ಪ್ರಣತಿ 
ಸಿನಿಮಾ ಸುದ್ದಿ

'ಜಸ್ಟ್ ಪಾಸ್' ನಲ್ಲಿ ಶ್ರೀ ಮಹಾದೇವ್ ಗೆ ಬ್ರಹ್ಮಗಂಟು ನಟಿ ಪ್ರಣತಿ ನಾಯಕಿ!

ಬ್ರಹ್ಮಗಂಟು' ಧಾರಾವಾಹಿಯಲ್ಲಿ ನಟಿಸಿ ಫೇಮಸ್ ಆಗಿರುವ ಪ್ರಣತಿ ಅವರು 'ಜಸ್ಟ್ ಪಾಸ್‌' ಸಿನಿಮಾದಲ್ಲಿ ಶ್ರೀ ಎದುರು ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಜಸ್ಟ್ ಪಾಸ್‌' ಸಿನಿಮಾಕ್ಕೆ ಹೊಸ ನಟಿಯೇ ಬೇಕೆಂದು ಚಿತ್ರತಂಡ ಹುಡುಕಾಟ ನಡೆಸಿತ್ತು. ಅಂತೆಯೇ, ಅವರಿಗೆ ಹೊಸ ಪ್ರತಿಭೆ ಪ್ರಣತಿ ಸಿಕ್ಕಿದೆ. 'ಡಾನ್ಸ್ ಕರ್ನಾಟಕ ಡಾನ್ಸ್', 'ಫ್ಯಾಮಿಲಿ ವಾರ್ ಸೀಸನ್ 2' ಶೋಗಳಲ್ಲಿ ರನ್ನರ್ ಅಪ್ ಆಗಿದ್ದ ಪ್ರಣತಿ, 'ಬ್ರಹ್ಮಗಂಟು' ಧಾರಾವಾಹಿಯಲ್ಲೂ ನಟಿಸಿ ಮನೆ ಮಾತಾಗಿದ್ದಾರೆ.

ಪ್ರಣತಿ

ಇದೀಗ 'ಜಸ್ಟ್ ಪಾಸ್' ಚಿತ್ರದ ಮೂಲಕ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಬ್ರಹ್ಮಗಂಟು' ಧಾರಾವಾಹಿಯಲ್ಲಿ ನಟಿಸಿ ಫೇಮಸ್ ಆಗಿರುವ ಪ್ರಣತಿ ಅವರು 'ಜಸ್ಟ್ ಪಾಸ್‌' ಸಿನಿಮಾದಲ್ಲಿ ಶ್ರೀ ಎದುರು ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಕೆ ಎಂ ರಘುರಾಮ್ ನಿರ್ದೇಶನದಲ್ಲಿ ಪ್ರಣತಿ ಶ್ರೀಗಳಿಗೆ ಜೋಡಿಯಾಗಲಿದ್ದಾರೆ. ಪ್ರಮುಖ ತಾರಾಗಣ ಮತ್ತು ಇತರ ಕಲಾವಿದರನ್ನು ಅಂತಿಮಗೊಳಿಸಿರುವ ನಿರ್ಮಾಪಕರು ಡಿಸೆಂಬರ್ 14 ರಂದು ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಲು ಯೋಜಿಸುತ್ತಿದ್ದಾರೆ.    

ರಾಯ್ಸ್ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ನಲ್ಲಿ ಶಶಿಧರ್ ಕೆವಿ ಮತ್ತು ಶ್ರೀಧರ್ ವಿಕೆ ನಿರ್ಮಿಸಿರುವ ಜಸ್ಟ್ ಪಾಸ್ ಸಿನಿಮಾದಲ್ಲಿ ರಂಗಾಯಣ ರಘು, ಸಾಧುಕೋಕಿಲ, ಸುಚೇಂದ್ರ ಪ್ರಸಾದ್, ನವೀನ್ ಡಿ ಪಡಿಕ್ಕಲ್, ಪ್ರಕಾಶ್ ತೂಮಿನಾಡ್, ದೀಪಕ್ ರೈ, ಅರ್ಪಿತಾ, ಚಂದು ಶ್ರೀ, ಯಶಿಕಾ, ವಿಶ್ವಾಸ್, ನಿಖಿಲ್, ಗಗನ್, ತಾರಾಗಣದಲ್ಲಿದ್ದಾರೆ.  ಹರ್ಷವರ್ಧನ್ ರಾಜ್ ಅವರ ಸಂಗೀತವಿರುವ ಜಸ್ಟ್ ಪಾಸ್ ಚಿತ್ರಕ್ಕೆ ವೀನಸ್ ನಾಗರಾಜ ಮೂರ್ತಿ ಅವರ ಛಾಯಾಗ್ರಹಣವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

ಬಾಲಿವುಡ್ ನಟ ನಾನಾ ಪಾಟೇಕರ್ ನಿಧನಕ್ಕೆ ಬಿಗ್ ಟ್ವಿಸ್ಟ್: ಅಸಹಜ ಸಾವು ಕೇಸ್ ದಾಖಲಿಸಿದ ಗೋವಾ ಪೊಲೀಸರು!

ರೈಲಿನಲ್ಲಿ 'ನನ್ನ ಸುತ್ತಲೂ ಬರೀ ಪುರುಷರೇ ಇದ್ದಾರೆ': ಆಂಧ್ರದಲ್ಲಿ ಶವವಾಗಿ ಪತ್ತೆಯಾದ ಡ್ಯಾನ್ಸರ್‌ ಕೊನೆಯ ಸಂದೇಶ!

Sting operation ಮೂಲಕ ನಿಮ್ಮನ್ನು ಸಿಲುಕಿಸಲು ಯತ್ನಿಸಿರುವುದು ನಿಜವೇ ಆಗಿದ್ದರೆ ತನಿಖೆಗೆ ಆದೇಶಿಸಿ: ಸಿಎಂ ಡಿಕೆ.ಶಿವಕುಮಾರ್'ಗೆ HDK ಸವಾಲು

ಮತ ಕಳ್ಳತನದಿಂದಲೇ ಮೋದಿ ಪ್ರಧಾನಿಯಾಗಿದ್ದು, ಗೆಲ್ಲಲಾಗದ ರಾಜ್ಯಗಳಲ್ಲೂ BJP ಗೆಲುವು: ಅಭಿಜೀತ್ ದೀಪ್ಕೆ