ಸಿನಿಮಾ ಸುದ್ದಿ

ಮೆಲ್ಬರ್ನ್ ಭಾರತೀಯ ಚಿತ್ರೋತ್ಸವದಲ್ಲಿ ಕನ್ನಡದ 'ಪೆದ್ರೊ' ಸಿನಿಮಾ ಪ್ರದರ್ಶನ

Nagaraja AB

ಆಸ್ಟ್ರೇಲಿಯಾದ ಮೆಲ್ಬರ್ನ್ ಭಾರತೀಯ  ಚಿತ್ರೋತ್ಸವದಲ್ಲಿ ಕನ್ನಡದ 'ಪೆದ್ರೊ' ಸಿನಿಮಾ ಪ್ರದರ್ಶನಕ್ಕೆ ಸಜ್ಜಾಗಿದೆ. ಮಿತು ಬೌಮಿಕ್ ಲಾಂಗೆ ನೇತೃತ್ವದ 13ನೇ ಆವೃತ್ತಿಯ ಚಿತ್ರೋತ್ಸವ ಆಗಸ್ಟ್ 12 ರಿಂದ 20 ರವರೆಗೆ ನಡೆಯಲಿದೆ.  

ಈ ಚಿತ್ರೋತ್ಸವದಲ್ಲಿ 23 ಭಾಷೆಗಳ 100 ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ನಟೇಶ್ ಹೆಗ್ಡೆ ಚೊಚ್ಚಲ ನಿರ್ದೇಶನದ ರಿಷಭ್ ಶೆಟ್ಟಿ ಪ್ರೊಡಕ್ಷನ್ ಹೌಸ್ ಸಹಕಾರದ ಪೆಡ್ರೋ ಸಿನಿಮಾ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಗಮನ ಸೆಳೆದ ಕನ್ನಡದ ಚಿತ್ರಗಳಲ್ಲಿ ಒಂದಾಗಿದೆ. 

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ವೇದಿಕೆಗಳಲ್ಲಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮದ್ಯ ವ್ಯಸನಿ ಪೆದ್ರೊ ದಕ್ಷಿಣ ಭಾರತದ ಯಾವುದೇ ಸೌಕರ್ಯಗಳಿಲ್ಲದ ಹಳ್ಳಿಯೊಂದರಲ್ಲಿ ವಾಸವಾಗಿರುತ್ತಾನೆ. ಆಕಸ್ಮಿಕವಾಗಿ ತನ್ನ ಜಮೀನು ಮಾಲೀಕನಿಗೆ ಸೇರಿದ ಹಸುವೊಂದನ್ನು ಕೊಲ್ಲುವ ಈತ ಭಯ, ಭೀತಿಯಿಂದ ಹಳ್ಳಿಯನ್ನು ತೊರೆಯುತ್ತಾನೆ. ನಂತರ ಪೆದ್ರೊ ತನ್ನ ಹಳ್ಳಿಗೆ ಮರಳುತ್ತಾನೆ. ಆದರೆ, ಪವಿತ್ರವಾದ ಹಸುವನ್ನು ಕೊಂದ ಹಿನ್ನೆಲೆಯಲ್ಲಿ ಹಳ್ಳಿಯ ಜನರು ಆತನನ್ನು ಸ್ವೀಕರಿಸುವುದಿಲ್ಲ. ಇದು ಈ ಸಿನಿಮಾದ ಕಥೆಯಾಗಿದೆ.

ನಟೇಶ್ ಹೆಗ್ಡೆ ಅವರ ಸ್ವಂತ ತಂದೆ ಗೋಪಾಲ್ ಹೆಗ್ಡೆ ತಂದೆಯ ಪಾತ್ರ ನಿರ್ವಹಿಸಿದ್ದಾರೆ. ರಾಮಕೃಷ್ಣ ಭಟ್ ದುಂಡಿ, ರಾಜ್ ಬಿ ಶೆಟ್ಟಿ, ಮೆದಿನಿ ಕೆಳಮನೆ ಮತ್ತು ನಾಗರಾಜ್ ಹೆಗ್ಡೆ ಮತ್ತಿತರ ತಾರಾಗಣವಿದೆ. 

SCROLL FOR NEXT