ಭಾವನಾ ಮೆನನ್ 
ಸಿನಿಮಾ ಸುದ್ದಿ

ರಕ್ಷಣ್ ನಿರ್ದೇಶನದ 'ಪಿಂಕ್ ನೋಟ್' ಸಿನಿಮಾದಲ್ಲಿ ಡಬಲ್ ರೋಲ್ ನಲ್ಲಿ ಭಾವನಾ ಮೆನನ್!

ಶಿವರಾಜಕುಮಾರ್ ಅವರ ಭಜರಂಗಿ 2 ನಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ನಟಿ ಭಾವನಾ ಮೆನನ್, ನಿರ್ದೇಶಕ ರಕ್ಷಣ್ ಅವರ ಮುಂದಿನ ಪಿಂಕ್ ನೋಟ್ ಸಿನಿಮಾದಲ್ಲಿ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ.

ಶಿವರಾಜಕುಮಾರ್ ಅವರ ಭಜರಂಗಿ 2 ನಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ನಟಿ ಭಾವನಾ ಮೆನನ್, ನಿರ್ದೇಶಕ ರಕ್ಷಣ್ ಅವರ ಮುಂದಿನ ಪಿಂಕ್ ನೋಟ್ ಸಿನಿಮಾದಲ್ಲಿ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ.

ಈಗಾಗಲೇ ಎರಡು ಶೆಡ್ಯೂಲ್‌ ಶೂಟಿಂಗ್ ಪೂರ್ಣಗೊಂಡಿದ್ದು, ಚಿತ್ರದ ಇತ್ತೀಚಿನ ಅಪ್‌ಡೇಟ್ ಏನೆಂದರೆ, ಭಾವನಾ ಪಿಂಕ್ ನೋಟ್‌ನಲ್ಲಿ ದ್ವಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಲನಚಿತ್ರವು ವಿದೇಶಿ ಉದ್ಯೋಗದ ಆಮಿಷಕ್ಕೆ ಒಳಗಾಗುವ ಮಹಿಳೆಯರ ಜೀವನದ ಕಥೆ ಹೇಳುತ್ತದೆ.

ಪ್ರತಿಯೊಬ್ಬರಿಗೂ ದುಡ್ಡಿನ ಅವಶ್ಯಕತೆ ಇದೆ. ಅದರ ಹಿಂದೆ ಹೋದಾಗ ಏನಾಗುತ್ತದೆ ಎಂಬುದನ್ನು ಈ ಸಿನಿಮಾ ಮೂಲಕ ಹೇಳುತ್ತಿದ್ದೇನೆ. ಜಾಕಿ ಭಾವನಾ ಅವರಿಗೆ ಕಥೆಯನ್ನು ಮೇಲ್‌ ಮೂಲಕ ಕಳಿಸಿದ್ದೆ. ಅದನ್ನು ಓದಿದ ಅವರು ಈ ರೀತಿಯ ಪಾತ್ರವನ್ನು ನಾನು ಇದುವರೆಗೂ ಮಾಡಿಲ್ಲ ಎಂದು ಖುಷಿಯಿಂದ ಒಪ್ಪಿಕೊಂಡರು. ದ್ವಿಪಾತ್ರದಲ್ಲಿ ಒಂದು ಪಾತ್ರ ಹೋಮ್ಲಿಯಾಗಿರುತ್ತದೆ, ಮತ್ತೊಂದು ಕೊಂಚ ವಿಭಿನ್ನವಾಗಿದೆ. ಈ ಸಿನಿಮಾವನ್ನು ದಾವಣಗೆರೆ ಮೂಲದ ರಾಜಕೀಯ ಧುರೀಣ ಆನಂದಪ್ಪ ಅವರು ನಿರ್ಮಾಣ ಮಾಡುತ್ತಿದ್ದಾರೆ’ ಎಂದಿದ್ದಾರೆ ನಿರ್ದೇಶಕ ರಕ್ಷಣ್‌.

ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಲು ಪ್ರೇಮ್ (ನೆನಪಿರಲಿ) ಅವರನ್ನು ಅಂತಿಮಗೊಳಿಸಿದ್ದಾರೆ ಮತ್ತು ಮುಂದಿನ ತಿಂಗಳು ನಡೆಯಲಿರುವ ದುಬೈ ಶೆಡ್ಯೂಲ್‌ನಲ್ಲಿ ಅವರು ಸೆಟ್‌ಗೆ ಸೇರಲಿದ್ದಾರೆ ಎಂದು ಹೇಳಲಾಗಿದೆ.

ದಿಗಂತ್ ಅವರೊಂದಿಗಿನ ನಿರ್ದೇಶಕರ ಚಿತ್ರವು ಹಲವು ಕಾರಣಗಳಿಂದ ಸ್ಥಗಿತಗೊಂಡಿದೆ, ಹೀಗಾಗಿ ಅವರು ಈಗ ಪಿಂಕ್ ನೋಟ್‌ನೊಂದಿಗೆ ತೆರಳಿದ್ದಾರೆ. ಎಚ್ ಆನಂದಪ್ಪ ನಿರ್ಮಾಣದ ಈ ಚಿತ್ರಕ್ಕೆ ಸೆಲ್ವಂ ಅವರ ಛಾಯಾಗ್ರಹಣ, ಜಸ್ಸಿ ಗಿಫ್ಟ್ ಅವರ ಸಂಗೀತ ಮತ್ತು ನಾಗೇಂದ್ರ ಪ್ರಸಾದ್ ನಾಲ್ಕು ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT