ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಿನಿಮಾ ಸುದ್ದಿ

ಗರ್ಭಿಣಿ ಪತ್ನಿಯರ ಜೊತೆ ಯೂಟ್ಯೂಬರ್ ಅರ್ಮಾನ್ ಮಲಿಕ್ ಫೋಟೋ ಶೇರ್: ವ್ಲಾಗರ್ ಕಾಲೆಳೆದ ನೆಟ್ಟಿಗರು!

ಯೂಟ್ಯೂಬ್ ವ್ಲಾಗರ್ ಅರ್ಮಾನ್ ಮಲಿಕ್ ತಮ್ಮ ಇನ್ ಸ್ಟಾಗ್ರಾಂನಲ್ಲಿ ಹೊಸ ಫೋಟೋವೊಂದನ್ನು ಪೋಸ್ಟ್ ಮಾಡಿದ್ದು ಈ ಫೋಟೋಗೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಕಾಮೆಂಟ್‌ಗಳು ಬರುತ್ತಿವೆ.

ಅರ್ಮಾನ್ ಮಲಿಕ್ ಹಾಗೂ ಪತ್ನಿಯರು
Vishwanath S
Updated On : 12 Dec 2022, 3:37 pm

ಯೂಟ್ಯೂಬ್ ವ್ಲಾಗರ್ ಅರ್ಮಾನ್ ಮಲಿಕ್ ತಮ್ಮ ಇನ್ ಸ್ಟಾಗ್ರಾಂನಲ್ಲಿ ಹೊಸ ಫೋಟೋವೊಂದನ್ನು ಪೋಸ್ಟ್ ಮಾಡಿದ್ದು ಈ ಫೋಟೋಗೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಕಾಮೆಂಟ್‌ಗಳು ಬರುತ್ತಿವೆ. 

ಕಂಟೆಂಟ್ ಕ್ರಿಯೇಟರ್ ಇತ್ತೀಚೆಗೆ ತನ್ನ ಇಬ್ಬರು ಪತ್ನಿಯರೊಂದಿಗೆ ಫೋಟೋ ಆಲ್ಬಮ್ ಅನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಇಬ್ಬರೂ ಗರ್ಭಿಣಿಯಾಗಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.

ಫೋಟೋದಲ್ಲಿ ಅರ್ಮಾನ್ ತನ್ನ ಪತ್ನಿಯರಾದ ಕೃತಿಕಾ ಮತ್ತು ಪಾಯಲ್ ಅವರೊಂದಿಗೆ ಕಿತ್ತಳೆ ಬಣ್ಣದ ಶರ್ಟ್ ಧರಿಸಿದ್ದಾರೆ. ಇನ್ನು ಇಬ್ಬರು ಪತ್ನಿಯರು ಬೇಬಿ ಬಂಪ್ ಪೋಸ್ ನೀಡಿದ್ದಾರೆ. ಆದರೆ ಇದು ಯಾಕೆ ನೆಟ್ಟಿಗರಿಗೆ ರುಚಿಸಿದಂತೆ ಕಾಣುತ್ತಿಲ್ಲ. ಹೀಗಾಗಿ ಅರ್ಮಾನ್ ಮಲಿಕ್ ನನ್ನು ಟ್ರೋಲ್ ಮಾಡುತ್ತಿದ್ದಾರೆ.

Advertisement

Advertisement

ಇದಕ್ಕೆ ನೆಟ್ಟಿಗನೊಬ್ಬ ನನಗೆ ಈ ಫೋಟೋ ನೋಡಿ ಫುಲ್ ಶಾಕ್ ಆಗಿದೆ. ಇಬ್ಬರು ಹೇಗೆ ಒಂದೇ ಬಾರಿ ಹೇಗೆ ಪ್ರಗ್ನೆಂಟ್ ಆಗಲು ಸಾಧ್ಯ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ನೀನು ಕ್ರಿಕೆಟ್ ತಂಡವನ್ನು ರೆಡಿ ಮಾಡುತ್ತಿದ್ದೀಯ ಎಂದು ಕೇಳಿದ್ದಾರೆ. 

ಆಂಧ್ರ ಪ್ರದೇಶ ಮೂಲದ ಅರ್ಮಾನ್ ಮಲಿಕ್ ಸೋಷಿಯಲ್​ ಮಿಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದು ಇನ್ಸ್ಟಾಗ್ರಾಮ್​ನಲ್ಲಿ 1.5 ಮಿಲಿಯನ್ ಹಾಗು ಯೂಟ್ಯೂಬ್​ನಲ್ಲಿ 2 ಮಿಲಿಯನ್​ ಫಾಲೋರ್ಸ್ ಹೊಂದಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement