ಕೀರ್ತಿ ಸುರೇಶ್ ಫೋಸ್ಟರ್ 
ಸಿನಿಮಾ ಸುದ್ದಿ

'ರಘು ತಥಾ' ದೊಂದಿಗೆ ಕಾಲಿವುಡ್ ಪ್ರವೇಶಿಸಿದ ಹೊಂಬಾಳೆ ಫಿಲಂಸ್!

ಕೆಜಿಎಫ್-2 ಮತ್ತು ಕಾಂತಾರ ಯಶಸ್ಸಿನಿಂದ ಬೀಗುತ್ತಿರುವ ಚಿತ್ರ ನಿರ್ಮಾಣ ಸಂಸ್ಥೆ ಕನ್ನಡದ ಹೊಂಬಾಳೆ ಫಿಲಂಸ್ ಇದೀಗ ಕಾಲಿವುಡ್ ಗೂ ಕಾಲಿಟ್ಟಿದೆ. ಕೀರ್ತಿ ಸುರೇಶ್ ಲೀಡ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ತಮಿಳು ಚಿತ್ರ 'ರಘು ತಥಾ' ಫೋಸ್ಟರ್ ನ್ನು ಹೊಂಬಾಳೆ ಫಿಲಂಸ್ ಸಂಸ್ಥೆ ಭಾನುವಾರ ಬಿಡುಗಡೆ ಮಾಡಿದೆ.

ಬೆಂಗಳೂರು: ಕೆಜಿಎಫ್-2 ಮತ್ತು ಕಾಂತಾರ ಯಶಸ್ಸಿನಿಂದ ಬೀಗುತ್ತಿರುವ ಚಿತ್ರ ನಿರ್ಮಾಣ ಸಂಸ್ಥೆ ಕನ್ನಡದ ಹೊಂಬಾಳೆ ಫಿಲಂಸ್ ಇದೀಗ ಕಾಲಿವುಡ್ ಗೂ ಕಾಲಿಟ್ಟಿದೆ. ಕೀರ್ತಿ ಸುರೇಶ್ ಲೀಡ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ತಮಿಳು ಚಿತ್ರ 'ರಘು ತಥಾ' ಫೋಸ್ಟರ್ ನ್ನು ಹೊಂಬಾಳೆ ಫಿಲಂಸ್ ಸಂಸ್ಥೆ ಭಾನುವಾರ ಬಿಡುಗಡೆ ಮಾಡಿದೆ.

ತನ್ನ ನೆಲದಲ್ಲೇ ಕ್ರಾಂತಿ ಆರಂಭ ಎಂಬ ಬರಹದಡಿ ಹೊಂಬಾಳೆ ಫಿಲಂಸ್ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಈ ಫೋಸ್ಟರ್ ಬಿಡುಗಡೆಯಾಗಿದೆ. ಸುಮನ್ ಕುಮಾರ್ ಚೊಚ್ಚಲ ಬಾರಿಗೆ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಕೀರ್ತಿ ಸುರೇಶ್ ಜೊತೆಗೆ ಎಂಎಸ್ ಭಾಸ್ಕರ್, ದೇವದರ್ಶಿನಿ, ರವೀಂದ್ರ ವಿಜಯ್ ಮತ್ತಿತರರು ಅಭಿನಯಿಸುತ್ತಿದ್ದಾರೆ. ಮುಂದಿನ ವರ್ಷ ಈ ಚಿತ್ರ ತೆರೆಗೆ ಅಪ್ಪಳಿಸಲಿದೆ.

ಕೀರ್ತಿ ಸುರೇಶ್

ಇದೊಂದು ಹಾಸ್ಯಮಯ ಸಿನಿಮವಾಗಿದ್ದು, ಸಮಾಜದ ವಿರುದ್ಧ ಸವಾಲೆಸುವ ಒಬ್ಬ ಗಟ್ಟಿಗಿತ್ತಿ ಯುವತಿ ಸುತ್ತ ಕಥೆ ಸಾಗುತ್ತದೆ. ತನ್ನ ಸಿದ್ಧಾಂತಗಳನ್ನು ಎತ್ತಿ ಹಿಡಿಯುವುದರ ಜೊತೆಗೆ ಸಮಾಜದ ವಿರುದ್ಧ ಹೋರಾಡುತ್ತಲೇ ಆಕೆ ಹೇಗೆ ಎಲ್ಲರಿಗೂ ಸ್ಪೂರ್ತಿಯಾಗುತ್ತಾಳೆ ಎಂಬುದು ಚಿತ್ರದ ಕಥೆಯಾಗಿದೆ. ಆ ಪಾತ್ರಕ್ಕೆ ಕೀರ್ತಿ ಸುರೇಶ್ ಅತ್ಯುತ್ತಮ ಆಯ್ಕೆಯಾಗಿದ್ದು, ಅವರೊಂದಿಗೆ ಕೆಲಸ ಮಾಡಲು ಹೊಂಬಾಳೆ ಫಿಲಂಸ್ ಹೆಮ್ಮೆ ಪಡುತ್ತದೆ ಎಂದು ಹೊಂಬಾಳೆ ಫಿಲಂಸ್ ನ ವಿಜಯ್ ಕಿರಗಂದೂರು ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಅಲ್ಲಿ ಪ್ರತಿ ಮತದಾರನಿಗೂ photo ID’ಯಿದೆ: ಭಾರತದ ಚುನಾವಣಾ ವ್ಯವಸ್ಥೆ ಕೊಂಡಾಡಿದ ಟ್ರಂಪ್, ಅಮೆರಿಕಾ ಮತದಾನ ವ್ಯವಸ್ಥೆ ಬದಲಾವಣೆಗೆ ಪಟ್ಟು, SAVE America Act ಜಾರಿಗೆ ಆಗ್ರಹ..!

ಜಿಲ್ಲಾವಾರು ಕಾಂಗ್ರೆಸ್ ಶಾಸಕರೊಂದಿಗೆ ನಿಯಮಿತ ಸಭೆಗೆ ಸಿಎಂ ಡಿಕೆ. ಶಿವಕುಮಾರ್‌ ನಿರ್ಧಾರ..!

ಬುರ್ಖಾ ಧರಿಸಿ ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನದ ನೆಕ್ಲೆಸ್ ಕದ್ದ ಮಹಿಳೆಯರು; ಖತರ್ನಾಕ್ ಕಳ್ಳಿಯರ "ಕೈ"ಚಳಕ CCTVಯಲ್ಲಿ ಸೆರೆ!

ಕರ್ನಾಟಕ ಸೇರಿ ದೇಶಾದ್ಯಂತ Pakನ ISI ಬೆಂಬಲಿತ ಗ್ಯಾಂಗಸ್ಟರ್ ಶಹಜಾದ್ ಭಟ್ಟಿ ಜಾಲದ 200ಕ್ಕೂ ಹೆಚ್ಚು ಜನರ ಬಂಧನ: ಅಮಿತ್ ಶಾ

ಸಚಿವ ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಬಿಗಿಪಟ್ಟು: ವಿಧಾನಸಭೆಯಲ್ಲಿ ಪ್ರತಿಭಟನೆ, ಗದ್ದಲ, ಕಲಾಪಕ್ಕೆ ಅಡ್ಡಿ!