ಸಿನಿಮಾ ಸುದ್ದಿ

ಹರೀಶ್ ರಾಜ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 25 ವರ್ಷ: ಬೆಳ್ಳಿ ಹಬ್ಬದ ಸಂಭ್ರಮದಲ್ಲಿ 'ಕಲಾಕಾರ್'

Shilpa D

ತಮ್ಮ ಅಮೋಘ ಅಭಿನಯದ ಮೂಲಕ ಜನಮನಸೂರೆಗೊಂಡಿರುವ ನಟ ಹರೀಶ್ ರಾಜ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 25 ವರ್ಷಗಳು ಕಳೆದಿದೆ. ತಮ್ಮ ಸಿನಿಪಯಣಕ್ಕೆ 25 ವಸಂತಗಳು ಪೂರೈಸಿರುವ ಈ ಹೊತ್ತಿನಲ್ಲಿ ಹರೀಶ್ ರಾಜ್ ಚಿಕ್ಕ ಸಮಾರಂಭವೊಂದನ್ನು ಆಯೋಜಿಸಿದ್ದರು.

997 ರಲ್ಲಿ ರಾಜೇಂದ್ರ ಸಿಂಗ್ ಬಾಬು ಅವರ ನಿರ್ದೇಶನದಲ್ಲಿ ಸೌಂದರ್ಯ ಅವರು ನಟಿಸಿದ್ದ”ದೋಣಿ ಸಾಗಲಿ” ಚಿತ್ರದ ಮೂಲಕ ನನ್ನ ಸಿನಿಪಯಣ ಆರಂಭವಾಯಿತು. ಅದೇ ವರ್ಷ ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರು ನಿರ್ದೇಶಿಸಿದ್ದ “ತಾಯಿ ಸಾಹೇಬ” ಚಿತ್ರದಲ್ಲಿ ನಟಿಸಿದ್ದ ಹರೀಶ್ ಇದುವರೆಗೂ 70 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಹರೀಶ್ ರಾಜ್  ನಿರ್ಮಿಸಿ, ನಿರ್ದೇಶಿಸಿದ  ಭಕ್ತಿ ಪ್ರಧಾನ ಶ್ರೀ ಸತ್ಯನಾರಾಯಣ ಸಿನಿಮಾದಲ್ಲಿ 16 ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಅವರ ಹೆಸರು ಸೇರಿಸಲಾಗಿದೆ.

ಹರೀಶ್ ರಾಜ್ ಅಭಿನಯದ ಡಾಕ್ಯು-ಡ್ರಾಮಾದ ಚಿತ್ರೀಕರಣ ಮುಗಿದಿದ್ದು, 20/20  ಸಿನಿಮಾ ಕೂಡ ಬಿಡುಗಡೆಗಾಗಿ ಕಾಯುತ್ತಿದೆ,  ಕೆ ಎಲ್ ರಾಜಶೇಖರ್ ನಿರ್ದೇಶನದ ಹಾಸ್ಯ ಮನರಂಜನೆಯಲ್ಲಿ ಕೋಮಲ್ ಅವರೊಂದಿಗೆ ಪರದೆ ಹಂಚಿಕೊಂಡಿದ್ದಾರೆ. ಮಲಯಾಳಂ ಇಂಡಸ್ಟ್ರಿಯಲ್ಲಿಯೂ ಛಾಪು ಮೂಡಿಸಿದ ಖುಷಿಯಲ್ಲಿ ಹರೀಶ್ ಇದ್ದಾರೆ.

ಮಲಯಾಳಂನಲ್ಲಿ ನನ್ನ ಚೊಚ್ಚಲ ಪ್ರವೇಶ ಆಸಿಫ್ ಅಲಿ ಅಭಿನಯದ ಬಿ ಟೆಕ್ ಚಿತ್ರದೊಂದಿಗೆ ಆರಂಭವಾಯಿತು. ಚಿತ್ರವು ದೊಡ್ಡ ಹಿಟ್ ಆಗಿತ್ತು, ಖಳನಾಯಕ  ಪಾತ್ರವನ್ನು ಪ್ರೇಕ್ಷಕರು ಉತ್ತಮವಾಗಿ ಸ್ವೀಕರಿಸಿದರು. ನಾನು ಮೋಹನ್‌ಲಾಲ್ ಅವರ ಮಗ ಪ್ರಣವ್ ಜೊತೆ ಇರುಪತಿಯೊನ್ನಾಂ ನೊಟ್ಟಾಂಡು ಮತ್ತು ಮಮ್ಮುಟ್ಟಿ ಅಭಿನಯದ ಸಿಬಿಐ 5 ನಲ್ಲಿ ಕೆಲಸ ಮಾಡಿದ್ದೇನೆ. ಮಲಯಾಳಂ ಚಿತ್ರರಂಗದಲ್ಲಿ ಹೆಚ್ಚಿನ ಅವಕಾಶಕ್ಕಾಗಿ ನಾನು ಎದುರು ನೋಡುತ್ತಿದ್ದೇನೆ ಎಂದು ಹರೀಶ್ ರಾಜ್ ತಿಳಿಸಿದ್ದಾರೆ.

SCROLL FOR NEXT