ನಟ ಡ್ಯಾನಿಶ್ ಸೇಟ್ 
ಸಿನಿಮಾ ಸುದ್ದಿ

ಮೋಹನ್‌ಲಾಲ್ ನಟನೆಯ ಮಲಯಾಳಂ ಸಿನಿಮಾದಲ್ಲಿ ಕನ್ನಡಿಗ ಡ್ಯಾನಿಶ್ ಸೇಟ್ ಅಭಿನಯ

ಮುಂಬರುವ ಮೋಹನ್‌ಲಾಲ್-ಲಿಜೋ ಜೋಸ್ ಪೆಲ್ಲಿಸ್ಸೆರಿ ಅವರ ಚಿತ್ರದ ಶೀರ್ಷಿಕೆಯನ್ನು ಮಲೈಕೊಟ್ಟೈ ವಾಲಿಬನ್ ಎಂದು ಚಿತ್ರತಂಡ ಘೋಷಿಸಿದೆ. ಮೋಹನ್‌ಲಾಲ್ ಅವರ ಪೋಸ್ಟ್ ಅನ್ನು ಕನ್ನಡದ ಜನಪ್ರಿಯ ನಟ ಮತ್ತು ಸ್ಟ್ಯಾಂಡಪ್ ಕಾಮಿಡಿಯನ್ ಡ್ಯಾನಿಶ್ ಸೇಟ್ ಅವರು ರೀಟ್ವೀಟ್ ಮಾಡಿದ್ದು, ಚಿತ್ರದಲ್ಲಿ ಡ್ಯಾನಿಶ್ ಇರುವುದನ್ನು ಖಚಿತಪಡಿಸಿದೆ.

ಮುಂಬರುವ ಮೋಹನ್‌ಲಾಲ್-ಲಿಜೋ ಜೋಸ್ ಪೆಲ್ಲಿಸ್ಸೆರಿ ಅವರ ಚಿತ್ರದ ಶೀರ್ಷಿಕೆಯನ್ನು ಮಲೈಕೊಟ್ಟೈ ವಾಲಿಬನ್ ಎಂದು ಚಿತ್ರತಂಡ ಘೋಷಿಸಿದೆ. ಮೋಹನ್‌ಲಾಲ್ ಅವರ ಪೋಸ್ಟ್ ಅನ್ನು ಕನ್ನಡದ ಜನಪ್ರಿಯ ನಟ ಮತ್ತು ಸ್ಟ್ಯಾಂಡಪ್ ಕಾಮಿಡಿಯನ್ ಡ್ಯಾನಿಶ್ ಸೇಟ್ ಅವರು ರೀಟ್ವೀಟ್ ಮಾಡಿದ್ದು, ಚಿತ್ರದಲ್ಲಿ ಡ್ಯಾನಿಶ್ ಇರುವುದನ್ನು ಖಚಿತಪಡಿಸಿದೆ.

'ನನ್ನ 2023ನೇ ವರ್ಷ ಲೆಜೆಂಡರಿ ಮೋಹನ್‌ಲಾಲ್ ಮತ್ತು ಜೀನಿಯಸ್ ಲಿಜೋ ಜೋಸ್ ಪೆಲ್ಲಿಸ್ಸೆರಿ ಅವರೊಂದಿಗೆ ಪ್ರಾರಂಭವಾಗುತ್ತದೆ. ಇಡೀ ಸಿಬ್ಬಂದಿಯೊಂದಿಗೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ' ಎಂದು ಡ್ಯಾನಿಶ್ ಬರೆದುಕೊಂಡಿದ್ದಾರೆ.

ಹಂಬಲ್ ಪೊಲಿಟಿಷಿಯನ್ ನೊಗರಾಜ್, ಫ್ರೆಂಚ್ ಬಿರಿಯಾನಿ ಮತ್ತು ಒನ್ ಕಟ್ ಟು ಕಟ್‌ನಂತಹ ಹಲವಾರು ಕನ್ನಡ ಚಿತ್ರಗಳಲ್ಲಿ ಡ್ಯಾನಿಶ್ ಅವರು ಗಮನಾರ್ಹ ಪಾತ್ರಗಳನ್ನು ಮಾಡಿದ್ದಾರೆ. ಮಲೈಕೊಟ್ಟೈ ವಾಲಿಬನ್ ಸಿನಿಮಾ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಪ್ರವೇಶಿಸುತ್ತಿದ್ದಾರೆ.

ನಿರ್ಮಾಪಕರು ವಿದ್ಯುತ್ ಜಮ್ವಾಲ್, ರಾಧಿಕಾ ಆಪ್ಟೆ ಮತ್ತು ರಾಜ್‌ಪಾಲ್ ಯಾದವ್ ಅವರಂತಹ ಮಲಯಾಳಂ ಅಲ್ಲದ ನಟರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂಬ ಊಹಾಪೋಹಗಳು ಹರಿದಾಡುತ್ತಿದ್ದು, ಚಿತ್ರತಂಡ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಪಿಎಸ್ ರಫೀಕ್ ಚಿತ್ರಕಥೆ ಬರೆದಿರುವ ಮಲೈಕೊಟ್ಟೈ ವಾಲಿಬನ್ ಸಿನಿಮಾದಲ್ಲಿ ನಟ ಮೋಹನ್ ಲಾಲ್ ಅವರು ಕುಸ್ತಿಪಟುವಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಚಿತ್ರತಂಡ ಸದ್ಯ ರಾಜಸ್ಥಾನದಲ್ಲಿ ಲೊಕೇಶನ್ ಹುಡುಕುವಲ್ಲಿ ನಿರತವಾಗಿದ್ದು, ಚಿತ್ರದ ಬಹುತೇಕ ಚಿತ್ರೀಕರಣ ಅಲ್ಲಿಯೇ ನಡೆಯಲಿದೆ. ತಾಂತ್ರಿಕ ತಂಡದಲ್ಲಿ ಹಿರಿಯ ಛಾಯಾಗ್ರಾಹಕ ಮಧು ನೀಕಂದನ್, ಸಂಗೀತ ನಿರ್ದೇಶಕ ಪ್ರಶಾಂತ್ ಪಿಳ್ಳೈ ಮತ್ತು ಸಂಕಲನಕಾರ ದೀಪು ಜೋಸೆಫ್ ಇದ್ದಾರೆ.

ಜಾನ್ & ಮೇರಿ ಕ್ರಿಯೇಟಿವ್, ಅಮೆನ್ ಮೂವಿ ಮೊನಾಸ್ಟರಿ, ಸೆಂಚುರಿ ಫಿಲ್ಮ್ಸ್ ಮತ್ತು ಮ್ಯಾಕ್ಸ್ ಲ್ಯಾಬ್ ಜಂಟಿಯಾಗಿ ಚಿತ್ರಕ್ಕೆ ಬೆಂಬಲ ನೀಡುತ್ತಿದ್ದು, ಮುಂದಿನ ವರ್ಷ ಜನವರಿಯಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ