ವೇದ ಸಿನಿಮಾ ಸ್ಟಿಲ್ 
ಸಿನಿಮಾ ಸುದ್ದಿ

ಶಿವಣ್ಣನ ಜೊತೆ ಸ್ಕ್ರೀನ್ ಶೇರ್ ಮಾಡಲು ಯಾವಾಗಲೂ ಸಂತಸವಾಗುತ್ತದೆ: ಚೆಲುವರಾಜ್

ಸುಮಾರು 15 ವರ್ಷಗಳ ಸಿನಿಮಾ ಪ್ರಯಾಣದಲ್ಲಿ ಹೆಚ್ಚಾಗಿ ಧಾರಾವಾಹಿಗಳಲ್ಲಿ ನಟಿಸಿರುವ ಚೆಲುವರಾಜ್, ಗೀತಾ, ಫೈಟರ್ ಮತ್ತು  ಪೈಲ್ವಾನ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಭಜರಂಗಿ ನನ್ನ ವೃತ್ತಿ ಜೀವನದ ಮೈಲಿಗಲ್ಲಾಯಿತು.

ಸ್ಯಾಂಡಲ್ ವುಡ್ ನಲ್ಲಿ ಬ್ಯಾಡ್ ಗೈ ಎಂದೇ ಪ್ರಸಿದ್ಧವಾಗಿರುವ ಚೆಲುವರಾಜ್ ಹಲವು ಸಿನಿಮಾಗಳಲ್ಲಿ ಖಳನಾಯಕನಾಗಿ ನಟಿಸಿದ್ದಾರೆ. ಭಜರಂಗಿ-2 ಸಿನಿಮಾದಲ್ಲಿ ಆರಕ ಪಾತ್ರದಲ್ಲಿ ನಟಿಸಿದ್ದ ಚೆಲುವರಾಜ್ ಶಿವಣ್ಣ ನಟನೆಯ 125ನೇ ಸಿನಿಮಾ ವೇದದಲ್ಲಿ ಮತ್ತೊಮ್ಮೆ ತೆರೆ ಹಂಚಿಕೊಂಡಿದ್ದಾರೆ.

ಸುಮಾರು 15 ವರ್ಷಗಳ ಸಿನಿಮಾ ಪ್ರಯಾಣದಲ್ಲಿ ಹೆಚ್ಚಾಗಿ ಧಾರಾವಾಹಿಗಳಲ್ಲಿ ನಟಿಸಿರುವ ಚೆಲುವರಾಜ್, ಗೀತಾ, ಫೈಟರ್ ಮತ್ತು  ಪೈಲ್ವಾನ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಭಜರಂಗಿ ನನ್ನ ವೃತ್ತಿ ಜೀವನದ ಮೈಲಿಗಲ್ಲಾಯಿತು, ಆ ಸಿನಿಮಾ ನಂತರ ನನಗೆ ಬೇರೆ ಭಾಷೆಗಳಿಂದಲೂ ಅವಕಾಶ ಬರಲು ಶುರುವಾಯಿತು.

ವೇದ ಸಿನಿಮಾದಲ್ಲಿ ತಮ್ಮ ಬೀರ ಪಾತ್ರದ ಬಗ್ಗೆ ಕೆಲವು ವಿವರಗಳನ್ನು ಹಂಚಿಕೊಂಡಿದ್ದಾರೆ. ಇದು ಎರಡು ಹಳ್ಳಿಗಳ ನಡುವೆ ನಡೆಯುವ ಕಥೆಯಾಗಿದೆ, ಚಿತ್ರದಲ್ಲಿ ನನ್ನದು ಖಳನಾಯಕನ ಪಾತ್ರ, ಇದರಲ್ಲಿ ವಿಭಿನ್ನವಾಗಿ ಹೊರತರಲು ಪ್ರಯತ್ನಿಸಿದ್ದೇನೆ. ಜೊತೆಗೆ ಶಿವಣ್ಣ ಅವರ ಜೊತೆ ನಟಿಸಲು ನನಗೆ ಯಾವಾಗಲೂ ಖುಷಿಯಾಗುತ್ತದೆ ಎಂದು ಹೇಳಿದ್ದಾರೆ.

ಚೆಲುವರಾಜ್ ಅವರಲ್ಲದೆ, ವೇದಾ ಚಿತ್ರದಲ್ಲಿ ವಿನಯ್ ಬಿದ್ದಪ್ಪ, ಪ್ರಸನ್ನ ಮತ್ತು ಸಂಜಯ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಗೀತಾ ಪಿಕ್ಚರ್ಸ್ ಮತ್ತು ಜೀ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ತಯಾರಾದ ವೇದಾ, ಉಮಾಶ್ರೀ, ಗಾನವಿ ಲಕ್ಷ್ಮಣ್ ಮತ್ತು ಅದಿತಿ ಸಾಗರ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಚಿತ್ರ ಡಿಸೆಂಬರ್ 23 ರಂದು ತೆರೆಗೆ ಬರಲಿದ್ದು, ಅರ್ಜುನ್ ಜನ್ಯ ಅವರ ಸಂಗೀತ ಮತ್ತು ಜೆ ಸ್ವಾಮಿ ಅವರ ಛಾಯಾಗ್ರಹಣವಿದೆ. ಏತನ್ಮಧ್ಯೆ, ಗರಡಿ, ಗರುಡ ಪುರಾಣ ಮತ್ತು ಇನ್ನೂ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ.  ಚೆಲುವರಾಜ್ ತೆಲುಗು ಬಯೋಪಿಕ್‌ನಲ್ಲಿ ನಾಯಕನಾಗಿ ಚೊಚ್ಚಲ ಬಾರಿಗೆ ನಟಿಸಲು  ಸಜ್ಜಾಗುತ್ತಿದ್ದಾರೆ.

ತೆಲುಗು ಚಿತ್ರದ ನಿರ್ಮಾಪಕರು ಭಜರಂಗಿಯಲ್ಲಿ ನನ್ನ ಪಾತ್ರವನ್ನು ನೋಡಿ ಈ ಪಾತ್ರಕ್ಕಾಗಿ ನನ್ನನ್ನು ಸಂಪರ್ಕಿಸಿದರು. ಈ ಚಿತ್ರದ ಬಗ್ಗೆ ಹೆಚ್ಚಿನ ವಿವರಗಳು ಶೀಘ್ರದಲ್ಲೇ ಬಹಿರಂಗಗೊಳ್ಳಲಿವೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

SCROLL FOR NEXT