ನಿರ್ದೇಶಕ ಕುಶಾಲ್ ಗೌಡ-ಧನಂಜಯ್ 
ಸಿನಿಮಾ ಸುದ್ದಿ

'ಜಮಾಲಿಗುಡ್ಡ' ನನ್ನ ನಿಜ ಜೀವನದ ಅನುಭವವನ್ನು ಆಧರಿಸಿದೆ: ನಿರ್ದೇಶಕ ಕುಶಾಲ್ ಗೌಡ

ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ ನಟ ಧನಂಜಯ್‌ ಜಾನರ್ ನ ಚಿತ್ರವಲ್ಲ. ಈ ಚಿತ್ರ ವಿಭಿನ್ನವಾಗಿದ್ದು ನನ್ನ ಜೀವನದ ಅನುಭವವನ್ನು ಆಧರಿಸಿದೆ ಎಂದು ಪತ್ರಕರ್ತ-ನಿರ್ದೇಶಕ ಕುಶಾಲ್ ಗೌಡ ತಿಳಿಸಿದ್ದಾರೆ.

ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ ನಟ ಧನಂಜಯ್‌ ಜಾನರ್ ನ ಚಿತ್ರವಲ್ಲ. ಈ ಚಿತ್ರ ವಿಭಿನ್ನವಾಗಿದ್ದು ನನ್ನ ಜೀವನದ ಅನುಭವವನ್ನು ಆಧರಿಸಿದೆ ಎಂದು ಪತ್ರಕರ್ತ-ನಿರ್ದೇಶಕ ಕುಶಾಲ್ ಗೌಡ ತಿಳಿಸಿದ್ದಾರೆ. 

ಕನ್ನಡಕ್ಕಾಗಿ ಒಂದನ್ನು ಒತ್ತಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಕುಶಾಲ್ ಗೌಡ ಅವರು ಚಿತ್ರದ ಬಗ್ಗೆ ಮಾತನಾಡಿದ್ದಾರೆ. 2016ರಲ್ಲಿ ನನ್ನ ಸ್ನೇಹಿತ ನನ್ನನ್ನು ಸ್ಪಾಗೆ ಕರೆದುಕೊಂಡು ಹೋದ ಘಟನೆ ನಡೆದಿತ್ತು. ನಿಶ್ಯಬ್ದ ವಾತಾವರಣ, ಜಗಮಗಿಸುವ ದೀಪಗಳು, ಬುದ್ಧನ ಪ್ರತಿಮೆ, ರೆಟ್ರೊ ಹಾಡುಗಳು ಮತ್ತು ವಿವಿಧ ಬೆಳಗಿದ ಮೇಣದಬತ್ತಿಗಳು ನನ್ನನ್ನು ಬೇರೆಯದೇ ಪ್ರಪಂಚಕ್ಕೆ ಕರೆದೊಯ್ದಿತ್ತು. ಈ ಭಾವನೆಗಳೆ ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡಕ್ಕೆ ಆಧಾರವಾಗಿದೆ. ಇದು ಪ್ರಯಾಣಾಧಾರಿತ ಚಲನಚಿತ್ರವಾಗಿದೆ ಎಂದರು. 

ಘಟನೆ ನಡೆದಿರುವುದು 2016ರಲ್ಲಿಯಾದರೂ, ಚಿತ್ರವು 1990ರ ದಶಕದಲ್ಲಿ ನಡೆದಿದೆ ಎಂಬಂತೆ ತೋರಿಸಲಾಗಿದೆ. ನಾನು ಭಾವನಾತ್ಮಕ ಕಥೆಯನ್ನು ಹೇಳಲು ಬಯಸುತ್ತೇನೆ. 90ರ ದಶಕದ ಅವಧಿಯಲ್ಲಿ ಜನರನ್ನು ಸಂಪರ್ಕಿಸಲು ನಮ್ಮಲ್ಲಿ ಹೆಚ್ಚು ಉಪಕರಣಗಳು ಇಲ್ಲದಿರುವುದನ್ನು ಉತ್ತಮವಾಗಿ ತೋರಿಸಿದ್ದೇನೆ ಎಂದು ನಾನು ಭಾವಿಸಿದೆ. ನಾನು ಛಾಯಾಗ್ರಾಹಕನೂ ಆಗಿರುವುದರಿಂದ ಕರ್ನಾಟಕದ ನನ್ನ ನೆಚ್ಚಿನ ಸ್ಥಳಗಳಲ್ಲಿ ಒಂದಾಗಿರುವ ಮಲೆನಾಡಿನಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗಿದ್ದು ಈ ಘಟನೆ ಗೋಕರ್ಣದಲ್ಲಿ ನಡೆಯುತ್ತದೆ ಎಂದರು. 

ಪತ್ರಕರ್ತನಾಗಿ ನನ್ನ ಅನುಭವ ಮತ್ತು ಓದುವ ಹವ್ಯಾಸವೇ ನಿರ್ದೇಶಕನಾಗಲು ಕಾರಣವಾಯಿತು. ನಾನು ಉತ್ತಮ ಗಾಯಕ, ಹೀಗಾಗಿ ಅದು ನನ್ನನ್ನು ಸಾಹಿತ್ಯವನ್ನು ಬರೆಯಲು ಪ್ರೇರೇಪಿಸಿತು. ನನ್ನ ಪ್ರತಿಭೆಗಳು ಸಿನಿಮಾದಲ್ಲಿ ದೊಡ್ಡ ಭಾಗವಾಗುತ್ತಿರುವುದಕ್ಕೆ ನನಗೆ ಖುಷಿಯಾಗಿದೆ ಎಂದು ಕುಶಾಲ್ ಗೌಡ ಹೇಳಿದ್ದಾರೆ. ಇನ್ನು ಧನಂಜಯ್ ಅವರಂತಹ ಉತ್ತಮ ನಟರೊಂದಿಗೆ ಕೆಲಸ ಹರ್ಷ ವ್ಯಕ್ತಪಡಿಸುತ್ತಾರೆ ಚಿತ್ರ ನಿರ್ದೇಶಕರು, ರಾಟೆಯಲ್ಲಿನ ಅವರ ಅಭಿನಯ ನನಗೆ ಇಷ್ಟವಾಯಿತು. ಇದು ಅವರ ವೃತ್ತಿಜೀವನದ ಅತ್ಯುತ್ತಮ ನಟನೆಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ. 

ಧನಂಜಯ್ ಅವರಲ್ಲದೆ, ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡದಲ್ಲಿ ಅದಿತಿ ಪ್ರಭುದೇವ, ಯಶ್ ಶೆಟ್ಟಿ, ಪ್ರಕಾಶ್ ಬೆಳವಾಡಿ, ಬಾಲ ಕಲಾವಿದರಾದ ಪ್ರಣಯ, ಭಾವನಾ ರಾಮಣ್ಣ, ಮತ್ತು ತ್ರಿವೇಣಿ, ನಂದಗೋಪಾಲ್ ತಾರಾಗಣದಲ್ಲಿದ್ದಾರೆ.
ಕಾರ್ತಿಕ್ ಮತ್ತು ಹರೀಶ್ ಕೊಮ್ಮೆ ಅವರು ಛಾಯಾಗ್ರಹಣ ಮತ್ತು ಸಂಕಲನವನ್ನು ಮಾಡಿದ್ದಾರೆ. ಚಿತ್ರದ ಹಾಡುಗಳನ್ನು ಅರ್ಜುನ್ ಜನ್ಯ ಸಂಯೋಜಿಸಿದ್ದರೆ ಅನೂಪ್ ಸೀಳಿನ್ ಹಿನ್ನೆಲೆ ಸಂಗೀತ ನೀಡಿದ್ದಾರೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT