ಸಿನಿಮಾ ಸುದ್ದಿ

ಸ್ಯಾಂಡಲ್‌ವುಡ್‌ಗೆ ಉತ್ತಮ ಸಿನಿಮಾ ಮೂಲಕ ಎಂಟ್ರಿ ಆಗಬೇಕೆಂದು ಬಯಸಿದ್ದೆ: ಲವ್ 360 ಸಿನಿಮಾದ ನಟ ಪ್ರವೀಣ್

Ramyashree GN

ವೃತ್ತಿಯಲ್ಲಿ ವೈದ್ಯರಾಗಿರುವ ಪ್ರವೀಣ್ ಅವರಿಗೆ ಬಾಲ್ಯದಿಂದಲೂ ನಟನೆಯ ಬಗ್ಗೆ ವಿಶೇಷವಾದ ಒಲವಿತ್ತು. ಮೊಗ್ಗಿನ ಮನಸ್ಸು ಖ್ಯಾತಿಯ ಶಶಾಂಕ್ ಅವರ ನಿರ್ದೇಶನದ ರೊಮ್ಯಾಂಟಿಕ್ ಥ್ರಿಲ್ಲರ್ 'ಲವ್ 360' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪ್ರವೀಣ್ ಪ್ರವೇಶಿಸುತ್ತಿದ್ದಾರೆ. ಈ ಬಗ್ಗೆ ಹರ್ಷ ವ್ಯಕ್ತಪಡಿಸುವ ಯುವ ಪ್ರತಿಭೆ ಪ್ರವೀಣ್, ಆಗಸ್ಟ್ 19 ರಂದು ಬಿಡುಗಡೆಯಾಗಲಿರುವ ಸಿನಿಮಾದ ಬಗ್ಗೆ ಕಾತುರರಾಗಿದ್ದಾರೆ.

'ಉತ್ತಮ ನಿರ್ದೇಶಕರು ಸಿಗಲು 2 ವರ್ಷ ಬೇಕಾಯಿತು. ಉತ್ತಮ ನಿರ್ದೇಶಕರನ್ನು ನಾವು ಹುಡುಕುತ್ತಿದ್ದೆವು. ಕಳೆದ 3 ವರ್ಷಗಳಿಂದ ತೆಲುಗು ಇಂಡಸ್ಟ್ರಿಯಲ್ಲಿ ಸಿನಿಮಾ ವಿತರಕರಾಗಿದ್ದ ನನ್ನ ಚಿಕ್ಕಪ್ಪ (ನಾಗರಾಜ್) ನನ್ನನ್ನು ಶಶಾಂಕ್ ಅವರಿಗೆ ಪರಿಚಯಿಸಿದರು. ಹೊಸ ಪ್ರತಿಭೆಗಳನ್ನು ಪರಿಚಯಿಸಲು ಈ ನಿರ್ದೇಶಕರು ಹೆಸರುವಾಸಿಯಾಗಿದ್ದಾರೆ ಎಂದು ಅವರು ಭಾವಿಸಿದ್ದರು ಮತ್ತು ಇದು ಉತ್ತಮ ನಡೆ ಎಂದು ನಾನು ಕೂಡ ಭಾವಿಸಿದೆ. ಅವರ ನಿರ್ದೇಶನದ ಹೆಚ್ಚಿನ ಚಲನಚಿತ್ರಗಳನ್ನು ನೋಡಿದ್ದೇನೆ. ಅವರ ನಿರ್ದೇಶನದಲ್ಲಿ ಮೂಡಿಬಂದ ಕೃಷ್ಣ ಲೀಲಾ ನನ್ನ ಮೆಚ್ಚಿನವುಗಳಲ್ಲಿ ಒಂದು. ನಟನೆಯಲ್ಲಿ 2 ವರ್ಷ ತರಬೇತಿ ಪಡೆದಿದ್ದೇನೆ' ಎನ್ನುತ್ತಾರೆ.

ಈ ಸಿನಿಮಗಾಗಿ ಕ್ಯಾಮೆರಾ ಎದುರಿಸುವ ಮುನ್ನ 2 ತಿಂಗಳು ಶಶಾಂಕ್ ಅವರು ನಡೆಸಿದ ಕಾರ್ಯಾಗಾರದಲ್ಲಿ ನಾನೂ ಭಾಗವಹಿಸಿದ್ದೆ ಎನ್ನುವ ಪ್ರವೀಣ್, ‘ಉತ್ತಮ ರೀತಿಯಲ್ಲಿ ಎಂಟ್ರಿ ಕೊಡಬೇಕು ಎಂಬುದಷ್ಟೇ ನನ್ನ ಆಲೋಚನೆಯಾಗಿತ್ತು. ಅದನ್ನು ಈಗ ನಿರ್ದೇಶಕರ ದೃಷ್ಟಿಗೆ ಬಿಟ್ಟಿದ್ದೇನೆ. ಇನ್ನು ಬಹಳ ದೂರ ಸಾಗಬೇಕಾಗಿದೆ. ಸದ್ಯ ನನ್ನ ಮೇಲೆಯೇ ನನ್ನ ಗಮನವಿದೆ ಮತ್ತು ನನ್ನ ಚಿಕ್ಕಪ್ಪ ನೀಡಿದ ಮಾರ್ಗದರ್ಶನದಂತೆ ನಾನು ಸಾಗುತ್ತಿದ್ದೇನೆ' ಎಂದು ಹೇಳುತ್ತಾರೆ.

ಲವ್ 360 ಸಿನಿಮಾವನ್ನು ಲವ್ ಸ್ಟೋರಿ ಎಂದು ಬಿಂಬಿಸಲಾಗಿದ್ದು, ಪ್ರವೀಣ್ ಸಿನಿಮಾದಲ್ಲಿ ಬೋಟ್ ಮೆಕ್ಯಾನಿಕ್ ಆಗಿ ಕಾಣಿಸಿಕೊಂಡಿದ್ದಾರೆ.

ಶಶಾಂಕ್ ಅವರೊಂದಿಗೆ ಕೆಲಸ ಮಾಡಿದ ಅನುಭವಗಳನ್ನು ಹಂಚಿಕೊಳ್ಳುತ್ತಾ, 'ನಾನು ಈ ರೋಮ್ಯಾಂಟಿಕ್ ಆಕ್ಷನ್ ಥ್ರಿಲ್ಲರ್‌ನಲ್ಲಿ ಕೆಲವು ಫೈಟ್ ಸೀಕ್ವೆನ್ಸ್‌ಗಳನ್ನು ಮಾಡಿದ್ದೇನೆ ಮತ್ತು ಇದು ಓರ್ವ ನಟನಾಗಿ ನನಗೆ ಕಷ್ಟವಾಗಿತ್ತು. ಆದಾಗ್ಯೂ, ಫೈಟ್ ಸೀಕ್ವೆನ್ಸ್‌ಗಳನ್ನು ನಾನು ಸಂಪೂರ್ಣವಾಗಿ ಆನಂದಿಸಿದೆ. ಶಶಾಂಕ್ ಅವರು ಒಬ್ಬ ಕೂಲ್ ಡೈರೆಕ್ಟರ್ ಆಗಿದ್ದು, ನಟನೆಯ ಜಟಿಲತೆಗಳನ್ನು ಅರ್ಥಮಾಡಿಕೊಳ್ಳಲು ನನಗೆ ಅನುವು ಮಾಡಿಕೊಟ್ಟರು' ಎನ್ನುತ್ತಾರೆ.

ಶಶಾಂಕ್ ಅವರ ಬ್ಯಾನರ್‌ಗಳ ಅಡಿಯಲ್ಲಿ ತಯಾರಾದ ಲವ್ 360 ಸಿನಿಮಾದಲ್ಲಿ ರಚನಾ ಇಂದರ್ ಪ್ರವೀಣ್ ಜೊತೆಗೆ ತೆರೆಯನ್ನು ಹಂಚಿಕೊಂಡಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಸಿನಿಮಾದ 'ಜಗವೇ ನೀನೆ ಗೆಳತಿಯೇ' ಹಾಡು ಈಗಾಗಲೇ ಯಶಸ್ಸು ಕಂಡಿದೆ. ಚಿತ್ರಕ್ಕೆ ಅಭಿಲಾಷ್ ಕಲತಿ ಅವರ ಛಾಯಾಗ್ರಹಣವಿದೆ.

SCROLL FOR NEXT