕಿ ಉಳಿದಿದೆ, ಐದು ದಿನಗಳ ಶೂಟಿಂಗ್ ನಂತರ ಚಿತ್ರೀಕರಣ ಮುಗಿಯಲಿದೆ. ಗೌರಿ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಪಕ ರಾಮ್ಕೋ ಸೋಮಣ್ಣ ನಿರ್ಮಿಸಿರುವ ಮರ್ಫಿ ಸಿನಿಮಾಗೆ ನಿರ್ದೇಶಕ ನವೀನ್ ರೆಡ್ಡಿ ಸಂಭಾಷಣೆ ಬರೆದಿದ್ದಾರೆ.  ಆನಂದ್ ಸುಂದರೇಶ ಅವರ ಛಾಯಾಗ್ರಹಣವಿದೆ. ಪ್ರಮುಖ ಪಾತ್ರವನ್ನು ನಿರ್ವಹಿಸುವುದರ ಜೊತೆಗೆ, ಪ್ರಭು ಮುಂಡ್ಕರ್ ಚಿತ್ರಕಥೆ ಬರೆದಿದ್ದಾರೆ. ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಚಿತ್ರದಲ್ಲಿ  ಅಶ್ವಿನ್ ರಾವ್ ಪಲ್ಲಕ್ಕಿ ಮತ್ತು ಮಹಾಂತೇಶ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

SCROLL FOR NEXT