ಸ್ಟೆಫಿ ಪಟೇಲ್ 
ಸಿನಿಮಾ ಸುದ್ದಿ

'ಲವ್‌ ಲಿ' ಚಿತ್ರದಲ್ಲಿ ವಸಿಷ್ಠ ಸಿಂಹಗೆ ನಾಯಕಿಯಾಗಿ ಸ್ಟೆಫಿ ಪಟೇಲ್ ಕನ್ನಡಕ್ಕೆ ಎಂಟ್ರಿ!

ಈಗಾಗಲೇ ತೆಲುಗಿನಲ್ಲಿ ತನ್ನದೇ ಛಾಪು ಮೂಡಿಸಿರುವ ಸ್ಟೆಫಿ ಪಟೇಲ್, ತಮಿಳಿನಲ್ಲಿ ಇನ್ನೂ ಬಿಡುಗಡೆಯಾಗದಿರುವ ಬಾರ್ಡರ್, ಚೈನೀಸ್-ಇಂಗ್ಲಿಷ್ ಚಿತ್ರ ಮತ್ತು ಮುಂಬರುವ ಹಿಂದಿ ಚಿತ್ರ ಹರಿ ಓಂ ಹರಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಈಗಾಗಲೇ ತೆಲುಗಿನಲ್ಲಿ ತನ್ನದೇ ಛಾಪು ಮೂಡಿಸಿರುವ ಸ್ಟೆಫಿ ಪಟೇಲ್, ತಮಿಳಿನಲ್ಲಿ ಇನ್ನೂ ಬಿಡುಗಡೆಯಾಗದಿರುವ ಬಾರ್ಡರ್, ಚೈನೀಸ್-ಇಂಗ್ಲಿಷ್ ಚಿತ್ರ ಮತ್ತು ಮುಂಬರುವ ಹಿಂದಿ ಚಿತ್ರ ಹರಿ ಓಂ ಹರಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಸ್ಟೆಫಿ ಪಟೇಲ್

ಲವ್ ಲಿ ಸಿನಿಮಾದಲ್ಲಿ ವಸಿಷ್ಠ ಸಿಂಹ ಗೆ ನಾಯಕಿಯಾಗುವ ಮೂಲಕ ಕನ್ನಡದಲ್ಲಿ ತಮ್ಮ ಅದೃಷ್ಟ ಪರಿಶೀಲಿಸಲು ಮುಂದಾಗಿದ್ದಾರೆ. ಮಿನಾ ಇಂಡಿಯಾ ಬ್ಯೂಟಿ ಪಿಜೆಂಟ್ (2018) ವಿಜೇತರಾದ ಸ್ಟೆಫಿ ಅವರು ಚೇತನ್ ಕೇಶವ್ ಅವರ ಈ ರೋಮ್ಯಾಂಟಿಕ್ ಥ್ರಿಲ್ಲರ್‌ನಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ.

ನಾನು ಕನ್ನಡ ಉದ್ಯಮದ ಬಗ್ಗೆ ಕೇಳಿದ್ದೇನೆ ಮತ್ತು ಕನ್ನಡ ಚಲನಚಿತ್ರಗಳ ಭಾಗವಾಗಲು ಎದುರು ನೋಡುತ್ತಿದ್ದೇನೆ ಎಂದು ಸ್ಟೆಪಿ ಹೇಳಿದ್ದಾರೆ. ಈ ಮೊದಲು ಕನ್ನಡದ ಹಲವು ಕಥೆಗಳು ಬಂದಿದ್ದವು, ಆದರೆ ಚೇತನ್ ಕೇಶವ್  ಅವರ ನಿರೂಪಣಾ ಶೈಲಿ ನನಗೆ ಹಿಡಿಸಿತು. ನನಗೆ ಲವ್ ಸ್ಟೋರಿಗಳನ್ನು ನಾನು ತುಂಬಾ ಇಷ್ಟ ಪಡುತ್ತೇನೆ, ಹೀಗಾಗಿ ಲವ್ ಲಿ ನನಗೆ ಕನ್ನಡ ಸಿನಿಮಾರಂಗದಲ್ಲಿ ಒಂದು ಉತ್ತಮ ಆರಂಭ ನೀಡುತ್ತದೆ ಎಂದು ಸ್ಟೆಫಿ ಹೇಳಿದ್ದಾರೆ.

ಲವ್ ಲಿಯಲ್ಲಿ ಕೆಲವು ಸಾಮಾಜಿಕ ಅನಿಷ್ಟಗಳನ್ನು ಎತ್ತಿ ತೋರಿಸುವ ಅಂಶಗಳನ್ನು ಸಹ ಹೊಂದಿದೆ.  ಮಫ್ತಿ ನರ್ತನ್‌ ಜತೆಗೆ ಕೆಲಸ ಮಾಡಿರುವ ಅನುಭವ ಇರುವ ಚೇತನ್‌ ಕೇಶವ್‌ ಈಗ ನೈಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಈ ಸಿನಿಮಾ ಮಾಡಲು ಹೊರಟಿದ್ದಾರೆ.  ರವೀಂದ್ರ ಕುಮಾರ್‌ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಹರೀಶ್‌ಕೊಂಬೆ ಕ್ಯಾಮೆರಾ, ಅನೂಪ್‌ ಸಿಳೀನ್‌ ಸಂಗೀತ ಸಂಯೋಜನೆ ಮಾಡಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT