ರಘು ಮತ್ತು ಶ್ರೀ ಮಹಾದೇವ್ 
ಸಿನಿಮಾ ಸುದ್ದಿ

ರಘು ನಿರ್ದೇಶನದ 'ಜಸ್ಟ್ ಪಾಸ್' ಸಿನಿಮಾದಲ್ಲಿ ಶ್ರೀ ಮಹಾದೇವ್

ತರ್ಲೆ ವಿಲೇಜ್, ಪರಸಂಗ, ದೊಡ್ಡಟ್ಟಿ ಬೋರೇಗೌಡ ಚಿತ್ರಗಳ ಮೂಲಕ ಖ್ಯಾತಿ ಪಡೆದಿರುವ ಕೆ.ಎಂ.ರಘು ಜಸ್ಟ್ ಪಾಸ್ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.

ತರ್ಲೆ ವಿಲೇಜ್, ಪರಸಂಗ, ದೊಡ್ಡಟ್ಟಿ ಬೋರೇಗೌಡ ಚಿತ್ರಗಳ ಮೂಲಕ ಖ್ಯಾತಿ ಪಡೆದಿರುವ ಕೆ.ಎಂ.ರಘು ಜಸ್ಟ್ ಪಾಸ್ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಪ್ರಾಜೆಕ್ಟ್‌ನಲ್ಲಿ ಗಜಾನನ ಮತ್ತು ಗ್ಯಾಂಗ್-ಫೇಮ್ ಶ್ರೀ ಮಹಾದೇವ್ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ.

ಯೂತ್ ಫಿಲ್ಮ್ ಎಂದು ಬಿಂಬಿಸಲಾಗಿರುವ ಜಸ್ಟ್ ಪಾಸ್ ಈ ತಿಂಗಳು ತೆರೆಗೆ ಬರಲಿದೆ. ‘ಜಸ್ಟ್‌ ಪಾಸ್‌’ ಸಿನಿಮಾದಲ್ಲಿ  'ಇರುವುದೆಲ್ಲವ ಬಿಟ್ಟು' ಸಿನಿಮಾ ಖ್ಯಾತಿಯ ಶ್ರೀ ಮಹದೇವ್‌ ನಟಿಸುತ್ತಿದ್ದು, ರಘು ಕೆ ಎಂ ಎಂಬವರು ನಿರ್ದೇಶನ ಮಾಡುತ್ತಿದ್ದಾರೆ.

ಜಸ್ಟ್‌ ಪಾಸ್‌ ಒಂದು ಯೂತ್‌ಫುಲ್‌ ಸಬ್ಜೆಕ್ಟ್. ಕಾಲೇಜು ಹಿನ್ನೆಲೆಯಲ್ಲಿ ಮೂಡಿ ಬರಲಿರುವ ಈ ಸಿನಿಮಾದಲ್ಲಿಇಂದಿನ ಯುವಕರ ಬದುಕಿನಲ್ಲಿ ಸಾಮಾನ್ಯವಾಗಿ ನಡೆಯುವಂತಹ ಘಟನೆಗಳಿವೆ. ಅದರ ಜತೆಗೆ ಒಂದಷ್ಟು ವಿಶೇಷ ಮನರಂಜನೆಗಳಿರುತ್ತವೆ. ನಾಯಕ ಶ್ರೀಗೆ ನಾಯಕಿಯ ಆಯ್ಕೆ ಇನ್ನೊಂದು ವಾರದಲ್ಲಿ ಆಗಲಿದೆ. ಡಿಸೆಂಬರ್‌ 14ರಂದು ಮುಹೂರ್ತ ನಡೆಯಲಿದೆ.

ಜಸ್ಟ್‌ ಪಾಸ್‌ ಸಿನಿಮಾದಲ್ಲಿ ಹೊಸ ರೀತಿಯ, ವಿಭಿನ್ನ ನಿರೂಪಣೆಯಿದೆ' ಎಂದು ನಿರ್ದೇಶಕ ರಘು ಹೇಳಿದ್ದಾರೆ. ರಂಗಾಯಣ ರಘು, ಪ್ರಕಾಶ್‌ ತುಮ್ಮಿನಾಡ್‌, ದೀಪಕ್‌ ರೈ, ಸಾಧು ಕೋಕಿಲ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದಲ್ಲಿ ನಟಿಸಲಿದ್ದಾರೆ. ಹರ್ಷವರ್ಧನ್ ರಾಜ್ ಸಂಗೀತ, ವೀನಸ್ ನಾಗರಾಜ್ ಮೂರ್ತಿ ಅವರ ಛಾಯಾಗ್ರಹಣ ಜಸ್ಟ್ ಪಾಸ್ ಚಿತ್ರಕ್ಕಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಸಂಪುಟಕ್ಕೆ ಹೊಸ ಪೀಳಿಗೆ, ಹೊಸ ಆಲೋಚನೆ ಇರುವವರು ಸೇರಬೇಕು, ನಾವು ಎಷ್ಟು ದಿನ ಗೂಟ ಹೊಡೆದುಕೊಂಡು ಕೂರಲು ಸಾಧ್ಯ'?: ಡಿ ಕೆ ಶಿವಕುಮಾರ್

ಕೃಷಿ ಭೂಮಿ ಸೇರಿದಂತೆ ಎಲ್ಲಾ ಸ್ವತ್ತಿಗೂ ಸ್ವಯಂ ಚಾಲಿತ ಮ್ಯುಟೇಷನ್‌: ಕಂದಾಯ ಸಚಿವ ಕೃಷ್ಣಬೈರೇಗೌಡ

ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ: ವಯೋಮಿತಿ 5 ವರ್ಷ ಸಡಿಲಿಕೆ; ಸಮಸ್ಯೆಗೆ ಬಿಜೆಪಿಯೇ ಕಾರಣ ಎಂದ CM

'ದೇಶದ ಘನತೆಗೆ ಮಾಡಿದ ಭೀಕರ ದ್ರೋಹ': ಕಾಂಗ್ರೆಸ್ಸಿಗರ ಅರೆಬೆತ್ತಲೆ ಪ್ರತಿಭಟನೆಗೆ ಜಡ್ಜ್‌ಗಳು ಸೇರಿ 270 ನಿವೃತ್ತ ಅಧಿಕಾರಿಗಳ ಖಂಡನೆ!

T20 World Cup 2026: ಬ್ರೂಕ್ ಭರ್ಜರಿ ಶತಕ; ಪಾಕಿಸ್ತಾನ ವಿರುದ್ಧ ಗೆದ್ದು ಬೀಗಿದ ಇಂಗ್ಲೆಂಡ್​

SCROLL FOR NEXT