ನಿತ್ಯಾನಂದ 
ಸಿನಿಮಾ ಸುದ್ದಿ

ನಿತ್ಯಾನಂದ ನನಗಿಷ್ಟ, ಅವರನ್ನೇ ಮದುವೆ ಆಗಲು ಬಯಸಿದ್ದೇನೆ: ಚರ್ಚೆಗೆ ಗ್ರಾಸವಾಯ್ತು ನಟಿಯ ಹೇಳಿಕೆ

ಬಹುಭಾಷಾ ನಟಿ ಪ್ರಿಯಾ ಆನಂದ್ ಅವರು ಮದುವೆ ಬಗ್ಗೆ ನೀಡಿರುವ ಹೇಳಿಕೆಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ಗ್ರಾಸವಾಗಿದೆ. 

ಬೆಂಗಳೂರು: ಬಹುಭಾಷಾ ನಟಿ ಪ್ರಿಯಾ ಆನಂದ್ ಅವರು ಮದುವೆ ಬಗ್ಗೆ ನೀಡಿರುವ ಹೇಳಿಕೆಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ಗ್ರಾಸವಾಗಿದೆ. ಇತ್ತೀಚೆಗೆ ಯೂಟ್ಯೂಬ್‌ ಚಾನೆಲ್‌ನ ಸಂದರ್ಶನವೊಂದರಲ್ಲಿ ಮಾತನಾಡಿರುವ ಪ್ರಿಯಾ, ‘ನಾನು ನಿತ್ಯಾನಂದ ಸ್ವಾಮಿ ಅವರೊಂದಿಗೆ ಮದುವೆಯಾಗಬೇಕು ಎಂದು ಬಯಸುತ್ತಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.

ನಿತ್ಯಾನಂದನ ವಿರುದ್ಧ ಹಲವು ಆರೋಪಗಳು ಕೇಳಿಬಂದಿವೆ. ಆದರೂ ಅವರನ್ನು ಹಿಂಬಾಲಿಸುವ ಅಭಿಮಾನಿಗಳ ಸಂಖ್ಯೆ ದೊಡ್ಡದಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ನಿತ್ಯಾನಂದನ ಹೇಳಿಕೆಗಳನ್ನು ನಟಿ ಪ್ರಿಯಾ ಆನಂದ್ ಕೂಡ ಹಾಗಾಗೇ ಹಂಚಿಕೊಂಡಿದ್ದರು. ಈ ಕುರಿತು ಸಂದರ್ಶನದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ನಾನು ನಿತ್ಯಾನಂದ ಅವರನ್ನು ಮದುವೆಯಾಗಲು ಬಯಸಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.

ಪ್ರಿಯಾ ಆನಂದ್

ನಿತ್ಯಾನಂದ ವಿರುದ್ಧ ಹಲವು ಆರೋಪಗಳಿರಬಹುದು. ಆದರೆ, ಅವರನ್ನು ಅನೇಕರು ಇಷ್ಟಪಡುತ್ತಾರೆ. ಹಾಗಾದರೇ ಅವರಲ್ಲಿ ಏನಾದರೂ ವಿಶೇಷ ಗುಣ ಇರಬೇಕಾಲ್ಲವೇ ಎಂದು ಪ್ರಶ್ನಿಸಿರುವ ಪ್ರಿಯಾ, ನಾನು ಅವರೊಂದಿಗೆ ಮದುವೆಯಾದರೆ ಸರ್‌ನೇಮ್ ಕೂಡ ಬದಲಾಯಿಸಬೇಕಾಗಿಲ್ಲ. ನಮ್ಮಿಬ್ಬರ ಹೆಸರು ಒಂದೇ ರೀತಿ ಇದೆ’ ಎಂದು ಚಟಾಕಿ ಹಾರಿಸಿದ್ದಾರೆ. ಪ್ರಿಯಾ ಆನಂದ್ ಅವರ ಈ ಕಾಮೆಂಟ್ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ. ಆಕೆ ಜೋಕ್ ಹೇಳುತ್ತಿದ್ದಾರೆ ಎಂದು ಹಲವರು ಹೇಳುತ್ತಿದ್ದರೂ ಪ್ರಿಯಾ ಆನಂದ್ ಮಾತ್ರ ಇನ್ನೂ ಸ್ಪಷ್ಟನೆ ನೀಡಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್